9:01 PM Tuesday26 - August 2025
ಬ್ರೇಕಿಂಗ್ ನ್ಯೂಸ್
Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

ಇತ್ತೀಚಿನ ಸುದ್ದಿ

ಬಡವರಿಗೆ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಗಳು ಸತಾಯಿಸುತ್ತಿವೆ; ಸೂಟು-ಬೂಟಿಗೆ ಕೈಬೀಸಿ ಕೊಡುತ್ತಿವೆ!!

07/03/2022, 22:24

ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಶ್ರಮಿಕರಿಗೆ ಸಾಲ ಕೊಡಲು ರಾಷ್ಟ್ರೀಕೃತ ಬ್ಯಾಂಕ್‌ಗಳು ಹತ್ತಾರು ದಾಖಲೆ ಕೇಳಿ ವರ್ಷಾನುಗಟ್ಟಲೇ ಸತಾಯಿಸುತ್ತವೆ. ಸೂಟು ಬೂಟು ಹಾಕಿಕೊಂಡು ಇಂಗ್ಲಿಷ್‌ನಲ್ಲಿ ಮಾತನಾಡಿದದರೆ ಅವನ ಕೈಕುಲಕಿ ನೂರಾರು ಸಾವಿರ ಕೋಟಿ ರೂ ನೀಡುತ್ತವೆ .10-20 ಸಾವಿರ ರೂ  ಸಾಲ ಪಡೆದವರ ಮನೆ ಹರಾಜು ಹಾಕುವ ದೇಶದ ಪರಿಸ್ಥಿತಿ ಬದಲಾಯಿಸ ಬೇಕಾಗಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು .

ಪಟ್ಟಣದ ರಾಜಧಾನಿ ಮಂಡಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಶ್ರೀನಿವಾಸಪುರ ಶಾಖೆ , ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ 102 ಮಹಿಳಾ ಸಂಘಗಳಿಗೆ 5.2 ಕೋಟಿ ರೂ ಸಾಲ ವಿತರಿಸಿ ಮಾತನಾಡಿ , ಸತತ 8 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತಿದೆ . 

ಹಿಂದೆ 35 ಸಾವಿರ ರೂ ಇದ್ದ ಸಾಲವನ್ನು ನಂತರ 50 ಸಾವಿರ ರೂ.ಗೆ ಏರಿಸಿ ಶೂನ್ಯ ಬಡ್ಡಿಯಲ್ಲಿ ಕೊಡಲಾಗುತ್ತದೆ. ಸಾಲ ಕೊಡುವಾಗ ನಿಮ್ಮನ್ನು ಬ್ಯಾಂಕ್ ಗೌರದಿಂದ ಕಾಣುತ್ತದೆ. ಹಾಗಾಗಿ ಪಡೆದ ಸಾಲ ಸಕಾಲಕ್ಕೆ ಪಾವತಿ ಮಾಡಿದಲ್ಲಿ ಇತರರಿಗೆ ಸಾಲ ಕೊಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಎಂ ಎಲ್‌ ಸಿ ಎಂ.ಎಲ್.ಅನಿಲ್ ಕುಮಾರ್ , ಕಸಬಾ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಆಲಂಬಗಿರಿ ಅಯ್ಯಪ್ಪ , ಉಪಾಧ್ಯಕ್ಷೆ ಶಾಂತಮ್ಮ ,ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿರ್ದೇಶಕರಾದ ಶಬೀರ್ ಅಹ್ಮದ್ ,ದ್ವಾರಸಂದ್ರ , ನಾರಾಯಣಸ್ವಾಮಿ , ಮುನಿ ವೆಂಕಟಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ವಿ. ವೆಂಕಟರೆಡ್ಡಿ , ಎಸ್.ವಿ.ಸುಧಾಕರ್‌ , ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಧ್ಯಕ್ಷ ದಿಂಬಾಲ್ – ಅಶೋಕ್ ,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಚರ್  ಅಕ್ಬರ್ ಷರೀಫ್ ,  ಪುರಸಭೆ ಸದಸ್ಯರಾದ ಕೆ. ಅನೀಸ್ ಅಹಮದ್ , ಇಪ್ತಿಕಾರ್ ಅಹ್ಮದ್ , ಕೊಂಡಸಂದ್ರ ಶಿವಾರೆಡ್ಡಿ , ಲಕ್ಷ್ಮಣರೆಡ್ಡಿ ಇತರರು  ಉಪಸ್ಥಿತರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು