5:44 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಸಿಎಂ ಬದಲಾಗ್ತಾರಾ ಬಿಡ್ತಾರಾ ಗೊತ್ತಿಲ್ಲ, ರಾಜ್ಯ ಬಿಜೆಪಿ ಅಧ್ಯಕ್ಷರಂತೂ ಬದಲಾಗುತ್ತಾರಂತೆ !: ಹಾಗಾದರೆ ಯಾರು ಹೊಸ ಅಧ್ಯಕ್ಷರು?

10/06/2021, 19:02

ರಾಜೀವಿಸುತ ಬೆಂಗಳೂರು

info.reporterkarnataka@gmail.com

ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ಆಗಾಗ ಮುನ್ನಲೆಗೆ ಬರುತ್ತಿದ್ದರೂ ಇದೀಗ ನಾಯಕತ್ವ ಬದಲಾವಣೆ ವಿಷಯ ಬದಿಗೆ ಸರಿದಿದೆ. ಬದಲಿಗೆ ರಾಜ್ಯ ಬಿಜೆಪಿ ಅಧ್ಯಕ್ಷರು ಬದಲಾಗುತ್ತಾರೆ ಎಂಬ ಮಾತು ಬಿಜೆಪಿ ಪಾಳಯದಲ್ಲೇ ಹರಿದಾಡಲಾರಂಭಿಸಿದೆ. 2023ರ ವಿಧಾನಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆಸಲು ಹೊಸ ಅಧ್ಯಕ್ಷರ ಹುಡುಕಾಟ ಶುರುವಾಗಿದೆ. ಇನ್ನೆರಡು ತಿಂಗಳಲ್ಲಿ ಹೊಸ ಅಧ್ಯಕ್ಷರ ನೇಮಕವಾಗಲಿದೆ ಎಂಬ ಮಾಹಿತಿ ಇದೆ.

ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಪಕ್ಷದ ಅಧ್ಯಕ್ಷ ಗಾದಿಯನ್ನು ಬಿಜೆಪಿ ಹೈಕಮಾಂಡ್ ನೀಡಿತ್ತು. ಸಂಘಟನೆಯ ಚತುರ, ಪ್ರಬಲ ಹಿಂದುತ್ವವಾದಿ ಹಾಗೂ ಯಂಗ್ ಎಂಬ ಕಾರಣಕ್ಕೆ ಪಕ್ಷದ ಗದ್ದುಗೆ ನೀಡಲಾಗಿತ್ತು. ಹಾಗೆ ನಳಿನ್ ಕುಮಾರ್ ಕಟೀಲ್ ಅವರ ಮೇಲೆ ಪಕ್ಷದ ವರಿಷ್ಠರು ಸಾಕಷ್ಟು ನಿರೀಕ್ಷೆ ಇಟ್ಟಿದ್ದರು. ಆದರೆ ಆ ನಿರೀಕ್ಷೆಗೆ ತಕ್ಕ ಫಲಿತಾಂಶ ಬಾರದಿರುವುದು ವರಿಷ್ಠರ ಕೆಂಗಣ್ಣಿಗೆ ಕಾರಣ ಎನ್ನಲಾಗಿದೆ. 

ಈ ಹಿಂದೆಯೇ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾಯಿಸುವ ಮಾತು ಕೇಳಿ ಬಂದಿತ್ತು. ಆದರೆ ಪಂಚ ರಾಜ್ಯಗಳ ಚುನಾವಣೆ ಹಾಗೂ ರಾಜ್ಯ ವಿಧಾನಸಭೆಯ ಎರಡು ಕ್ಷೇತ್ರ ಹಾಗೂ ಲೋಕಸಭೆಯ ಒಂದು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿರುವ ಕಾರಣ ಅಧ್ಯಕ್ಷರ ಬದಲಾವಣೆಯನ್ನು ವರಿಷ್ಠರು ಮುಂದೂಡಿದ್ದರು ಮತ್ತು ನಳಿನ್ ಅವರಿಗೆ ಒಂದು ಅವಕಾಶ ನೀಡಿದ್ದರು ಎನ್ನಲಾಗಿದೆ.

ರಾಜ್ಯ ವಿಧಾನಸಭೆಗೆ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸಾಧನೆ ತೃಪ್ತಿಕರವಾಗಿರಲಿಲ್ಲ. ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಡಜನ್ ಗಟ್ಟಲೆ ಸಚಿವರುಗಳು ಓಡಾಡಿ ಪ್ರಚಾರ ಮಾಡಿದರೂ ಮಸ್ಕಿ ವಿಧಾನಸಭೆ ಕ್ಷೇತ್ರವನ್ನು ಬಿಜೆಪಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಅತ್ಯಧಿಕ ಮತಗಳಿಂದ ಜಯಗಳಿಸಿದ್ದರು. ಅದೇ ರೀತಿ ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಜಯಗಳಿಸಿದರೂ ಅದನ್ನು ‘ಅವಮಾನಕರ ಜಯ’ ಎಂದು ಪರಿಗಣಿಸಲಾಗಿತ್ತು. ಹಿಂದೆ ಇಲ್ಲಿ ಬಿಜೆಪಿ ಅಭ್ಯರ್ಥಿ  2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತಿದ್ದರು. ಸುರೇಶ್ ಅಂಗಡಿ ನಿಧನದಿಂದ ತೆರವಾದ ಈ ಸ್ಥಾನಕ್ಕೆ ಅವರ ಪತ್ನಿಯನ್ನು ನಿಲ್ಲಿಸಲಾಗಿತ್ತು. ವಾಸ್ತವದಲ್ಲಿ ಸಿಂಪತಿ ಮತಗಳನ್ನು ಪಡೆದು ಗೆಲುವಿನ ಅಂತರ ಜಾಸ್ತಿಯಾಗಬೇಕಿತ್ತು. ಆದರೆ ಬಿಜೆಪಿ ಅಭ್ಯರ್ಥಿ ಬಹಳ ಕಷ್ಟದಲ್ಲಿ ಕಡಿಮೆ

ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದು ರಾಜ್ಯ ಬಿಜೆಪಿಗೆ ಮತದಾರರ ಎಚ್ಚರಿಕೆ ಎಂದೇ ಪರಿಗಣಿಸಲಾಯಿತು. ಇವೆಲ್ಲವನ್ನು ಬಿಜೆಪಿ ವರಿಷ್ಠರು ಸೂಕ್ಷ್ಮವಾಗಿ ಅವಲೋಕಿಸಿಯೇ ಅಧ್ಯಕ್ಷರ ಬದಲಾವಣೆ ಕುರಿತು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಚಿಗುರುತ್ತಿರುವುದು ಎಲ್ಲರು ಒಪ್ಪಿಕೊಳ್ಳುವ ವಿಚಾರವಾಗಿದೆ. ಕಾಂಗ್ರೆಸ್ ಮತ್ತೆ ಭದ್ರವಾಗುವುದನ್ನು ತಡೆಯಬಲ್ಲ ನಾಯಕ ರಾಜ್ಯ ಬಿಜೆಪಿಗೆ ಬೇಕಾಗಿದೆ. ಅದಲ್ಲದೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್, ಜನತಾದಳದ ಕುಮಾರಸ್ವಾಮಿ ಮುಂತಾದ ನಾಯಕರನ್ನು ಎದುರಿಸಬಲ್ಲ ಅಧ್ಯಕ್ಷರು 

ಬೇಕಾಗಿದೆ ಎಂದು ವರಿಷ್ಠರು ಹೇಳುತ್ತಾರಂತೆ. ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಸನ್ನಿಹಿತವಾಗಿದೆ ಎನ್ನಲಾಗಿದೆ. ಹಾಗಾದರೆ ಯಾರು ನೂತನ ಅಧ್ಯಕ್ಷರಾಗುತ್ತಾರೆ? 

ಇತ್ತೀಚಿನ ಸುದ್ದಿ

ಜಾಹೀರಾತು