ಇತ್ತೀಚಿನ ಸುದ್ದಿ
ಕಾರ್ಕಳ: ನಾಯಿಯನ್ನು ಬೆನ್ನಟ್ಟಿದ ಚಿರತೆ ಬಾವಿಗೆ; ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ರಕ್ಷಣೆ
10/04/2022, 13:07
ಕಾರ್ಕಳ(reporterkarnataka.com): ನಾಯಿಯನ್ನು ಓಡಿಸಿಕೊಂಡು ಹೋಗಿದ್ದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಾರ್ಕಳ ಕಸಬದ ಬಳಿ ಭಾನುವಾರ ಮುಂಜಾನೆ ನಡೆದಿದೆ.
ಕಸಬ ಸಮೀಪದ ಅತ್ತೂರು ವಿನ್ಸೆಂಟ್ ನವಿನ್ ಕ್ಯಾಸ್ಟೋಲಿನೊ ಎಂಬವರ ಮನೆಯ ಚಿರತೆ ಬಾವಿಗೆ ಬಿದ್ದಿದೆ.ಸುಮಾರು 6 ವರ್ಷದ ಗಂಡು ಚಿರತೆಯಾಗಿದ್ದು,ಕಾರ್ಕಳ ವಲಯ ಅರಣ್ಯಾಧಿಕಾರಿ ಶ್ರೀ ಜಿ.ಡಿ ದಿನೇಶ್ ರವರ ನೇತೃತ್ವದಲ್ಲಿ ಕಾರ್ಕಳ ವಲಯದ ಸಿಬ್ಬಂದಿಯವರು ಬಾವಿಯಿಂದ ಮೇಲೆತ್ತಿ ರಕ್ಷಿಸಲಾಗಿದೆ. ಚಿರತೆಯನ್ನು ಆರೋಗ್ಯ ತಪಾಸಣೆ ನಡೆಸಿ ಸುರಕ್ಷಿತ ಪ್ರದೇಶಕ್ಕೆ ಬಿಡಲಾಗುವುದೆಂದು ಕಾರ್ಕಳ ವಲಯ ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಪ್ರಕಾಶ್ಚಂದ್ರ, ಹುಕ್ರಪ್ಪ ಗೌಡ, ರಾಘವೇಂದ್ರ ಶೆಟ್ಟಿ, ಚಂದ್ರಕಾಂತ್ ಪೋಳ್, ಅರಣ್ಯ ರಕ್ಷಕರಾದ ಎ.ಡಿ ಪೊನ್ನಪ್ಪ, ಭಾಸ್ಕರ, ಶ್ರೀಧರ್ ನರೇಗಲ್, ಪ್ರಕಾಶ್, ಮಹಾಂತೇಶ್ ಎಚ್ ಗೋಡಿ, ಬಾಬು ಪೂಜಾರಿ, ಶಮೀಮ್, ಬಾಬುಪೂಜಾರಿ ಯಾನೆ ಪ್ರಕಾಶ್, ಶ್ರೀಧರ ಪೂಜಾರಿ ಹಾಗೂ ಸ್ಥಳೀಯರಾದ ಮಾಜಿ ಎ.ಪಿ.ಎಂಸಿ ಅಧ್ಯಕ್ಷರಾದ ಬಾಲಕೃಷ್ಣ ಹೆಗ್ಡೆ, ಹಾಗೂ ಇನ್ನಿತರರ ಭಾಗವಹಿಸಿದ್ದರು