ಇತ್ತೀಚಿನ ಸುದ್ದಿ
ವಿರಾಜಪೇಟೆ: ಜಿಂಕೆಯ ಕೊಂಬು ಮಾರಾಟಕ್ಕೆ ಯತ್ನ ; ಆರೋಪಿಯ ಬಂಧನ
09/04/2022, 12:55
ವಿರಾಜಪೇಟೆ(reporterkarnataka.com): ವಿರಾಜಪೇಟೆ ನಗರದ ಪಂಜರಪೇಟೆ ಸಮೀಪದ ಕಾವೇರಿ ಪದವಿಪೂರ್ವ ಕಾಲೇಜಿನ ಮುಖ್ಯ ದ್ವಾರದ ಒತ್ತಿನಲ್ಲಿರುವ ಸಾರ್ವಜನಿಕ ಬಸ್ಸು ತಂಗುದಾಣದ ಬಳಿ ಜಿಂಕೆ ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಮೈಸೂರಿನವನಾದ ರವಿ ಅಲಿಯಾಸ್ ಮಂಜು ಎಂಬಾತ ಮೂರು ಜಿಂಕೆಯ ಕೊಂಬುಗಳನ್ನು ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ವಿರಾಜಪೇಟೆ ನಗರದ ಪಂಜರಪೇಟೆ ಸಮೀಪದ ಕಾವೇರಿ ಪದವಿಪೂರ್ವ ಕಾಲೇಜಿನ ಮುಖ್ಯ ದ್ವಾರದ ಒತ್ತಿನಲ್ಲಿರುವ ಸಾರ್ವಜನಿಕ ಬಸ್ಸು ತಂಗುದಾಣದ ಬಳಿ ಮಾರಾಟಕ್ಕಾಗಿ ಗಿರಾಕಿಗಳನ್ನು ಹುಡುಕುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಂಬ್ಬದಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ವಿರಾಜಪೇಟೆ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ನೀಡಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಮಹಾ ನಿರೀಕ್ಷಕ ಕೆ. ವಿ. ಶರತ್ ಚಂದ್ರ ರವರ ನಿರ್ದೇಶನದ ಮೇರೆಗೆ, ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಎನ್ .ಟಿ. ಶ್ರೀನಿವಾಸ್ ರೆಡ್ಡಿ ಯವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಸಿ. ಐ. ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪ್ರಭಾರ ಆರಕ್ಷಕ ಉಪನಿರೀಕ್ಷಕರಾದ ಸಿ.ಯು.ಸವಿ, ಸಿಬ್ಬಂದಿಗಳಾದ ಟಿ. ಪಿ. ಮಂಜುನಾಥ, ಕೆ. ಎಸ್. ದೇವಯ್ಯ, ಸಿ. ಬಿ. ಬೀನ, ಎಸ್ ಎಂ ಯೋಗೇಶ್, ಪಿ. ಯು. ಮುನೀರ್, ಆರ್. ನಂದಕುಮಾರವರು ಪಾಲ್ಗೊಂಡಿದ್ದರು.