ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ಶ್ರೀಲಂಕಾ ಮೂಲದ 35 ಪ್ರಜೆಗಳ ಬಂಧನ: ತಮಿಳುನಾಡು ಮೂಲಕ ಆಗಮನ; ಮಾನವ ಕಳ್ಳಸಾಗಣಿಕೆ ಶಂಕೆ
11/06/2021, 16:28
ಮಂಗಳೂರು(reporterkarnataka news): ಶ್ರೀಲಂಕಾ ಮೂಲದ 35 ಮಂದಿಯನ್ನು ನಗರದಲ್ಲಿ ಬಂಧಿಸಲಾಗಿದೆ. ಮಂಗಳೂರು ಹಾಗೂ ತಮಿಳುನಾಡು ಪೊಲೀಸರು ಜಂಟೀ ಕಾರ್ಯಾಚರಣೆ ನಡೆಸಿ ಅಕ್ರಮ ಪ್ರವೇಶ ಮಾಡಿದವರನ್ನು ಬಂಧಿಸಿದ್ದಾರೆ.
ಇದೊಂದು ಮಾನವ ಕಳ್ಳ ಸಾಗಾಣಿಕೆ ಪ್ರಕರಣ ಎನ್ನಲಾಗಿದೆ. ಏಜೆಂಟ್ ಗಳ ಮೂಲಕ ಇವರು ಶ್ರೀಲಂಕಾದಿಂದ ಭಾರತ ಪ್ರವೇಶಿಸಿದ್ದಾರೆ. ಪ್ರತಿಯೊಬ್ಬರಿಂದ 8-10 ಲಕ್ಷ ರೂ. ಏಜೆಂಟರು ಪಡೆದುಕೊಂಡಿದ್ದಾರೆ. ಭಾರತದ ಮೂಲಕ ಕೆನಡಾಕ್ಕೆ ಕಳುಹಿಸುವ ಭರವಸೆ ಇವರಿಗೆ ನೀಡಲಾಗಿತ್ತು.
ಮೊದಲಿಗೆ ಇವರನ್ನು ಕಳೆದ ತಿಂಗಳು ತಮಿಳುನಾಡಿಗೆ ಕರೆದು ತರಲಾಯಿತು. ಅಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಅಲ್ಲಿ ಸುರಕ್ಷಿತವಲ್ಲ ಎಂದು ಮಂಗಳೂರಿಗೆ ಸ್ಥಳಾಂತರಿಸಲಾಯಿತು ಎಂದು ತಿಳಿದು ಬಂದಿದೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಯಾವುದೇ ತಪಾಸಣೆಯಿಲ್ಲದೆ ಅವರು ಹೇಗೆ ರಾಜ್ಯ ಪ್ರವೇಶಿಸಿದರು ಎನ್ನುವ ಕುರಿತು ತನಿಖೆ ನಡೆಯುತ್ತಿದೆ. ಮಂಗಳೂರಿನ ಲಾಡ್ಜ್ ಮತ್ತು ಬಾಡಿಗೆ ಮನೆಯೊಂದರಲ್ಲಿ ಅವರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ.