11:56 AM Saturday4 - May 2024
ಬ್ರೇಕಿಂಗ್ ನ್ಯೂಸ್
ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ…

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’: ಮಾರ್ಚ್ ತಿಂಗಳ ಟಾಪರ್ ಆಗಿ ಮಂಗಳೂರಿನ ನತಾಶ ಹಾಗೂ ಕಾಸರಗೋಡಿನ ಅಸ್ತಾ ಆಯ್ಕೆ

07/04/2022, 19:07

ಮಂಗಳೂರು(reporterkarnataka.com):

ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಮಂಗಳೂರಿನ ನತಾಶ ಹಾಗೂ ಕಾಸರಗೋಡಿನ ಅಸ್ತಾ ಶೆಟ್ಟಿ ಆಯ್ಕೆಯಾಗಿದ್ದಾರೆ. 

ನತಾಶ ಎನ್. ಮಂಗಳೂರು, ನಟರಾಜ್ ವಿ.  ಹಾಗೂ  ಆಶಾ ಎನ್. ದಂಪತಿಯ ಪ್ರಥಮ ಪುತ್ರಿ. ವಯಸ್ಸು 10 ವರ್ಷ.  ಇವಳು ಕೊಲ್ಯ ಜೊಯಿಲೆನ್ಡ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇವಳು ನೃತ್ಯ ಹಾಗೂ ಸಂಗೀತ ತರಬೇತಿಯನ್ನು ಪಡೆಯುತ್ತಿದ್ದಾಳೆ. ಸ್ವಾಮಿ ಕೊರಗಜ್ಜನ ತುಳು ಭಕ್ತಿ ಗೀತೆಗಳು ಮತ್ತು  ಕನ್ನಡ, ತಮಿಳು, ತೆಲುಗು, 65ಕ್ಕೂಹೆಚ್ಚು ವೇದಿಕೆಗಳಲ್ಲಿ ಹಾಡಿದ್ದಾಳೆ. ಕಲಾನಂಜಲಿ ಮತ್ತು ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಎರಡು ಮೂರು ಬಾರಿ ಲೈವ್ ಕಾರ್ಯಕ್ರಮ ನೀಡಿದ್ದಾಳೆ. ವಾಯ್ಸ್ ಆಫ್ ಆರಾಧನಾದಲ್ಲಿ ಭಾಗವಹಿಸಿ ಮಲಬಾರ್ ಗೋಲ್ಡ್ ವೀಜೆತಳಾಗಿದ್ದಾಳೆ.

ಸಮಾಜ ಸೇವೆಗಾಗಿ ಅನೇಕ ಲೈವ್ ಕಾರ್ಯಕ್ರಮ ನೀಡಿದ್ದಾಳೆ. ಸ್ವಂದನ ಚಾನೆಲ್ ನಲ್ಲಿ ಭಾಗವಹಿಸಿದ್ದಳು. ನಮ್ಮ ಕುಡ್ಲ ಚಾನೆಲ್‌ನ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಳು. ರಾಜ್ಯ ಮಟ್ಟದ ಪ್ರಶಸ್ತಿ ಮತ್ತು ಜನ ಸ್ಪಂದ, ಕಲಾ ಕುಸುಮ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಕದ್ರಿ ಕಲ್ಕೂರ ಪ್ರತಿಷ್ಟಾನದಲ್ಲಿ , ಶಾಲೆ ಗಳಲ್ಲಿ ನಡೆದ   ನೃತ್ಯ, ಗಾಯನ, ಡ್ರಾಯಿಂಗ್ ಮತ್ತು ಅನೇಕ ಸ್ವರ್ದೆಗಳಲ್ಲಿ ಬಹುಮಾನ ಪಡೆದಿರುತ್ತಾರೆ . ಎಕ್ಸ್ ಪ್ರೆಶನ್ ಉರ್ವದಲ್ಲಿ ನಡೆದ ರಾಧಾಕೃಷ್ಣ ನೃತ್ಯದಲ್ಲಿ ಪ್ರಥಮ ಮತ್ತು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ನಡೆದ ಗಾನಂ ವೇಷಂದಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಗೌರವ, ಸನ್ಮಾನ ಬಹುಮಾನ ಮತ್ತು ಅನೇಕ ಸಂಘ ಸಂಸ್ಥೆಗಳಲ್ಲಿ ಗೌರವ ಪಡೆದಿದ್ದಾಳೆ.

ಕರ್ನಾಟಕ ಜನಸ್ವಂದನ ಟ್ರಸ್ಟ್ ನಲ್ಲಿ ಭಕ್ತಿ ಗೀತೆಯಲ್ಲಿ ತೃತೀಯ, ಆಶು ಭಾಷಣ ಅತ್ಯುತ್ತಮ ಸ್ಥಾನ ಪಡೆದಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ದೊರಕಿದೆ. ಸ್ಥಳಿಯ ಕಾರ್ಯಕ್ರಮಗಳಲ್ಲಿ ಭಕ್ತಿಗೀತೆ ಮತ್ತು ಚಲನಚಿತ್ರ ಗೀತೆ ಗಳನ್ನು ಹಾಡಿ ಜನ ಮೆಚ್ಚುಗೆ ಪಡೆದಿದ್ದಾರೆ.

ಕಾಸರಗೋಡು ಜಿಲ್ಲೆಯ ವಿದ್ಯಾನಗರದ ತಿಮ್ಮಪ್ಪ ಶೆಟ್ಟಿ ಹಾಗೂ ಆಶಾ ಶೆಟ್ಟಿ ದಂಪತಿಯ ಮಗಳಾದ ಆಸ್ತಾ ಶೆಟ್ಟಿ ಬೋವಿಕ್ಕಾನದ ಎಯುಪಿಎಸ್ 

ಶಾಲೆಯಲ್ಲಿ 4ನೇ ತರಗತಿಯಲ್ಲಿ  ಓದುತ್ತಿದ್ದಾಳೆ. ಇವಳು ನೃತ್ಯ, ಯೋಗ ಹಾಗೂ ಶಾಸ್ತ್ರೀಯ ಸಂಗೀತ ತರಬೇತಿ ಪಡೆಯುತ್ತಿದ್ದಾಳೆ. ನೃತ್ಯ, ಹಾಡು, ಚಿತ್ರರಚನೆ,  ಕವಿತಾ ರಚನೆ , ಕಥೆ ಹೇಳುವುದು, ಅಭಿನಯ, ಯೋಗ ಮೊದಲಾದವುಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವಳು. ಶಾಲಾ ಮಟ್ಟದಲ್ಲಿ ಅನೇಕ ಬಹುಮಾನಗಳು ಲಭಿಸಿರುತ್ತದೆ. ಕಾಸರಗೋಡು ಸಬ್ ಜಿಲ್ಲಾ ಕಲೋತ್ಸವದಲ್ಲಿ ಅಭಿನಯ ಗೀತೆ ಹಾಗೂ ಕಥೆ ಹೇಳುವ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನ ಪಡೆದಿದ್ದಾಳೆ.

ಕಳೆದ ಎರಡು ವರ್ಷಗಳಿಂದ ವಾಯ್ಸ್ ಆಫ್ ಆರಾಧನಾ ಸಂಸ್ಥೆಗೆ ಉತ್ತಮವಾದ ಪ್ರತಿಭಾ ಪ್ರದರ್ಶನಗಳನ್ನು ಕೊಡುತ್ತಾ ಅಚ್ಚುಮೆಚ್ಚಿನ ಪ್ರತಿಭೆ ಎನಿಸಿಕೊಂಡಿದ್ದಾಳೆ. ಅಲ್ಲದೇ ಇವಳು ಮೂರು ಬಾರಿ ಬೆಸ್ಟ್ ಪರ್ಪಾಮರ್  ಕೂಡಾ ಆಗಿದ್ದಳು. ವಾಯ್ಸ್  ಆಫ್ ಆರಾಧನಾ ಸಂಸ್ಥೆ ಇವಳಿಗೆ ವಾಯ್ಸ್  ಆಫ್ ಆರಾಧನಾ ಅವಾರ್ಡ್ ಕೂಡಾ ನೀಡಿ ಗೌರವಿಸಿದೆ.  ಶ್ರೀ ಕೃಷ್ಣ ಯುವಕ ಮಂಡಲ ಆರದಿರಲಿ ಬದುಕು ಆರಾಧನಾ ಸಂಸ್ಥೆ, ಸಿಟಿಗುಡ್ಡೆ ಪುತ್ತೂರು  ಇವರು ಆಸ್ತಾ ಶೆಟ್ಟಿ ಯನ್ನು ಗುರುತಿಸಿ ಸನ್ಮಾನಿಸಿರುತ್ತಾರೆ. ಅನೇಕ ವೇದಿಕೆ ಗಳಲ್ಲಿ ಪ್ರತಿಭಾ ಪ್ರದರ್ಶನ ನೀಡಿರುತ್ತಾಳೆ. ಸ್ಪಂದನಾ ಟಿವಿಯ ಟಾಲೆಂಟ್ ಶೋ ನಲ್ಲಿ ಭಾಗವಹಿಸಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು