12:40 PM Saturday31 - January 2026
ಬ್ರೇಕಿಂಗ್ ನ್ಯೂಸ್
ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:…

ಇತ್ತೀಚಿನ ಸುದ್ದಿ

ಉಕ್ರೇನ್ ನಲ್ಲಿ ಸಿಲುಕಿದ್ದ ಅಥಣಿ ವಿದ್ಯಾರ್ಥಿಗಳಾದ ರಕ್ಷಿತಾ ಗಣಿ, ಆಫ್ರಿನ್ ನಿಡೋಣಿ ಮರಳಿ ತಾಯ್ನಾಡಿಗೆ

11/03/2022, 09:26

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿದ್ದ ಅಥಣಿಯ ವಿದ್ಯಾರ್ಥಿಗಳಾದ ರಕ್ಷಿತಾ ಗಣಿ, ಆಫ್ರಿನ್ ನಿಡೋಣಿ ಮರಳಿ ತಾಯ್ನಾಡಿಗೆ ಬಂದಿದ್ದಾರೆ.

ಮರಳಿ ಬಂದ ಮಕ್ಕಳಿಗೆ ಕುಟುಂಬಸ್ಥರು ಆರತಿ ಎತ್ತಿ ಸ್ವಾಗತ ಕೋರಿದರು.
ಮಕ್ಕಳ ತಬ್ಬಿಕೊಂಡು ತಾಯಿ ತಂದೆ ಬಾವುಕರಾದರು.

ನಾವು ಮರಳಿ ತಾಯ್ನಾಡಿಗೆ ಬರುತ್ತೇವೆ ಎಂಬ ನಂಬಿಕೆ ನಮಗೆ ಇರಲಿಲ್ಲ ಎಂದು ಉಕ್ರೇನಿನ ರಣ ಭೀಕರ ಕಹಾನಿಯನ್ನು ವಿದ್ಯಾರ್ಥಿಗಳು ಬಿಚ್ಚಿಟ್ಟರು.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ದೇಶಕ್ಕೆ ಹೋದ ಅದೆಷ್ಟೋ ವಿದ್ಯಾರ್ಥಿಗಳಿಗೆ ಭಾರತದ ತ್ರಿರಂಗ ಧ್ವಜ ರಕ್ಷಾ ಕವಚ ವಾಗಿತ್ತು. ನಾವು ನಮ್ಮ ದೇಶದ ಬಾವುಟ ತೋರಿಸಿ ಸುರಕ್ಷಿತವಾಗಿ ನಮ್ಮ

ತಾಯ್ನಾಡಿಗೆ ಬಂದಿದ್ದೇವೆ. ಅದು ಅಲ್ಲಿ ನಮ್ಮ ದೇಶಕ್ಕಿರೋ ಗೌರವ.ಬೇರೆ ದೇಶದವರು ನಮ್ಮ ದೇಶದ ಭಾವುಟ ಹಿಡಿದು ರಕ್ಷಣೆ

ಪಡೆದಿದ್ದಾರೆ. ಇದು ನಮ್ಮ್ ದೇಶದ ತಾಕತ್ತು ಎಂದು ತಾಯ್ನಾಡಿಗೆ ಮರಳಿದ ವಿದ್ಯಾರ್ಥಿಗಳಾದ ರಕ್ಷಿತಾ ಗಣಿ ಹಾಗೂ ಆಫ್ರಿನ್ ನಿಡೋಣಿ ಹೇಳಿದರು.

ಮರಳಿ ಬರಲು ಸಹಾಯ ಮಾಡಿದ ಇಂಡಿಯನ್ ಎಂಬೆಸಿ, ಭಾರತ ಸರಕಾರ, ರಾಜ್ಯ ಸರ್ಕಾರಕ್ಕೆ ಮತ್ತು ಅಥಣಿ ಸ್ಥಳೀಯ ತಹಸೀಲ್ದಾರ್ ದುಂಡಪ್ಪ ಕೋಮಾರ ಅವರಿಗೆ ವಿಶೇಷ ಅಭಿನಂದನೆ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು