ಇತ್ತೀಚಿನ ಸುದ್ದಿ
ರಾಜ್ಯ ಸರಕಾರದಿಂದ ಜನತೆಯ ಜೇಬಿಗೆ ಕತ್ತರಿ : ಕೊರೊನಾದಿಂದ ತತ್ತರಿಸಿ ಹೋದ ನಡುವೆಯೆ ಈ ನಿರ್ಧಾರ !
10/06/2021, 05:42
ಬೆಂಗಳೂರು(Reporter Karnataka News) ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ದಿನ ಬಳಕೆಯ ವಸ್ತುಗಳ ದರ ಏರಿಕೆಯ ಹೊರೆ ಹೊರಲಾಗದೆ ಒದ್ದಾಡುತ್ತಿರುವ ಜನತೆಗೆ ರಾಜ್ಯ ಸರಕಾರ ವಿದ್ಯುತ್ ದರ ಏರಿಕೆ ಮಾಡಿ ಮತ್ತೊಂದು ಶಾಕ್ ನೀಡಿದೆ.
ಪ್ರತಿ ಯೂನಿಟ್ ವಿದ್ಯುತ್ ದರವನ್ನು ಸರಾಸರಿ 30 ಪೈಸೆ ಏರಿಕೆ ಮಾಡಲಾಗಿದೆ. ಒಟ್ಟಾರೆ ಸರಾಸರಿ ಶೇ. 3.84 ರಷ್ಟು ವಿದ್ಯುತ್ ದುಬಾರಿಯಾಗಿದೆ. ಏಪ್ರಿಲ್ 1 ರಿಂದಲೇ ಈ ಪರಿಷ್ಕೃತ ದರಗಳು ಜಾರಿಗೆ ಬಂದಿವೆ. ಮುಂದಿನ ಮೀಟರ್ ರೀಡಿಂಗ್ ವೇಳೆ ಈ ದರಗಳು ಅನ್ವಯವಾಗಲಿವೆ.
ಏಪ್ರಿಲ್ ಮತ್ತು ಮೇ ತಿಂಗಳ ದರ ಪರಿಷ್ಕರಣೆ ಬಾಕಿಯನ್ನು ಕೊರೊನಾ ಕಾರಣಕ್ಕೆ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ವಸೂಲಿ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶಿಸಿದೆ. ಉಪಚುನಾವಣೆ, ಪಂಚಾಯತ್ ಚುನಾವಣೆ ಮತ್ತು ಕೊರೊನಾ ಕಾರಣಕ್ಕೆ ದರ ಪರಿಷ್ಕರಣೆ ವಿಳಂಬವಾಗಿದೆ ಎಂದು ಆಯೋಗ ತಿಳಿಸಿದೆ.