ಇತ್ತೀಚಿನ ಸುದ್ದಿ
ಬಾಲ್ಯ ವಿವಾಹ ತಡೆಗೆ ಹೋರಾಟವನ್ನೇ ನಡೆಸುತ್ತಿರುವ ದಕ್ಷ ಅಧಿಕಾರಿಯಾದ ಶರಣಮ್ಮ ಕರ್ನೂರ್
12/06/2021, 06:51
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವುದರ ಜೊತೆಗೆ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿದ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶರಣಮ್ಮ ಕರ್ನೂರ್ ಬಾಲ್ಯ ವಿವಾಹ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅವರು ಕಳೆದ ವರ್ಷಗಳಿಂದ ಲಿಂಗ್ಸುರ್ ತಾಲೂಕಿನಲ್ಲಿ ಬಾಲ್ಯ ವಿವಾಹ ಪದ್ಧತಿಯನ್ನು ತಡೆಯಲು ಹೋರಾಟವನ್ನೇ ನಡೆಸಿಕೊಂಡು ಬಂದಿದ್ದಾರೆ. ಶಿಶು ಅಭಿವೃದ್ಧಿ ಇಲಾಖೆಯ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷತೆಯಲ್ಲಿ 54 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಕೆಸರಟ್ಟಿ ಮಿಂಚೇರಿ ತಾಂಡ, ನೀರಲಕೇರಿಯಲ್ಲಿ ಎರಡು ಪ್ರಕರಣಗಳು ಬಾಲ್ಯವಿವಾಹ ಕಾಯ್ದೆಡಿಯಲ್ಲಿ ದಾಖಲಾಗಿದೆ.
ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿ ತಡೆಯಲು ತಾಲೂಕು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. 1098 ಸಹಾಯವಾಣಿ ಕರೆ ಮಾಡಿ ಮಾಹಿತಿ ತಿಳಿಸಬೇಕು. ಮಾಹಿತಿ ನೀಡಿ ವ್ಯಕ್ತಿಯ ಹೆಸರು ಗೋಪ್ಯವಾಗಿ ಇಡಲಾಗುವುದು. ಒಟ್ಟಿನಲ್ಲಿ ಸಾರ್ವಜನಿಕರು ಬಾಲ್ಯ ವಿವಾಹ ನಡೆಯದಂತೆ
ಸಹಕರಿಸಬೇಕು. ಎಲ್ಲರೂ ಧೈರ್ಯವಾಗಿ ಮುಂದೆ ಬರಬೇಕು ಎಂದು ಶರಣಮ್ಮ ಕರ್ನೂರ್ ತಿಳಿಸಿದ್ದಾರೆ.
ಇಂಥ ಪ್ರಕರಣಗಳು ಈಗಾಗಲೇ ಮಹಿಳಾ ಮಕ್ಕಳ ಇಲಾಖೆಯ ಅಧಿಕಾರಿಗಳ ಪ್ರಾಣಕ್ಕೆ ಅಪಾಯ ತಂದಿದೆ. ಲಿಂಗಸ್ಗೂರು ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡಿದ ಯೋಗಿತಾ ಬಾಯಿ ಅವರ ಮೇಲೆ ಹಲ್ಲೆ ಕೂಡ ನಡೆದಿದೆ.
ಸಾರ್ವಜನಿಕರು ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಯೋಜನೆಯೊಂದಿಗೆ ಕೈ ಜೋಡಿಸಿ ಬಾಲ್ಯ ವಿವಾಹ ತಡೆಯಲು ಮುಂದಾಗಬೇಕು ಎಂದು ಶರಣಮ್ಮ ಕರ್ನೂಲ್ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.