6:53 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಬೈಲಹೊಂಗಲ: ಕಳ್ಳಭಟ್ಟಿ ಸಾರಾಯಿ ವಿರುದ್ಧ ಅಬಕಾರಿ ಇಲಾಖೆಯಿಂದ ಸರ್ಜಿಕಲ್ ಸ್ಟ್ರೈಕ್

26/03/2022, 10:09

ಬೈಲಹೊಂಗಲ(reporterkarnataka.com):

ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟದ ಕಡಿವಾಣಕ್ಕೆ ಬೈಲಹೊಂಗಲ ಅಬಕಾರಿ ಇಲಾಖೆಯ ಕಾರ್ಯಾಚರಣೆ ಮುಂದುವರಿಸಿದ್ದು, ಮಲ್ಲಾಪುರ್ ಕೆ.ಎನ್. ಗ್ರಾಮದ ಬಸ್ ನಿಲ್ದಾಣದಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಅಬಕಾರಿ ಇಲಾಖೆಯ ಅಧೀಕ್ಷಕ ಬಸವರಾಜು ಮೂಡಸಿ ಮತ್ತು ತಂಡ ಖಚಿತ ಮಾಹಿತಿ ಮೇರೆಗೆ ಬೈಲಹೊಂಗಲ ತಾಲ್ಲೂಕಿನ ನೇಸರ್ಗಿ ಹೋಬಳಿ ವ್ಯಾಪ್ತಿಗೆ ಬರುವ ಮಲ್ಲಾಪುರ್ ಕೆ.ಎನ್. ಗ್ರಾಮದ ಬಸ್ ನಿಲ್ದಾಣದಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಹನುಮಂತ ಬಸವಣೆಪ್ಪ ಆಲಿಯಾಸ್ ಲಕ್ಕಣ್ಣನವರ್ ಎಂಬಾತನ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ, ದಾಳಿ ಸಮಯದಲ್ಲಿ 2 ಲೀಟರ್  24  ಪ್ಲಾಸ್ಟಿಕ್ ಬಾಟಲಿಗಳಲ್ಲಿ ಕಳ್ಳ ಭಟ್ಟಿ ಸಾರಾಯಿ ಸಿಕ್ಕಿದ್ದು, ಒಟ್ಟು 24 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. 

ಬೈಲಹೊಂಗಲ ಅಧೀಕ್ಷಕ  ಬಸವರಾಜು ಮೂಡಸಿ ನೇತೃತ್ವದಲ್ಲಿ ನಡೆದ ಈ  ದಾಳಿಯಲ್ಲಿ ಉಪ ನಿರೀಕ್ಷಕ ಡಿ.ಎಸ್. ತಲ್ಲೂರ, ವೀರೇಶ್ ಯರಗೋಪ್ಪ, ಸಿಬ್ಬಂದಿಗಳಾದ ವಿ.ಎಂ. ಕೇರಾಳಿ, ಎನ್.ವೈ. ತಗರಿ

ಭಾಗವಹಿಸಿದ್ದರು. ಒಟ್ಟಾರೆ  ಅಕ್ರಮ ಕಳ್ಳಭಟ್ಟಿ ಮಾರಾಟಕ್ಕೆ ಕಡಿವಾಣಕ್ಕೆ ಬ್ರೇಕ್ ಹಾಕಲು ಮುಂದಾಗಿ ದಿನ ನಿತ್ಯ ಕಾರ್ಯಾಚರಣೆ ಮಾಡುತ್ತಿರುವ ಬೈಲಹೊಂಗಲ ಅಧೀಕ್ಷಕ ಬಸವರಾಜು ಮೂಡಸಿ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಅಬಕಾರಿ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು