ಇತ್ತೀಚಿನ ಸುದ್ದಿ
ಕರ್ಣಾಟಕ ಬ್ಯಾಂಕ್ ನಲ್ಲಿದೆ Chief Financial Officer ಹುದ್ದೆ: ತಡ ಯಾಕೆ? ಇಂದೇ ಅರ್ಜಿ ಸಲ್ಲಿಸಿ
04/03/2022, 11:17
ಮಂಗಳೂರು(reporterkarnataka.com): ಕರ್ಣಾಟಕ ಬ್ಯಾಂಕ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಮಂಗಳೂರಿನಲ್ಲಿ ಚೀಫ್ ಫೈನಾನ್ಸಿಯಲ್ ಆಫೀಸರ್(Chief Financial Officer) ಹುದ್ದೆ ಖಾಲಿ ಇದ್ದು, ಮಾರ್ಚ್ 8 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ವಿದ್ಯಾರ್ಹತೆ:
ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ/ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ CA (ಚಾರ್ಟರ್ಡ್ ಅಕೌಂಟೆಂಟ್) ಪೂರ್ಣಗೊಳಿಸಿರಬೇಕು.
ಅಭ್ಯರ್ಥಿಯ ಗರಿಷ್ಠ ವಯಸ್ಸು 55 ವರ್ಷ ಮೀರಿರಬಾರದು. ಅಭ್ಯರ್ಥಿಗಳು ಫೈನಾನ್ಸಿಯಲ್ ಆಪರೇಷನ್ಸ್ನಲ್ಲಿ 15 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ karnatakabank.com ಗೆ ಭೇಟಿ ನೀಡಿ.