ಇತ್ತೀಚಿನ ಸುದ್ದಿ
ಸೌದಿ ಅರೇಬಿಯಾ: ಒಂದೇ ದಿನ 81 ಮಂದಿಗೆ ಮರಣದಂಡನೆ; 1980 ಬಳಿಕ ಮೊದಲ ದಾಖಲೆ
13/03/2022, 13:37
ರಿಯಾದ್(reporterkarnataka.com):
ಸೌದಿ ಅರೇಬಿಯ ರಾಜಾಡಳಿತವು ಶನಿವಾರ.ಬರೋಬ್ಬರಿ 81 ಮಂದಿಯನ್ನು ‘ಮರಣದಂಡನೆ’ಗೆ ಗುರಿಪಡಿಸಿದೆ.
ಒಂದೇ ದಿನ ಇಷ್ಟೊಂದು ಜನರನ್ನು ದಂಡನೆ ಮೂಲಕ ಸಾಯಿಸಿರೋದು ಇದೇ ದೊಡ್ಡ ಸಂಖ್ಯೆ. ಈ ಹಿಂದೆ 1979ರಲ್ಲಿ ಮೆಕ್ಕಾದ ಮಸೀದಿಯ ಮೇಲೆ ದಾಳಿ ಮಾಡಿದ್ದ ಪ್ರಕರಣದಲ್ಲಿ 63 ಉಗ್ರರನ್ನು 1980ರ ದಿನವೊಂದರಲ್ಲಿ ಮರಣದಂಡನೆಗೆ ಗುರಿಪಡಿಸಲಾಗಿತ್ತು. ಅದುವೇ ಸೌದಿ ಅರೇಬಿಯಾದ ದಿನವೊಂದರ ಮರಣದಂಡನೆ ದಾಖಲೆಯಾಗಿತ್ತು.
ಸೌದಿಯಲ್ಲಿ ಮರಣದಂಡನೆ ಶಿಕ್ಷೆ ವಿರಳವೇನಲ್ಲ. ಈ ಬಾರಿ ದಂಡನೆಗೊಳಗಾದವರು ಮುಗ್ಧ ಜನರು, ಮಹಿಳೆಯರ ಸಾವಿಗೆ ಕಾರಣರಾಗಿದ್ದರು ಎಂಬ ಪ್ರಕಟಣೆ ರಾಜಾಡಳಿತದಿಂದ ಹೊರಬಿದ್ದಿದೆ.
ಸೌದಿ ಅರೇಬಿಯಾವು ತನ್ನ ಪಕ್ಕದ ರಾಷ್ಟ್ರ ಯೆಮೆನ್ ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧ ಸೆಣೆಸುತ್ತಿದ್ದೆ. ಈಗ ಸೌದಿಯಲ್ಲಾಗಿರುವ ಮರಣದಂಡನೆಗಳೂ ಇದೇ ಸಂಬಂಧದ್ದು ಎಂದು ಹೇಳಲಾಗುತ್ತಿದೆ. ಮರಣದಂಡನೆಗೆ ಒಳಗಾದವರಲ್ಲಿ 73 ಸೌದಿಗಳು, 7 ಯೆಮನಿಯರು, ಒಬ್ಬ ಸಿರಿಯನ್ ಇದ್ದಾರೆ.