8:43 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಜೇಸಿಐ ಬಿ.ಸಿ.ರೋಡ್ ವತಿಯಿಂದ ಮಹಿಳಾ ದಿನಾಚರಣೆ: ಸಾಧಕಿಯರಿಬ್ಬರಿಗೆ ಸನ್ಮಾನ

10/03/2022, 19:11

ಬಂಟ್ವಾಳ(reporterkarnataka.com): ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ  ಜೇಸಿಐ ಬಿ.ಸಿ.ರೋಡ್ ಪವರ್ ಸ್ಟಾರ್” ವತಿಯಿಂದ ಮಹಿಳಾ ಸಾಧಕಿಯರಿಬ್ಬರನ್ನು ಸನ್ಮಾನಿಸಲಾಯಿತು.

ಗಾಂದೋಡಿನ ಅಂಗನವಾಡಿ ಕೇಂದ್ರದಲ್ಲಿ ಸುಮಾರು 30 ವರುಷದಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಾಂಸ್ಕೃತಿಕ ಸಂಘಟಕಿ, ಸಾಮಾಜಿಕ‌ ಕಾರ್ಯಕರ್ತೆ ಸರೋಜಾ ಪ್ರಕಾಶ್ ಹಾಗೂ ಹೋಮಿಯೋಪತಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ವಿಷಯದಲ್ಲಿ  4ನೇ ಶ್ರೇಣಿ ಪಡೆದು ತೇರ್ಗಡೆ ಹೊಂದಿರುವ ಸಾಧಕಿ ಡಾ. ಪ್ರಣಮ್ಯ ಜೈನ್ ರಾಯಿ  ಅವರನ್ನು‌ ಸನ್ಮಾನಿಸಿ‌ ಅಭಿನಂದಿಸಲಾಯಿತು. 

ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಕಾಡುಮಠ ವಹಿಸಿದ್ದರು. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಹೇಮಚಂದ್ರ ಶೆಟ್ಟಿಗಾರ್,ಜಗದೀಶ್ ಕೊಯಿಲ,ರಾಘವೇಂದ್ರ ರಾಯಿ, ಸತೀಶ್ ಕೊಯಿಲ,ರೀಟಾ ಮಾರಿಯಾ ಮೆನೇಜಸ್  ಉಪಸ್ಥಿತರಿದ್ದರು.   ಸರೋಜಾ ಪ್ರಕಾಶ್ ಅವರನ್ನು ಅಂಗನವಾಡಿ ಕೇಂದ್ರದಲ್ಲಿ ಹಾಗೂ ಡಾ. ಪ್ರಣಮ್ಯ ಜೈನ್ ರಾಯಿ ಅವರನ್ನು‌ ಅವರ ಸ್ವಗೃಹದಲ್ಲಿ ಅಭಿನಂದಿಸಲಾಯಿತು. ಭವಾನಿ ಶೆಟ್ಟಿ ,ಸುಭಾಶ್ ರೈ, ಸತೀಶ್ ಸಂಪಾಜೆ,ಮಹೇಶ್ ಶೆಟ್ಟಿ, ವಿದ್ಯಾ ಎಸ್. ರೈ ಉಪಸ್ಥಿತರಿದ್ದರು. ಆಶಾ ದಿನೇಶ್ ಶೆಟ್ಟಿ ಹಾಗೂ ಮರೀಟಾ ಕ್ರಿಸ್ಟಿನ್ ಡಿಸೋಜಾ ಸನ್ಮಾನಿತರ ಪರಿಚಯಿಸಿದರು. 

ಸುಧೀರ್ ಕುಮಾರ್ ಶೆಟ್ಟಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು