ಇತ್ತೀಚಿನ ಸುದ್ದಿ
ಅಂತರರಾಜ್ಯ ಕಳ್ಳನ ಸೆರೆ: ಬರೋಬ್ಬರಿ 11 ಪ್ರಕರಣಗಳಲ್ಲಿ ಭಾಗಿ; 52.68 ಲಕ್ಷ ರೂ .ಮೌಲ್ಯದ ಚಿನ್ನಾಭರಣ ವಶ
10/03/2022, 19:25

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಅಂತರರಾಜ್ಯ ಕಳ್ಳ ನೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ನಗರ ಠಾಣೆ ಅಪರಾಧ ವಿಭಾಗದ ಪೊಲೀಸರು ನಗದು ಸೇರಿದಂತೆ 52.68 ಲಕ್ಷ ರೂ. ಬೆಲೆಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆ ಮುದಿಗೆರೆ ಗ್ರಾಮದ ರಂಗೇಗೌಡ ಅಲಿಯಾಸ್ ಸಂತೋಷ್ ನನ್ನು ಬಂಧಿಸಿರುವ ಪೊಲೀಸರು ಭಾರಿ ಬೇಟೆಯಾಡಿದ್ದಾರೆ .
ಚಿಕ್ಕಮಗಳೂರು ನಗರ ಠಾಣೆ ವ್ಯಾಪ್ತಿಯಲ್ಲಿ 4 , ಗ್ರಾಮಾಂತರ ಠಾಣೆ ಕಡೂರು ಹಾಗೂ ಹಾಸನದಲ್ಲಿ ತಲಾ 1 ,ಮೈಸೂರು ಮತ್ತು ಮಂಡ್ಯ ಗಳಲ್ಲಿ ತಲಾ 2 ಪ್ರಕರಣದಲ್ಲಿ ಈತ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯಿಂದ 6 ಸಾವಿರ ರೂ ನಗದು ,44.68 ಲಕ್ಷ ರೂ ಬೆಲೆಬಾಳುವ 899 ಗ್ರಾಂ ಚಿನ್ನದ ಗಟ್ಟಿ ,1.20 ಲಕ್ಷ ರೂ ಬೆಲೆಬಾಳುವ 166 ಗ್ರಾಂನ ಬೆಳ್ಳಿ ಆಭರಣ ಹಾಗೂ 1ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ,