1:43 PM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

ಕೊಟ್ಟಿಗೆಹಾರ ನೋಡಬನ್ನಿ: ಮಲೆನಾಡಿನಲ್ಲಿ ಮಲ್ಲಿಗೆ ಕಂಪಿನಲ್ಲಿ ಘಮಘಮಿಸುವ ಕಾಫಿ ಹೂವು

23/03/2022, 09:28

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಪ್ರಕೃತಿ ಅನ್ನುವುದೇ ಒಂದು ಅದ್ಭುತ.ಅಲ್ಲಿನ ಗಿಡಮರಗಳು, ಪ್ರಾಣಿ ಪಕ್ಷಿಗಳು, ಪ್ರಕೃತಿಯಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ.

ಮಲೆನಾಡಿನಲ್ಲಿ ಮಳೆಯಿಂದಾಗಿ ಹಾಗೂ  ಕಾಫಿ ಗಿಡಕ್ಕೆ ನೀರನ್ನು ಸ್ಪ್ರಿಂಕ್ಲರ್ ಮೂಲಕ ಕೊಡುವುದರಿಂದ ಮಾರ್ಚ್ ತಿಂಗಳಲ್ಲಿ ಎಲ್ಲಿ ನೋಡಿದರೂ ಘಮಘಮಿಸುವ  ಕಾಫಿ ಹೂವು.  

ಇವತ್ತು ಬೆಳಿಗ್ಗೆ ತೋಟಕ್ಕೆ ಹೋದಾಗ ನಮ್ಮ ತೋಟದಲ್ಲಿ ಆದ ಕಾಫಿ ಹೂವು, ಎಲ್ಲಿ ನೋಡಿದರೂ ಮಲ್ಲಿಗೆಯಂತೆ ಅರಳಿನಿಂತ ಕಾಫಿ ಹೂವು, ಸಾವಿರಾರು ಜೇನುಹುಳುಗಳ ಪರಾಗಸ್ಪರ್ಶ ,ಕಾಫಿ ಹೂವಿಗೆ ಜೇನು ಹುಳಗಳ ಸಂಭ್ರಮವನ್ನು ನೋಡುವುದೇ ಒಂದು ಆನಂದ ಸುಮಾರು ಅರ್ಧ ಕಿಲೋಮೀಟರ್ ಕಾಫಿ ಹೂವಿನ ಪರಿಮಳ, ಹೂವಿನ ಮೇಲೆ ಇಬ್ಬನಿಯ ಸ್ಪರ್ಶ ,ಎಲ್ಲೆಡೆ ಹಕ್ಕಿಗಳ ನಾದ ನೋಡಬನ್ನಿ ಮಲೆನಾಡಿನಲ್ಲಿ ಮಲ್ಲಿಗೆ ಪರಿಮಳದ ಘಮಘಮಿಸುವ ಕಾಫಿ ಹೂವು , ಮಧುವನ್ನು ಹೀರಲು ಬರುವ ಜೇನುಹುಳ ಗಳನ್ನು ನೋಡುವುದೇ ಒಂದು ಹಬ್ಬ.  ಎಂತಹವರನ್ನು ಮೂಕವಿಸ್ಮಯ ನಾಗಿ ಮಾಡುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು