2:12 PM Wednesday4 - December 2024
ಬ್ರೇಕಿಂಗ್ ನ್ಯೂಸ್
ಕೇರಳದಲ್ಲಿ ಭೀಕರ ರಸ್ತೆ ಅಪಘಾತ: 5 ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ದಾರುಣ ಸಾವು ಫೆಂಗಲ್ ಎಫೆಕ್ಟ್: ಬೆಂಗಳೂರಿನಲ್ಲಿ ಸಾಧಾರಣ ಮಳೆ; ಎಂದಿನಂತೆ ತೆರೆದುಕೊಂಡ ಶಾಲಾ- ಕಾಲೇಜು ಕೂಡ್ಲಿಗಿ: ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರ ಬಂಧನ; ಸಾಮಗ್ರಿ ಜಪ್ತಿ ಮಲೆನಾಡಲ್ಲಿ ಫೆಂಗಲ್ ಅಬ್ಬರ: ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ; ಕಾಫಿ ಬೆಳೆಗಾರರು ಕಂಗಾಲು ತುಮಕೂರು: ಭೀಕರ ರಸ್ತೆ ಅಪಘಾತ; 3 ಮಂದಿ ಮಹಿಳೆಯರ ದಾರುಣ ಸಾವು ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರಗೆ ಮುಖ್ಯಮಂತ್ರಿ ಮೆಚ್ಚುಗೆ ಫೆಂಗಲ್ ಚಂಡಮಾರುತ: ದ.ಕ., ಉಡುಪಿ ಜಿಲ್ಲೆಯ ಶಾಲೆ ಹಾಗೂ ಪಿಯು ಕಾಲೇಜಿಗಳಿಗೆ ನಾಳೆ… ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ವೈಭವದ ಲಕ್ಷದೀಪೋತ್ಸವ ಸಂಪನ್ನ: ದಾಖಲೆ ಸಂಖ್ಯೆಯಲ್ಲಿ ನೆರೆದ… ಸಂಘ ಪರಿವಾರದ ಕೈಗೊಂಬೆಯಂತೆ ವರ್ತಿಸುವ ಪೊಲೀಸ್ ಕಮಿಷನರ್ ವರ್ಗಾಯಿಸಿ: ಪ್ರತಿಭಟನೆಯಲ್ಲಿ ಮುನೀರ್ ಕಾಟಿಪಳ್ಳ… ನಿಡುವಾಳೆ ಶ್ರೀ ರಾಮೇಶ್ವರ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ: ಬೆಳಗಿದ 3 ಸಾವಿರಕ್ಕೂ ಹೆಚ್ಚು…

ಇತ್ತೀಚಿನ ಸುದ್ದಿ

ಥೈರಾಯ್ಡ್ ಸಮಸ್ಯೆ: ಕಾರಣ ಏನು? ನಿಯಂತ್ರಣ ಹೇಗೆ?: ಡಾ. ಭವ್ಯ ಶೆಟ್ಟಿ ಬರೆಯುತ್ತಾರೆ

12/03/2022, 08:57

ಹೈಪೋಥೈರಾಯ್ಡಿಸಮ್ – ಇದು ಸಾಮಾನ್ಯವಾಗಿ ಕಂಡು ಬರುವತ್ತಿರುವ ಥೈರಾಯ್ಡ್ ಸಮಸ್ಯೆಯಾಗಿದೆ.  ನಮ್ಮ ಥೈರಾಯ್ಡ್ ಗ್ರಂಥಿಯು ನಿಗದಿತ ಪ್ರಮಾಣಕ್ಕಿಂತ  ಕಡಿಮೆ  ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸಿದಾಗ ಈ ಸಮಸ್ಯೆ ಸಂಭವಿಸುತ್ತದೆ. ಥೈರಾಯ್ಡ್ ಹಾರ್ಮೋನ್ ಚಯಾಪಚಯ ಕ್ರಿಯೆಯಂತಹ ಪ್ರಮುಖ ದೇಹದ ಪ್ರಕ್ರಿಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  ಆದರೆ ಹೈಪೋಥೈರಾಯ್ಡಿಸಮ್ ನ ಸಮಸ್ಯೆಯಿಂದಾಗಿ ದೇಹದ ಈ ಎಲ್ಲಾ ಪ್ರಕ್ರಿಯೆಗಳು ನಿಧಾನಗತಿಯಲ್ಲಿ ಸಾಗುತ್ತದೆ.



ಹೈಪೋಥೈರಾಯ್ಡಿಸಮ್  ಉಂಟಾಗಲು ಕಾರಣಗಳು :

    ●ಔಷಧಿಗಳು: ಲಿಥಿಯಂನಂತಹ ಕೆಲವು ಔಷಧಿಗಳು ಹೈಪೋಥೈರಾಯ್ಡಿಸಮ್ಗೆ ಕಾರಣವಾಗಬಹುದು.

    ●ಗರ್ಭಾವಸ್ಥೆ: ಗರ್ಭಾವಸ್ಥೆಯಲ್ಲಿ ಅಥವಾ ನಂತರ ಕೆಲವರಲ್ಲಿ ಹೈಪೋಥೈರಾಯ್ಡಿಸಮ್ ಉಂಟಾಗಬಹುದು .

    ●ಹೈಪರ್ ಥೈರಾಯ್ಡಿಸಮ್ ಚಿಕಿತ್ಸೆ: ಹೈಪರ್ ಥೈರಾಯ್ಡಿಸಮ್ (ಅತಿಯಾದ ಥೈರಾಯ್ಡ್) ಹೊಂದಿರುವ ಜನರು ವಿಕಿರಣಶೀಲ ಅಯೋಡಿನ್ ಚಿಕಿತ್ಸೆಗೆ ಒಳಗಾಗುವುದರಿಂದ ಥೈರಾಯ್ಡ್ ನ  ಕಾರ್ಯವನ್ನು ದುರ್ಬಲವಾಗುವುದರಿಂದ ಹೈಪೋಥೈರಾಯ್ಡಿಸಮ್ ಗೆ  ಕಾರಣವಾಗಬಹುದು.

    ●ಥೈರಾಯ್ಡ್ ಶಸ್ತ್ರಚಿಕಿತ್ಸೆ: ಬೇರೆ ಕಾರಣಗಳಿಂದ  ಥೈರಾಯ್ಡ್ ಗ್ರಂಥಿಯನ್ನು ತೆಗೆದುಹಾಕಿದ್ದರೆ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿ ಆಗುವುದಿಲ್ಲ.

    ●ವಿಕಿರಣ ಚಿಕಿತ್ಸೆ: ತಲೆ ಅಥವಾ ಕುತ್ತಿಗೆ, ಲಿಂಫೋಮಾ ಅಥವಾ ಲ್ಯುಕೇಮಿಯಾದಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸಲಾಗುವ ವಿಕಿರಣವು ಥೈರಾಯ್ಡ್ ಹಾರ್ಮೋನ್ ಉತ್ಪಾದನೆಯನ್ನು ನಿಧಾನಗೊಳಿಸಬಹುದು  ಇದು ಹೈಪೋಥೈರಾಯ್ಡಿಸಮ್ಗೆ ಕಾರಣವಾಗುತ್ತದೆ.

ಹೈಪೋಥೈರಾಯ್ಡಿಸಮ್ ಯಾರರೆಲ್ಲ ಕಂಡು ಬರಬಹುದು?

    ●ವಯಸ್ಸು ಮತ್ತು ಲಿಂಗ: ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಹಾಗು ವಯಸ್ಸಾದಂತೆ ಹೈಪೋಥೈರಾಯ್ಡ್ ಬರುವ ಸಾಧ್ಯತೆಗಳು ಹೆಚ್ಚು.

    ●ಕೌಟುಂಬಿಕ ಹಿನ್ನಲೆ: ನೀವು ಥೈರಾಯ್ಡ್ ಕಾಯಿಲೆ ಅಥವಾ ಯಾವುದೇ ಆಟೋಇಮ್ಯನ್  ಕಾಯಿಲೆಯ ಕುಟುಂಬದ ಹಿನ್ನಲೆ ಹೊಂದಿದ್ದರೆ.

    ●ಟೈಪ್ -1 ಮಧುಮೆಹ ಸಮಸ್ಯೆ ಇರುವವರಲ್ಲಿ ಕಂಡುಬರಬಹುದು.

ವಯಸ್ಕರಲ್ಲಿ ಚಿಹ್ನೆಗಳು ಮತ್ತು ಲಕ್ಷಣಗಳು:

    ●ತೂಕ ಹೆಚ್ಚಾಗುವುದು 

    ●ಆಯಾಸ

    ●ವಿಪರೀತ ಚಳಿಯ ಅನುಭವ 

    ●ಖಿನ್ನತೆ

    ●ಒಣ ಚರ್ಮ

    ●ಕೂದಲು ಉದುರುವುದು 

    ●ಮಹಿಳೆಯರಲ್ಲಿ ಮುಟ್ಟಿನಲ್ಲಿ ಏರುಪೇರು

    ●ನಿದ್ರಾಹೀನತೆ

    ●ಏಕಾಗ್ರತೆ ಇಲ್ಲದಿರುವುದು 

    ●ಕೀಲುಗಳ ನೋವು ಅಥವಾ ಊತ

    ●ಮಲಬದ್ಧತೆ

    ●ಅಧಿಕ ಕೊಲೆಸ್ಟ್ರಾಲ್ ಮಟ್ಟಗಳು

    ●ಸ್ನಾಯು ದೌರ್ಬಲ್ಯ

    ●ನಿಧಾನವಾದ ಹೃದಯ ಬಡಿತ

    ●ಮಹಿಳೆಯರಲ್ಲಿ ಅಂಡೋತ್ಪತ್ತಿಕಡಿಮೆಯಾಗಿ ಬಂಜೆತನ  ಉಂಟಾಗಬಹುದು.

ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಮತ್ತು ಚಿಹ್ನೆಗಳು:

    ●ಕುಂಠಿತ ಬೆಳವಣಿಗೆ ಅಥವಾ ಕಡಿಮೆ ಎತ್ತರ

    ●ತಡವಾದ ಪ್ರೌಢಾವಸ್ಥೆ

    ●ತೂಕ ಹೆಚ್ಚಳ 

    ●ಒರಟಾದ ಹಾಗು ಒಣ ಕೂದಲು, ಚರ್ಮ 

    ●ಸ್ನಾಯು ಸೆಳೆತ

    ●ಮಾನಸಿಕ ಬೆಳವಣಿಗೆಯ ವಿಳಂಬ

    ●ಮಲಬದ್ಧತೆ 

ಪತ್ತೆ ಹಚ್ಚುವ ವಿಧಾನ :

ವೈದ್ಯಕೀಯ ಪರೀಕ್ಷೆ :

ವೈದ್ಯರು ಸಂಪೂರ್ಣ ದೈಹಿಕ ಪರೀಕ್ಷೆ ಹಾಗು ವ್ಯಕ್ತಿ ಯ ಆರೋಗ್ಯ ಇತಿಹಾಸವನ್ನು ಗಮನಿಸಿ  ಹೈಪೋಥೈರಾಯ್ಡಿಸಮ್ನ ಲಕ್ಷಣಗಳನ್ನು ಆಧರಿಸಿ ಸಲಹೆಗಳನ್ನು ನೀಡುತ್ತಾರೆ.

ರಕ್ತ ಪರೀಕ್ಷೆ

ಸಾಮಾನ್ಯವಾಗಿ ಸೂಚಿಸುವ ಪರೀಕ್ಷೆ ಅಂದರೆ ಅತ್ಯಂತ TSH  ಕೆಲವು ಸಂದರ್ಭಗಳಲ್ಲಿ, ವೈದ್ಯರು ಟ್ರೈ ಐಯೋಡೋ ಥೈರಾನಿನ್, ಥೈರಾಕ್ಸಿನ್  ಅನ್ನು ಸಹ ಉಲ್ಲೇಖಿಸಬಹುದು.

ಆಂಟಿ-ಥೈರಾಯ್ಡ್ ಮೈಕ್ರೋಸೋಮಲ್ ಪ್ರತಿಕಾಯಗಳ ಪರೀಕ್ಷೆ

ಆಂಟಿ-ಟಿಪಿಒ

ಚಿಕಿತ್ಸೆ :

ಹೊಮಿಯೋಪತಿ ಚಿಕಿತ್ಸೆಯಲ್ಲಿ  ಯಾವುದೇ ರೀತಿಯ  ಹೊರ್ಮೋನ್ಗಳನ್ನು ಹೊರಗಿನಿಂದ ಕೃತಕವಾಗಿ ನೀಡಲಾಗುವುದಿಲ್ಲ. ಬದಲಾಗಿ ಥೈರಾಯಿಡ್ ಗ್ರಂಥಿಯನ್ನು ನೈಸರ್ಗಿಕವಾಗಿ ಹೊರ್ಮೋನ್ ಉತ್ಪಾದಿಸುವಂತೆ ಪ್ರಚೋದಿಸಲಾಗುತ್ತದೆ.ದೇಹವು  ಒಮ್ಮೆ  ಹಾರ್ಮೋನ್ ಸಮತೋಲನವನ್ನು ಸಾಧಿಸಿದ ಮೇಲೆ ಔಷಧವನ್ನು ನಿಲ್ಲಿಸಬಹುದು. ಜೀವನಪರ್ಯಂತ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಅಷ್ಟೇ ಅಲ್ಲದೆ ಯಾವುದೇ ರೀತಿಯ ತೀವ್ರತರವಾದ ಅಡ್ಡ ಪರಿಣಾಮಗಳು ಭಯವಿಲ್ಲ.

ನೈಸರ್ಗಿಕ ಪರಿಹಾರಗಳು

    ●ನಾನ್ ಸ್ಟಿಕ್ ಕುಕ್ ವೇರ್ ಬಳಸಬೇಡಿ

    ●ಸೋಯಾಬೀನ್ : ಸೋಯಾ ಥೈರಾಯ್ಡ ಹಾರ್ಮೋನುಗಳ ಅಸಮತೋಲನವನ್ನು ಉಂಟು ಮಾಡುತ್ತದೆ.

    ●ಫೈಬರ್ ನ್ನು ಹೊಂದಿರುವ ಆಹಾರವನ್ನು  ಹೆಚ್ಚು ಸೇವಿಸಬೇಕು .

    ●ವ್ಯಾಯಾಮ:ದೈಹಿಕ ವ್ಯಾಯಾಮ ಚಟುವಟಿಕೆಯನ್ನು ಮಾಡುವುದು.

    ●ಅಯೋಡಿನ್: ಥೈರಾಯ್ಡ್ ಸೂಕ್ತವಾಗಿ ಕೆಲಸ ಮಾಡಲು ಅಯೋಡಿನ್ ಅಗತ್ಯವಿದೆ ಮತ್ತು ಅಯೋಡಿನ್ ಕೊರತೆಯ ದುಷ್ಪರಿಣಾಮಗಳನ್ನು ಈಗ ಬಹಳಷ್ಟು ವ್ಯಕ್ತಿಗಳು ಅನುಭವಿಸುತ್ತಿದ್ದಾರೆ.ಅಯೋಡಿನ್ ಹೊಂದಿರುವ ಉಪ್ಪಿನ ಸೇವನೆ ಒಳ್ಳೆಯ ಪರಿಹಾರ.

    ●ದೇಹವು ಸ್ವತಃ ಚೇತರಿಸಿಕೊಳ್ಳಲು, ಸಕ್ರಿಯಗೊಳಿಸಲು, ಅದರ ಪ್ರತಿರಕ್ಷಣಾ ವ್ಯವಸ್ಥೆಯ ಮೇಲಿನ ಹೊರೆಗಳನ್ನು ತೆಗೆದುಹಾಕಲು  ಪ್ರತಿಯೊಂದು ಸಂಸ್ಕರಿತ ಆಹಾರ,  ಆಹಾರದಲ್ಲಿ ಕೃತಕ ಬಣ್ಣದ ಬಳಕೆ,  ಸಕ್ಕರೆ, ಮೈದಾ, ಅಲ್ಯೂಮಿನಿಯಂ ಇತ್ಯಾದಿಗಳ ಸೇವನೆಯನ್ನು  ಮಾಡಬಾರದು.

    ●ಪೇರಳೆ ಮತ್ತು ಸೇಬುಗಳು: ಸೇಬಿನ ರಸದೊಂದಿಗೆ ಪೇರಳೆ ರಸವನ್ನು ಬೆರೆಸಿ ನಿಯಮಿತವಾಗಿ ಕುಡಿಯಿರಿ.

    ●ತೆಂಗಿನ ಎಣ್ಣೆ: ನೈಸರ್ಗಿಕ ತೆಂಗಿನ ಎಣ್ಣೆಯನ್ನು ಪ್ರತಿದಿನ ಸುಮಾರು 1 ಟೀಸ್ಪೂನ್ ತೆಗೆದುಕೊಳ್ಳಿ ಅಥವಾ  ಅದನ್ನು ಅಡುಗೆಯಲ್ಲಿ ಬಳಸುವುದುದರಿಂದ, ತೆಂಗಿನ ಎಣ್ಣೆಯು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಥೈರಾಯ್ಡ್ ಹಾರ್ಮೋನ್ ಉತ್ಪಾದನೆಯನ್ನು ಸುಧಾರಿಸುತ್ತದೆ.

ಡಾ. ಭವ್ಯ ಶೆಟ್ಟಿ  BHMS, PGDND

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

📞8904316163    ●

ಇತ್ತೀಚಿನ ಸುದ್ದಿ

ಜಾಹೀರಾತು