11:11 PM Friday18 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಮತ್ತೆ ತುಳುವಿಗಾಗಿ ಕೈ ಎತ್ತಿದ ಸಂಘಟನೆಗಳು : ಅಧಿಕೃತ ರಾಜ್ಯ ಭಾಷೆಗೆ ಆಗ್ರಹಿಸಿ ಟ್ವೀಟ್ ಅಭಿಯಾನ

12/06/2021, 17:57

ಮಂಗಳೂರು(reporterkarnataka news):

ಕರಾವಳಿ ಭಾಗದಲ್ಲಿ ಬಹು ಬಳಕೆಯಲ್ಲಿರುವ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ತುಳು ಸಂಘಟನೆಗಳು ಟ್ವೀಟ್‌ ಅಭಿಯಾನಕ್ಕೆ ಕರೆ ನೀಡಿವೆ.

ಇದೇ ಭಾನುವಾರ ಜೈ ತುಳುನಾಡ್‌ ಸೇರಿದಂತೆ ಇನ್ನಿತರ ತುಳು ಭಾಷಾ ಪ್ರೇಮಿ ಸಂಘಟನೆಗಳು ತುಳು ಭಾಷೆಯ ಸಾಂವಿಧಾನಿಕ ಸ್ಥಾನಮಾನಕ್ಕೆ ಆಗ್ರಹಿಸಿ ಸರ್ಕಾರದ ಕದ ತಟ್ಟಲು ನಿರ್ಧರಿಸಿದ್ದು, ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಮತ್ತು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿಂದೆಯೂ ತುಳು ಭಾಷೆಯ ಸಾಂವಿಧಾನಿಕ ಸ್ಥಾನಮಾನಕ್ಕಾಗಿ ಟ್ವೀಟ್‌ ಅಭಿಯಾನ ಸೇರಿದಂತೆ ಅನೇಕ ರೀತಿಯ ಹೋರಾಟಗಳನ್ನು ತುಳು ಸಂಘಟನೆಗಳು ಮಾಡಿದ್ದವು. ಆದರೆ ಸರ್ಕಾರ ತುಳುವರ ಕೂಗಿಗೆ ಕಿವಿಯಾಗಿಲ್ಲ. ಕರಾವಳಿ ಭಾಗದ ರಾಜಕಾರಣಿಗಳು ಕೂಡ ಭಾಷೆಯ ವಿಚಾರವಾಗಿ ಆಸಕ್ತಿ ತೋರಿಸದ ಕಾರಣ ಇನ್ನೂ ತುಳುವರ ಕನಸು ನನಸಾಗದೆ ಉಳಿದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬಿಜೆಪಿ ಶಾಸಕರೇ ಇದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇದೆ. ಹೀಗಿದ್ದೂ ನಮ್ಮ ತುಳು ಭಾಷೆಗೊಂದು ಸಾಂವಿಧಾನಿಕ ಮಾನ್ಯತೆಯನ್ನು ಕೊಡಿಸಲು ಆಗದೆ ಇರೋದು ನಮ್ಮ ದೌರ್ಭಾಗ್ಯವಾಗಿದೆ.

ಭಾನುವಾರ ಬೆಳಗ್ಗೆಯಿಂದ ನಡೆಯುವ ಈ ಟ್ವೀಟ್‌ ಅಭಿಯಾನದಲ್ಲಿ #TuluOfficialinKA_KL ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟ್‌ ಮಾಡುವಂತೆ ಸಂಘಟಕರು ಜನರಲ್ಲಿ ವಿನಂತಿಸಿಕೊಂಡಿದ್ದು, ತುಳು ಭಾಷೆಗೆ ಅಧಿಕೃತ ಸಾಂವಿಧಾನಿಕ ಗೌರವ, ಸ್ಥಾನಮಾನ ಸಿಗಲು ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಬಡಿದೆಬ್ಬಿಸೋದು ಅನಿವಾರ್ಯವಾಗಿದೆ. ಈ ಕಾರ್ಯಕ್ಕೆ ಸಮಸ್ತ ತುಳುವರು ಕೈಜೋಡಿಸುವಂತೆ ಜೈತುಳುನಾಡ್ ಸಂಘಟನೆಯ ಮುಖ್ಯಸ್ಥರು ವಿನಂತಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು