ಇತ್ತೀಚಿನ ಸುದ್ದಿ
ಬೆಳಗಾವಿ ಜಿಲ್ಲೆಯಲ್ಲಿ ಅಕಾಲಿಕ ಮಳೆ: ದ್ರಾಕ್ಷಿ, ಮಾವಿನ ಹಣ್ಣು ಬೆಳೆಗಾರರಿಗೆ ಭಾರಿ ನಷ್ಟ; ಪರಿಹಾರ ನೀಡಲು ಆಗ್ರಹ
10/04/2022, 23:19
ಬೆಳಗಾವಿ(reporterkarnataka.com): ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಶನಿವಾರ ಸುರಿದ ಅಕಾಲಿಕ ಭಾರೀ ಗಾಳಿ ಮಳೆಗೆ ದ್ರಾಕ್ಷೆ ಹಾಗೂ ಮಾವಿನ ಬೆಳೆಗಾರರಿಗೆ ಅ
ಪಾರ ನಷ್ಟ ಉಂಟಾಗಿದೆ.
ಗಾಳಿ ರಭಸಕ್ಕೆ ಗಿಡ ಮರಗಳು ಹಾಗೂ ಲೈಟ್ ಕಂಬಗಳು ಉರಳಿವೆ. ಇನ್ನೂ ಐಗಳಿ ಗ್ರಾಮದ ರೈತರು ಪ್ರಲ್ಹಾದ ಪಾಟೀಲ್ ಅವರು ಐಗಳಿ ಸಂಸ್ಕರಣಾ ಘಟಕದ ಸಮೀಪವಿರುವ ಶೇಡ್ ನಲ್ಲಿ ಆರು ಎಕರೆಯಲ್ಲಿ ಬೆಳೆಸಿದ್ದ 10 ಟನ್ ದ್ರಾಕ್ಷೆ ಮಳೆಗೆ ಸಂಪೂರ್ಣ ವಾಗಿ ತೊಯ್ದು ನಾಶವಾಗಿವೆ. ಸತ್ಯವ್ವ ಪುಂಡಲೀಕ ಪೂಜಾರಿ ಅವರು ಒಂದು ಎಕರೆ ತೋಟದಲ್ಲಿ ಬೆಳೆದ ಮಾವಿನ ಹಣ್ಣಿಗಳು ಸಂಪೂರ್ಣ ಬಿದ್ದು ಸುಮಾರ 2 ಲಕ್ಷ. ರೂ ನಷ್ಟ ಸಂಭವಿಸಿದೆ. ರೈತರು ವರ್ಷವಿಡೀ ದುಡಿದು ಕೊನೆಯ ಹಂತದಲ್ಲಿ ಅಪಾರವಾದ ನಷ್ಟ ಅನುಭವಿಸುವಂತಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇದಕ್ಕೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ರೈತರ ಪರವಾಗಿ ಮಾಜಿ ಶಾಸಕಶಹಜಾಹನ ಡೊಂಗರಗಾವ ಅವರು ಒತ್ತಾಯಿಸಿದ್ದಾರೆ.