7:48 PM Saturday31 - January 2026
ಬ್ರೇಕಿಂಗ್ ನ್ಯೂಸ್
ಗೃಹ ಸಚಿವರ ರಾಜೀನಾಮೆ, ಪೊಲೀಸ್ ಕಮೀಷನರ್ ಅಮಾನತಿಗೆ ಬಿಜೆಪಿ ಆಗ್ರಹ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ

ಇತ್ತೀಚಿನ ಸುದ್ದಿ

ಎಸ್ ಸಿಐ ‘ಬಂಟ್ವಾಳ ನೇತ್ರಾವತಿ ಸಂಗಮ’ ಉದ್ಘಾಟನೆ: ನೂತನ ಅಧ್ಯಕ್ಷ ಜಯಾನಂದ ಪೆರಾಜೆ 

10/03/2022, 20:01

ಬಂಟ್ವಾಳ(reporterkarnataka.com):
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ‘ಬಂಟ್ವಾಳ ನೇತ್ರಾವತಿ ಸಂಗಮ’ ಲೀಜನ್ ನ ನೂತನ ಪದಗ್ರಹಣ ಸಮಾರಂಭ ಇತ್ತೀಚೆಗೆ ಬಿ.ಸಿ. ರೋಡ್ ನ ಪದ್ಮ ಕಾಂಪ್ಲೆಕ್ಸ್ ನಲ್ಲಿ ಜರುಗಿತು. ಸಮಾರಂಭದ ಮುಖ್ಯ ಅತಿಥಿಯಾದ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನ ರಾಷ್ಟ್ರೀಯ ಅಧ್ಯಕ್ಷ ಡಾ. ಕೇದಿಗೆ ಅರವಿಂದ ರಾವ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಇಂದಿನ ಈ ಕಾರ್ಯಕ್ರಮವು ಹೆಸರಿಗೆ ತಕ್ಕ ಹಾಗೆ ನೇತ್ರಾವತಿ ಸಂಗಮದಂತೆ ಮೂಡಿದೆ ಎಂದು ನುಡಿದರು. ಅತಿಥಿಗಳಾಗಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಜಿ.ಎಂಡ್ ಡಿ ಹಾಗೂ ಉಡುಪಿ ಟೆಂಪಲ್ ಸಿಟಿ ಲೀಜನ್ ನ ಚಿತ್ರ ಕುಮಾರ್ ಹಾಗೂ ಜಿ.ಎಂಡ್ ಜಿ   ನವೀನ್ ಅಮೀನ್ ಉಪಸ್ಥಿತರಿದ್ದರು. 


ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಅಧಿಕಾರಿ ಜಯಪ್ರಕಾಶ್ ರಾವ್, ಎಸ್.ವಿ.ಎಸ್ ಕಾಲೇಜ್ ನ ನಿವೃತ್ತ ಪ್ರೊಫೆಸರ್ ವೃಷಭನಾಥ್ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ‘ಬಂಟ್ವಾಳ ನೇತ್ರಾವತಿ ಸಂಗಮ’ ಲೀಜನ್ ನ ನೂತನ ಅಧ್ಯಕ್ಷರಾಗಿ ಪತ್ರಕರ್ತ ಜಯಾನಂದ ಪೆರಾಜೆ ಆಯ್ಕೆಯಾದರು. ಕಾರ್ಯದರ್ಶಿಯಾಗಿ  ಬಿ.ಸತ್ಯನಾರಾಯಣ, ಖಜಾಂಚಿಯಾಗಿ ರಾಮಚಂದ್ರ ಭಟ್ ಬಿ. ಅವರನ್ನು ಆಯ್ಕೆ ಮಾಡಲಾಯಿತು. ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್  ಮಂಗಳೂರು ಲೀಜನ್ ಅಧ್ಯಕ್ಷ ಹರಿಪ್ರಸಾದ್ ಕಾರಮೊಗರಗುತ್ತು ಜಯಾನಂದ ಪೆರಾಜೆಯವರಿಗೆ ಪ್ರಮಾಣ ವಚನ ಬೋಧಿಸಿದರು. ಉಳಿದ ಪದಾಧಿಕಾರಿಗಳು ಜಿ.ಎಂಡ್ ಡಿ ಚಿತ್ರಕುಮಾರ್ ಅವರಿಂದ ಪ್ರಮಾಣವಚನ ಸ್ವೀಕರಿಸಿದರು. ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನ್ ಕಾರ್ಯದರ್ಶಿ ಶಾಲಿನಿ ಪ್ರಶಾಂತ್ ಸುವರ್ಣ, ಎಸ್.ಸಿ.ಐ ನ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಕೇದಿಗೆ ಅರವಿಂದ್ ರಾವ್ ಅವರ ಕಿರು ಪರಿಚಯ ಮಾಡಿದರೆ, ಎಸ್.ಸಿ.ಐನ ಉಡುಪಿ ಲೀಜನ್ ನ ಚಿತ್ರಕುಮಾರ್ ಹಾಗೂ ನವೀನ್ ಅಮೀನ್ ಅವರುಗಳ ಕಿರುಪರಿಚಯವನ್ನು ಕ್ರಮವಾಗಿ  ಮಂಗಳೂರು ಲೀಜನ್ ನ ಸದಸ್ಯೆಯರಾದ ಲತಾ ಕಲ್ಲಡ್ಕ ಹಾಗೂ ಫ್ಲೇವಿ ಗ್ಲ್ಯಾಡಿಸ್ ಡಿಮೆಲ್ಲೋ ಮಾಡಿದರು. ಕಾರ್ಯಕ್ರಮದಲ್ಲಿ  ಬಂಟ್ವಾಳ ನೇತ್ರಾವತಿ ಲೀಜನ್ ನ ಸದಸ್ಯರಾದ  ಪಿ.ಎ. ರಹೀಂ, ಸುಲೈಮಾನ್ ಬಂಟ್ವಾಳ, ಮಹಮ್ಮದ್, ಪಿಂಕಿ ಸ್ಟುಡಿಯೊ ಮಾಲಕರು, ವಕೀಲೆ ಗಾಯತ್ರಿ, ಎಸ್.ಸಿ.ಐನ ಸದಾನಂದ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು. ಮಂಗಳೂರು ಲೀಜನ್ ಅಧ್ಯಕ್ಷ ಹರಿಪ್ರಸಾದ್ ಕಾರಮೊಗರುಗುತ್ತು ಸ್ವಾಗತಿಸಿದರು. ಬಂಟ್ವಾಳ ಲೀಜನ್ ನ ಖಜಾಂಚಿ ರಾಮಚಂದ್ರ ಭಟ್ ಬಿ. ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಅಹ್ಮದ್ ಮುಸ್ತಾಫ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು