ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ಸಂಜೀವಿನಿ ಮಹಿಳಾ ಸದಸ್ಯರ ಸಮಾವೇಶ: ಸಚಿವ ಅಶ್ವಥ್ ನಾರಾಯಣ ಉದ್ಘಾಟನೆ
03/03/2022, 19:57
ಮಂಗಳೂರು(reporterkarnataka.com):
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಳಿತ, ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ, ಸಂಜೀವಿನಿ- ಕೆ.ಎಸ್.ಆರ್.ಎಲ್.ಪಿ.ಎಸ್, ಸ್ವಚ್ಛ ಭಾರತ್ ಮಿಷನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಜಂಟಿ ಸಹಯೋಗದಲ್ಲಿ ಗುರುವಾರ ನಗರದ ಪುರಭವನದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟಗಳ ಮಹಿಳಾ ಸದಸ್ಯರ ಸಮಾವೇಶ ನಡೆಯಿತು.
ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ ಸಿ.ಎನ್. ಸಮಾರಂಭ ಉದ್ಘಾಟಿಸಿದರು. ಶಾಸಕ ಡಾ. ಭರತ್ ಶೆಟ್ಟಿ, ಉಪ ಕಾರ್ಯದರ್ಶಿ ಆನಂದ ಕುಮಾರ್ ಭಾಗವಹಿಸಿದ್ದರು.