ಇತ್ತೀಚಿನ ಸುದ್ದಿ
ಅಕ್ರಮ ಕಸಾಯಿಖಾನೆಯ ಮೇಲೆ ಕ್ರಮ: ಪೊಲೀಸ್ ಇಲಾಖೆಗೆ ಶಾಸಕ ವೇದವ್ಯಾಸ ಕಾಮತ್ ಸೂಚನೆ
04/04/2022, 16:09

ಮಂಗಳೂರು(reporterkarnataka.com); ಮಂಗಳೂರು ನಗರದಲ್ಲಿ ಕಾರ್ಯಚರಿಸುತ್ತಿರುವ ಅಕ್ರಮ ಕಸಾಯಿಖಾನೆಗಳನ್ನು ಪತ್ತೆ ಹಚ್ಚಿ ಕ್ರಮ ಜರಗಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಅಕ್ರಮವಾಗಿ ಗೋಸಾಗಾಟ, ಗೋಹತ್ಯೆಗಳು ನಡೆಯುತಿದ್ದು, ಇದರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಸೂಚನೆ ನೀಡಿದ್ದಾರೆ. ಕೇರಳ – ಕರ್ನಾಟಕ ಗಡಿಭಾಗದಲ್ಲಿ ಅಕ್ರಮ ಕಸಾಯಿಖಾನೆ ನಿರ್ಮಾಣವಾಗಿದ್ದು ಇಲ್ಲಿಂದ ಕದ್ದೊಯ್ಯುವ ಗೋವುಗಳನ್ನು ವಧಿಸಿ ಮುಡಿಪು ಮೂಲಕವಾಗಿ ನಗರಕ್ಕೆ ಗೋಮಾಂಸ ಸಾಗಾಟ ನಡೆಯುತ್ತಿದೆ. ನಗರದಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಕಸಾಯಿಖಾನೆಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರಗಿಸಲು ಪೊಲೀಸ್ ಇಲಾಖೆಗೆ ಶಾಸಕ ಕಾಮತ್ ಸೂಚನೆ ನೀಡಿದ್ದಾರೆ.
ಶಾಂತಿಯುತವಾಗಿರುವ ಕರಾವಳಿಯಲ್ಲಿ ಗೋಕಳ್ಳತನ, ಗೋಹತ್ಯೆಯ ಕೋಮು ಗಲಭೆ ಎಬ್ಬಿಸಲು ಕೆಲವೊಂದು ಶಕ್ತಿಗಳು ಪ್ರಯತ್ನಿಸುತ್ತಿವೆ. ಅವೆಲ್ಲವನ್ನೂ ಮಟ್ಟ ಹಾಕಲು ಸರಕಾರ ಮತ್ತು ಪೊಲೀಸ್ ಸಮರ್ಥವಾಗಿದೆ ಎಂದರು.