11:47 AM Sunday26 - April 2026
ಬ್ರೇಕಿಂಗ್ ನ್ಯೂಸ್
ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು ಬಳ್ಳಾರಿ | ಪೊಲೀಸ್ ಶ್ವಾನಗಳ ಬಗ್ಗೆ ವಿಶೇಷ ಕಾಳಜಿ: ತಂಪಿಗಾಗಿ ಕೂಲರ್; ಕುಡಿಯಲು… ಶಿವಮೊಗ್ಗ | ಹುಡುಗಿ ವಿಚಾರಕ್ಕೆ ಅಪ್ರಾಪ್ತನಿಗೆ ಲಾಂಗಿನೇಟು: ತಲೆಗೇ ಸಿಲುಕಿಕೊಂಡ ಲಾಂಗ್ ಕಾಂತಾರ ದೈವ ಪಾತ್ರದ ಅನುಕರಣೆ ವಿವಾದ: ಬಾಲಿವುಡ್ ನಟ ರಣವೀರ್ ಚಾಮುಂಡೇಶ್ವರಿಯಲ್ಲಿ ಕ್ಷಮೆ… ಚಿಕ್ಕಮಗಳೂರು: ಸೊಪ್ಪು ತರಲು ಹೋದ ವೃದ್ಧೆ ಹೇಮಾವತಿ ನದಿಯಲ್ಲಿ ನೀರುಪಾಲು ಮೇಕೆದಾಟು ಕಾವೇರಿ ಸಂಗಮದಲ್ಲಿ ಆಟವಾಡುತ್ತಿದ್ದವರ ಮೇಲೆ ನುಗ್ಗಿಬಂದ ಕಾಡಾನೆ: ಎದ್ದು ಬಿದ್ದೋಡಿದ ಪ್ರವಾಸಿಗರು Kodagu | ವಿರಾಜಪೇಟೆ: 9 ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದ ಅರಣ್ಯ ಇಲಾಖೆ ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ?

ಇತ್ತೀಚಿನ ಸುದ್ದಿ

ಕಾರ್ಕಳ ಉತ್ಸವ: ಕಲ್ಕುಡ -ಕಲ್ಲುರ್ಟಿ, ಗೋಮಟೇಶ್ವರ ಎಲ್ಲಿ?; ಸ್ಟಿಕರ್ ನಿಂದ ಹೋರ್ಡಿಂಗ್ಸ್ ವರೆಗೆ ಸಚಿವರದ್ದೇ ಮುಖ !!

19/03/2022, 20:49

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ಅಲ್ಲಿ ಎತ್ತ ನೋಡಿದರೂ ಗೋಚರಿಸುವುದು ಒಂದೇ ಮುಖ. ಅದು ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಅವರದ್ದು. ಸಣ್ಣ ಸ್ಟಿಕರ್ ನಿಂದ ಆರಂಭಗೊಂಡು ಬ್ಯಾನರ್, ಹೋರ್ಡಿಂಗ್ಸ್, ಕಮಾನ್, ದ್ವಾರ ಎಲ್ಲ ಕಡೆ ಸಚಿವರದ್ದೇ ಫೋಟೋ. ಇದು ಕಾರ್ಕಳ ಉತ್ಸವ ನಡೆಯುತ್ತಿರುವ ಕಾರ್ಲದ ಒಂದು ಸಣ್ಣ ಝಳಕ್. 

ಕಾರ್ಕಳ ಉತ್ಸವ ಎಂದರೆ ಕರಾವಳಿ ಉತ್ಸವದ ತರಹ ಇಡೀ ಕಾರ್ಕಳದ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಅಲ್ಲಿ ಆಗಬೇಕಿತ್ತು. ಬ್ಯಾನರ್, ಕಮಾನ್, ಹೋರ್ಡಿಂಗ್ಸ್ ನಲ್ಲಿ ಅದು ಎದ್ದು ಕಾಣಬೇಕಿತ್ತು. ಅಲ್ಲಿ ಕಲ್ಕುಡ -ಕಲ್ಲುರ್ಟಿ ಬೇಕಿತ್ತು. ವೈರಾಗ್ಯಮೂರ್ತಿ ಗೋಮಟೇಶ್ವರ ಸ್ವಾಮಿ ಕಾಣಬೇಕಿತ್ತು. ಆದರೆ ಬ್ಯಾನರ್, ಕಮಾನ್, ದ್ವಾರಗಳಲ್ಲಿ ಅದ್ಯಾವುದೂ ಇರಲಿಲ್ಲ. ಕೇವಲ ಕನ್ನಡ ಮತ್ತು ಸಂಸ್ಕೃತಿ ಸಚಿವರ ಫೋಟೋ ಮಾತ್ರ.

ವಾಸ್ತವದಲ್ಲಿ ಕಾರ್ಕಳ ಎಂದರೆ ಮೊದಲಿಗೆ ನೆನಪಿಗೆ ಬರುವುದು ತುಳುನಾಡಿನ ಕಾರಣೀಕದ ದೈವಗಳಾದ

ಕಲ್ಕುಡ ಮತ್ತು ಕಲ್ಲುರ್ಟಿ, ಈ ದೈವಗಳನ್ನು ಕಾರ್ಕಳ ಮಾತ್ರವಲ್ಲದೆ ತುಳುನಾಡಿನುದ್ದಕ್ಕೂ ಆರಾಧಿಸಲಾಗುತ್ತಿದೆ. ಚರಿತ್ರೆಯತ್ತ ಮತ್ತೆ ಕಣ್ಣು ಹಾಯಿಸಿದಾಗ ವೈರಾಗ್ಯ ಮೂರ್ತಿ ಗೋಮಟೇಶ್ವರ ಸ್ವಾಮಿ ಕಣ್ಣ ಮುಂದೆ ಬರುತ್ತಾರೆ. ಹಾಗೆ ಮತ್ತೆ ಆಳಕ್ಕೆ ಹೋದಂತೆ ಭೈರವ ಅರಸು, ಚತುರ್ಮುಖ ಬಸದಿ, ಪಡುತಿರುಪತಿ, ಅತ್ತೂರು ಚರ್ಚ್, ರೆಂಜಾಳ ಗೋಪಾಲಕೃಷ್ಣ ಶೆಣೈ, ಭಾರತಕ್ಕೆ ವಿಶ್ವ ಕಪ್ ತಂದು ಕೊಟ್ಟ ನಾಯಕಿ ಮಮತಾ ಪೂಜಾರಿ ಮುಂತಾದವರು ಎದ್ದು ಕಾಣುತ್ತಾರೆ. ಆದರೆ

ಕಮಾನ್, ದ್ವಾರ, ಹೋರ್ಡಿಂಗ್ಸ್ ನಲ್ಲಿ ಇದ್ಯಾವುದೂ ಕಾಣಸಿಗುವುದಿಲ್ಲ. ತುಳು ಸಂಸ್ಕೃತಿ, ತುಳು ಪರಂಪರೆಯನ್ನು ನಂಬಿಕೊಂಡಿರುವ ಮಂದಿಗೆ ಇದೆಲ್ಲ ಆಘಾತ ಉಂಟು ಮಾಡಿದೆ.

ಇಡೀ ಕಾರ್ಕಳ ಉತ್ಸವದಲ್ಲಿ ಕಾರ್ಕಳಕ್ಕೆ ಸಂಬಂಧಪಟ್ಟ ಸಾಧಕರ, ಕಾರಣಿಕರ ಪುರುಷರ ಒಂದು ಚಿತ್ರವೂ ಹುಡುಕಿದರೂ ಎಲ್ಲಿಯೂ ಕಾಣಸಿಗುವುದಿಲ್ಲ (ವೇದಿಕೆಗಿಟ್ಟ ಹೆಸರಿನ ಹೊರತಾಗಿ). ಹಾಗಿರುವಾಗ ಇದು

ನಮ್ಮವರ ಉತ್ಸವ ಹೇಗಾದೀತು? ಇದಕ್ಕೆ ಪಾರಂಪರಿಕ ಸ್ಪರ್ಶ ಹೇಗೆ ಸಿಕ್ಕೀತು ಎಂದು ತುಳುನಾಡು ಜನತೆ ಪ್ರಶ್ನಿಸುತ್ತಿದ್ದಾರೆ.

ಕಾರ್ಕಳ ಉತ್ಸವದ ಅದ್ಭುತ ಪರಿಕಲ್ಪನೆ ನೀಡಿದವರು ಸಚಿವ ಸುನಿಲ್ ಕುಮಾರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಚಿವರ

ಈ ಪರಿಕಲ್ಪನೆ ನಿಜಕ್ಕೂ ಶ್ಲಾಘನೀಯ. ಆದರೆ ಆದರೆ ಇಡೀ ಉತ್ಸವ ನಡೆಯುವುದು ಜನಸಾಮಾನ್ಯರ ತೆರಿಗೆ ದುಡ್ಡಿನಿಂದ ಎನ್ನುವುದನ್ನು ಕೂಡ ಎಲ್ಲರು ಒಪ್ಪಲೇ ಬೇಕು. ವಾಸ್ತವಾಂಶ ಹೀಗಿರುವಾಗ ಯಾವುದೇ ಉತ್ಸವ ಒಬ್ಬ ವ್ಯಕ್ತಿಗೆ ಸೀಮಿತವಾಗಿರಬಾರದು. ಹೊರಗಿನಿಂದ ಬಂದವರಿಗೆ ಇದು ಊರಿನ ಉತ್ಸವ ಅಲ್ಲ… ಯಾರದೋ ವೈಭವೀಕರಣ ಅಂತ ಅನಿಸಬಾರದು ಎನ್ನುವುದೇ ಪ್ರಜ್ಞಾವಂತರ ಅಭಿಲಾಷೆ.

ಇತ್ತೀಚಿನ ಸುದ್ದಿ

ಜಾಹೀರಾತು