12:50 PM Wednesday3 - December 2025
ಬ್ರೇಕಿಂಗ್ ನ್ಯೂಸ್
Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ

ಇತ್ತೀಚಿನ ಸುದ್ದಿ

ವಿದ್ಯಾರ್ಥಿನಿಯರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ,  ಪರೀಕ್ಷೆ ಬರೆಯಲು ಆದ್ಯತೆ ಕೊಡಿ: ಯು.ಟಿ.ಖಾದರ್

27/03/2022, 21:20

ಮಂಗಳೂರು(reporterkarnataka.com): ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಾಳೆಯಿಂದ ಆರಂಭಗೊಳ್ಳಲಿದ್ದು ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೇ, ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿ ಎಂದು ಪ್ರತಿಪಕ್ಷ ಉಪನಾಯಕ ಯು. ಟಿ. ಖಾದರ್‌ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ. 

ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಖಾದರ್‌, ಈ ವಿಚಾರದಲ್ಲಿ ವಿದ್ಯಾರ್ಥಿನಿಯರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ತಮ್ಮ ಭವಿಷ್ಯದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯಲು ಆದ್ಯತೆ ಕೊಡಿ. ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಪೋಷಕರು ಕೂಡಾ ಕಾಳಜಿ ವಹಿಸಿಕೊಳ್ಳಿ ಎಂದರು. ಸರಕಾರ ನೀಡಿದ ಗೈಡ್ಸ್‌ ಪ್ರಕಾರ ಯೂನಿಫಾರ್ಮ್‌ ಕುರಿತಂತೆ ಆದೇಶ ಏನಿದೆ ಅದರ ವ್ಯವಸ್ಥೇಯಲ್ಲಿ ಹಾಗೂ ಖಾಸಗಿ ಶಾಲೆಗಳಲ್ಲಿ ಅಲ್ಲಿನ ವ್ಯವಸ್ಥೆಯಂತೆ ಪರೀಕ್ಷೆಯನ್ನು ಬರೆಯಬೇಕು. ಎಲ್ಲಾ ಖಾಸಗಿ ಕಾಲೇಜಿನವರು ಕೂಡಾ ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳಂತೆ ತಿಳಿದುಕೊಂಡು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿಕೊಡಿ. ಯಾವುದೇ ವಿವಾದಗಳಿಗೆ ಆಸ್ಪದ ನೀಡಬೇಡಿ ಎಂದು ಮನವಿ ಮಾಡುತ್ತೇನೆ ಎಂದರು. 

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸ್ವಾಮೀಜಿಗಳ ಕುರಿತಂತೆ ನೀಡಿರುವ ಹೇಳಿಕೆಯನ್ನು ಬಿಜೆಪಿಯವರು ವಿವಾದ ಮಾಡಿದ್ದಾರೆ ಎಂದ ಅವರು ಸಿದ್ಧರಾಮಯ್ಯನವರು ಎಲ್ಲಾ ಸ್ವಾಮೀಜಿಗಳೊಂದಿಗೆ ಗೌರವಯುತವಾಗಿ ಇದ್ದಾರೆ. ಯಾರೂ ಕೂಡಾ ಸಿದ್ಧರಾಮಯ್ಯನವರನ್ನು ದೂರಿಲ್ಲ. ಸಿದ್ಧರಾಮಯ್ಯನವರ ಆಡಳಿತದ 5 ವರ್ಷದ ಅವಧಿಯಲ್ಲಿ ಯಾವುದೇ ಒಬ್ಬನೇ ಒಬ್ಬ ಸ್ವಾಮೀಜಿ ಪ್ರತಿಭಟನೆ ಮಾಡಿಲ್ಲ. ಮೂಢನಂಬಿಕೆ ಬಿಲ್‌ ತರುತ್ತೇವೆ ಎಂದಾಗ ಅದನ್ನು ಕೂಡಲೇ ಕೈಬಿಟ್ಟರು. ಆದರೆ ಬಿಜೆಪಿಯವರು ಅದನ್ನು ಮತ್ತೆ ಜಾರಿ ಮಾಡಿದರು. ಬಿಜೆಪಿ ಸರಕಾರದಲ್ಲಿ ಎಲ್ಲಾ ಸ್ವಾಮೀಜಿಗಳು ಧರಣಿ ಕುಳಿತ್ತಿದ್ದಾರೆ. ಇದಕ್ಕೆ ಕಾರಣ ಯಾರು..? ಬಿಜೆಪಿಯ ನೀತಿಯಲ್ಲವೇ ಎಂದು ಖಾದರ್ ಪ್ರಶ್ನಿಸಿದರು. 

ಅರ್ಚಕರಿಗೆ ಅತ್ಯಧಿಕ ವೇತನ ಕೊಟ್ಟಿದ್ದು ಸಿದ್ಧರಾಮಯ್ಯ ಸರಕಾರ, ದೇಗುಲದ ನಿರ್ವಹಣೆಗೆ ದುಡ್ಡು ಕೊಟ್ಟಿದ್ದು ಸಿದ್ಧರಾಮಯ್ಯ ಸರಕಾರ. ಇವರು ಒಂದು ನಯಾ ಪೈಸೆ ಹೆಚ್ಚು ಮಾಡಿಲ್ಲ ಎಂದು ದೂರಿದರು.

ಇತ್ತೀಚಿನ ಸುದ್ದಿ

ಜಾಹೀರಾತು