ಇತ್ತೀಚಿನ ಸುದ್ದಿ
ದೇಶದ ನಾನಾ ಕಡೆಗಳಲ್ಲಿ ಕಂಪಿಸಿದ ಭೂಮಿ: ತಿರುಪತಿಯಲ್ಲಿ 3.6, ಲಡಾಖ್ನಲ್ಲಿ 4.3ರಷ್ಟು ತೀವ್ರತೆ ದಾಖಲು
03/04/2022, 18:18
ಹೊಸದಿಲ್ಲಿ(reporterkarnataka.com); ದೇಶದ ವಿವಿಧೆಡೆಗಳಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆ ವರೆಗೆ ಭೂಕಂಪಗಳು ಸಂಭವಿಸಿವೆ.
ಆಂಧ್ರಪ್ರದೇಶದ ತಿರುಪತಿಯಲ್ಲಿ ಭಾನುವಾರ ಬೆಳಗಿನ ಜಾವ 1.10 ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದೆ. ತಿರುಪತಿಯಿಂದ ಈಶಾನ್ಯಕ್ಕೆ 85 ಕಿಮೀ ದೂರದಲ್ಲಿ ಭೂಗರ್ಭದ 20 ಕಿಮೀ ಆಳದಲ್ಲಿ ಕಂಪನದ ಕೇಂದ್ರವಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪದಿಂದ ಯಾವುದೇ ಹಾನಿಗಳಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಲಡಾಖ್, ಅಂಡಮಾನ್ ನಲ್ಲೂ ಭೂಕಂಪನ:
ಜಮ್ಮು-ಕಾಶ್ಮೀರದ ಲಡಾಖ್ನಲ್ಲಿರುವ ಅಲ್ಚಿ ಪ್ರದೇಶದ ಉತ್ತರದಲ್ಲಿ ಇಂದು ಬೆಳಗ್ಗೆ7.29ರ ಭೂಮಿ ಕಂಪಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3ರಷ್ಟು ದಾಖಲಾಗಿದೆ. ಶನಿವಾರ ರಾತ್ರಿ 2.5೦ರ ಸುಮಾರಿಗೆ ಅಂಡಮಾನ್-ನಿಕೋಬಾರ್ನ ದಿಗ್ಲಿಪುರ್ ಪ್ರದೇಶದಲ್ಲಿಯೂ ಕಂಪನ ಸಂಭವಿದೆ. ಭೂಕಂಪನ ಪ್ರಮಾಣ ರಿಕ್ಟರ್ ಮಾಪಕದಲ್ಲಿ 4.4ರಷ್ಟು ದಾಖಲಾಗಿದೆ ಎಂದು ತಿಳಿದು ಬಂದಿದೆ. ಅದೃಷ್ಠವಶಾತ್ ಎಲ್ಲಿಯೂ ಯಾವುದೇ ಹಾನಿಗಳು ಸಂಭವಿಸಿದ ಕುರಿತು ವರದಿಯಾಗಿಲ್ಲ.