2:26 PM Monday15 - September 2025
ಬ್ರೇಕಿಂಗ್ ನ್ಯೂಸ್
ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ…

ಇತ್ತೀಚಿನ ಸುದ್ದಿ

ಮಾತೃತ್ವ ಅನ್ನೋದು ಇಡೀ ಸಮಾಜಕ್ಕೆ ಹೊರತು ಕೇವಲ ಹೆಣ್ಣಿಗೆ ಅಲ್ಲ: ಜ್ಯೋತಿ ಚೇಳ್ಯಾರು

09/03/2022, 22:54

ಮಂಗಳೂರು(reporterkarnataka.com):

ಪ್ರಜಾಪ್ರಭುತ್ವ ಆಶಯದಲ್ಲಿ ಎಲ್ಲರೂ ಸಮಾನರಾಗಿ, ಎಲ್ಲರೂ ಸಮತತ್ವ ನ್ಯಾಯದಲ್ಲಿ ಸಾಗುವುದಕ್ಕೆ   ಸಾಧ್ಯವಾಗಬೇಕು. ಇಲ್ಲಿ ಎಲ್ಲರೂ ತಾಯ್ತನದ ಭಾವ, ಮಾತೃತ್ವದ ಭಾವವನ್ನು ಹೊಂದಿಕೊಂಡಿರಬೇಕು. ಮಾತೃತ್ವ ಅನ್ನೋದು ಅದು ಕೇವಲ ಹೆಣ್ಣಿಗೆ ಮಾತ್ರ ಮೀಸಲಲ್ಲ ಅದು ಗಂಡು ಹಾಗೂ ಇಡೀ ಸಮಾಜ ಅಳವಡಿಸಿಕೊಳ್ಳಬೇಕು ಎಂದು ಎರ್ಮಾಳು
ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಚೇಳ್ಯಾರು ಅಭಿಪ್ರಾಯಪಟ್ಟರು.

ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ 111 ವರುಷಗಳ ಸಂಭ್ರಮದ ನೆನಪಿನಲ್ಲಿ ಸಮಾನ ಮನಸ್ಕ ಸಂಘಟನೆಯು ಮಂಗಳೂರಿನಲ್ಲಿ ಆಯೋಜಿಸಿದ “ಮಹಿಳಾ ಸಮಾನತೆ ಹಾಗೂ ಪ್ರಜಾಪ್ರಭುತ್ವ” ಎಂಬ ವಿಷಯದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

ಇಡೀ ಜಗತ್ತಿನಲ್ಲಿ ಇರುವ ಕೆಲವೇ ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಮಾತೃಮೂಲ ಕುಟುಂಬ ಇರುವುದು ಕರಾವಳಿಯಲ್ಲಿ ಮಾತ್ರ. ನಮ್ಮ ಕರಾವಳಿಯಲ್ಲಿ ಮಾತೃ ಮೂಲ ಕುಟುಂಬ ವ್ಯವಸ್ಥೆ ಇದ್ದ ಕಾರಣ ಹೆಣ್ಣಿಗೆ ಆಸ್ತಿಯ ಒಡೆತನದ ಹಕ್ಕು ಸಿಕ್ಕಿತ್ತು. ಉಳಿದ ಎಲ್ಲಾ ಪ್ರದೇಶಗಳಲ್ಲಿ ಗಮನಿಸಿದರೆ ಹೆಣ್ಣಿಗೆ ಸಿಗುವ ಸ್ಥಾನಮಾನಗಳು, ಆಸ್ತಿಯ ಹಕ್ಕುಗಳು ಕುಟುಂಬದ ಒಳಗೆ ಮತ್ತು ಹೊರಗೆ ನಮ್ಮ ಮಾತೃ ಕೇಂದ್ರಿತ ಕರಾವಳಿಯೂ ಸೇರಿ ಹೆಣ್ಣನ್ನು ಮೂಲೆಗೆ ಕೂರಿಸುವಂತಹ ಕೆಲಸಗಳು ಆಗುತ್ತಿವೆ. ಹೆಣ್ಣಿನ ಕೈಗೆ ಭೂಮಿ, ಆಸ್ತಿ, ಕುಟುಂಬದ ಯಜಮಾನಿಕೆಯನ್ನು ಕೊಡುವಂತಹ ವ್ಯವಸ್ಥೆ ಇದ್ದ ಈ ಕರಾವಳಿಯಲ್ಲೇ ಈಗಿನ ಆಧುನಿಕ ಯುಗದಲ್ಲಿ ಮಾತೃಮೂಲ ಕುಟುಂಬ ವ್ಯವಸ್ಥೆ ನಾಜೂಕಾಗಿ ಪಿತೃ ಪ್ರಧಾನದ ಕಡೆಗೆ ಬದಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಎಲ್ಲರೂ ಮೊನ್ನೆ ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯಾಟ ಗಮನಿಸಿರಬಹುದು. ಭಾರತ ಪಾಕಿಸ್ತಾನ ಕ್ರಿಕೇಟ್ ಪಂದ್ಯ ಅಂದರೆ ಒಂದು ಪರಸ್ಪರ ಯುದ್ದವೇ ನಡೆದಂತೆ. ಭಾರತ ಪಾಕಿಸ್ತಾನ ಮಹಿಳಾ ತಂಡದ ಕ್ರಿಕೇಟ್ ನಲ್ಲಿ ಭಾರತ ಮಹಿಳಾ ತಂಡ ಗೆದ್ದು ಪಾಕಿಸ್ತಾನದ ತಂಡ ಸೋಲನ್ನಪ್ಪಿತು. ಆಟ ಅಂಗಳದಲ್ಲಿ ಮುಗಿದ ನಂತರ ಪಾಕಿಸ್ತಾನ ತಂಡದ ಹೆಣ್ಣೊಬ್ಬಳ ಪುಟ್ಟ ಮಗುವನ್ನು ಭಾರತ ತಂಡದ ಆಟಗಾರರು ಎತ್ತಿಕೊಂಡು ಸಂಭ್ರಮಿಸಿ ತಾಯ್ತನದ ಸವಿಯನ್ನು ಹಂಚಿಕೊಂಡರು.  ಅದು ಈ ಅಂತಾರಾಷ್ಟ್ರೀಯ ಮಹಿಳಾ  ದಿನಕ್ಕೊಂದು ಒಳ್ಳೆಯ ಸಂದೇಶ. ಯಾಕೆಂದರೆ ಇಲ್ಲಿ ದೇಶಗಳ ಗಡಿಯಿಲ್ಲ, ಭಾಷೆಗಳ ಗಡಿಯಿಲ್ಲ ಮತ್ತು ಭಾವಕ್ಕೆ ಯಾವ ಗಡಿಗಳೂ ಇಲ್ಲ ಅನ್ನೋದನ್ನು ಸಮಾಜ ಅರ್ಥಮಾಡಿಕೊಳ್ಳಬೇಕು ಎಂದರು.

ಪೂರಕ ಮಾತುಗಳನ್ನಾಡಿದ ಫ್ರೌಢಶಾಲಾ ಶಿಕ್ಷಕರಾದ ಡಾ.ಪೌಲಿ ಎನ್.ವಿ., ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲಿಕ್ಕಾಗಿ ಸಮರಧೀರ ಹೋರಾಟ ನಡೆಸಿ ಜಯ ಗಳಿಸಿರುವ ಹಿನ್ನೆಲೆಯಲ್ಲಿ ಚಾಲ್ತಿಗೆ ಬಂದ ವಿಶ್ವ ಮಹಿಳಾ ದಿನಾಚರಣೆಯ ಹಿಂದೆ ತ್ಯಾಗ ಬಲಿದಾನಗಳ ಇತಿಹಾಸವಿದೆ.111 ವರ್ಷಗಳಿಂದ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದರೂ ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯರ ಬದುಕು ತೀರಾ ಸಂಕಷ್ಟದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನೋರ್ವ ಅತಿಥಿಯಾದ ಪ್ರೌಢಶಾಲಾ ಶಿಕ್ಷಕಿ ಚಂಚಲಾಕ್ಷಿ ಯವರು ಮಾತನಾಡಿ, ಮಹಿಳಾ ಸಮುದಾಯ ಉತ್ತಮ ಬದುಕನ್ನು ಪಡೆದುಕೊಂಡರೆ ಅದು ಇಡೀ ಸಮಾಜಕ್ಕೆ ಪ್ರಭಾವ ಬೀರುತ್ತದೆ. ಶಿಕ್ಷಣ,ಆರೋಗ್ಯ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ಮುನ್ನಡೆ ಸಾಧಿಸುವಂತಹ ಜನಪರ ಮಾನವೀಯ ಚಿಂತನೆಯ ವ್ಯವಸ್ಥೆ ಸಮಾಜದಲ್ಲಿ ಮೂಡುವಂತಾಗಬೇಕು. ಆ ಮೂಲಕ ಇಡೀ ಜಗತ್ತನ್ನು ಮಹಿಳೆಯ ದ್ರಷ್ಠಿಯಿಂದ ನೋಡುವಂತಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ಸಾಮಾಜಿಕ ಚಿಂತಕರಾದ ಅಸುಂತ ಡಿಸೋಜರವರು ವಹಿಸಿದ್ದರು. ವೇದಿಕೆಯಲ್ಲಿ LIC ಅಭಿವೃದ್ಧಿ ಅಧಿಕಾರಿಗಳಾದ ಲತಾ ಕಿಣಿ,ವಕೀಲರಾದ ಸುನಂದಾ ಕೊಂಚಾಡಿ ಉಪಸ್ಥಿತರಿದ್ದರು.ಅಶಾ ಬೋಳೂರು ಸ್ವಾಗತಿಸಿದರು. ಪ್ರಮೀಳಾ ಶಕ್ತಿನಗರ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು