2:39 AM Sunday9 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಕದ್ರಿ ದೇಗುಲ: ಊಟಕ್ಕೆ ಬಂದ ವಿದ್ಯಾರ್ಥಿಗಳಿಂದ ಹುಂಡಿ ಹಣ ಎಣಿಕೆ; ಕಳಂಕಿತ ಮಹಿಳಾ ಟ್ರಸ್ಟಿ ಆಗಮನಕ್ಕೆ ಆಕ್ಷೇಪ

24/03/2022, 14:27

ಮಂಗಳೂರು(reporterkarnataka.com): ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ಈ ಬಾರಿ ಹುಂಡಿ ಎಣಿಕೆಗೆ ಜನ ಬಾರದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಊಟಕ್ಕೆ ಬಂದ ವಿದ್ಯಾರ್ಥಿಗಳಿಂದಲೇ ಕಾಣಿಕೆ ಹಣ ಲೆಕ್ಕ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ.

ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಕಾಣಿಕೆ ಹುಂಡಿ ಹಗರಣ ಬೆಳಕಿಗೆ ಬಂದ ಬಳಿಕ ಗುರುವಾರ ಕ್ಷೇತ್ರದಲ್ಲಿ ಹುಂಡಿ ಎಣಿಕೆ ನಡೆಯುತ್ತಿದ್ದು, ಹುಂಡಿ ಹಣ ಕದ್ದ ಆರೋಪದ ಕಳಂಕಿತ ಮಹಿಳಾ ಟ್ರಸ್ಟಿ ಆಗಮಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಬೆಳಗ್ಗೆ 10. 30ಕ್ಕೆ ದೇವಸ್ಥಾನದ ಮಂಜುಶ್ರೀ ಸಭಾಬವನದಲ್ಲಿ ಹುಂಡಿ ಎಣಿಕೆ ಆರಂಭವಾಗಿದ್ದು, ಆಡಳಿತಾಧಿಕಾರಿ ಮತ್ತು ಒಬ್ಬರೇ ಟ್ರಸ್ಟಿ ಮನೋಹರ್ ಸುವರ್ಣ ಇದ್ದರು. 

ಸ್ವಲ್ಪ ಹೊತ್ತಿನ ಬಳಿಕ ಕಳಂಕಿತ ಮಹಿಳಾ ಟ್ರಸ್ಟಿ ಎಣಿಕೆ ನಡೆಯುತ್ತಿದ್ದ ಹಾಲ್ ಗೆ ಆಗಮಿಸಿದರು. ಇದಕ್ಕೆ ಆಡಳಿತಾಧಿಕಾರಿ ಬಳಿ ಆಕ್ಷೇಪ ವ್ಯಕ್ತಪಡಿಸಲಾಯಿತು. ಸ್ವಲ್ಪ ಸಮಯ ಕುಳಿತ ಬಳಿಕ ಆರೋಪಕ್ಕೊಳಗಾಗಿರುವ ಟ್ರಸ್ಟಿ ವಾಪಸ್ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಈ ನಡುವೆ ಇನ್ನೊಬ್ಬ ಟ್ರಸ್ಟಿಯವರು ಮಹಿಳಾ ಟ್ರಸ್ಟಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಠಾಣೆಯಿಂದ ನೇರವಾಗಿ ಹುಂಡಿ ಎಣಿಕೆ ನಡೆಯುವ ಕೊಠಡಿಗೆ ಮಹಿಳಾ ಟ್ರಸ್ಟಿ ಆಗಮಿಸಿದ್ದರು ಎನ್ನಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು