4:02 PM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಮಂಗಳೂರು ಜತೆಗೆ ಕರಾವಳಿಯ ಸಮಗ್ರ ಅಭಿವೃದ್ಧಿಗೆ ಯೋಜನೆ: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

28/02/2022, 21:49

ಮಂಗಳೂರು(reporterkarnataka.com): ಮಂಗಳೂರು ಅಭಿವೃದ್ಧಿಯ ಜತೆಗೆ  ಕರಾವಳಿಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.


ಅವರು ನಗರದ ಕುಲಶೇಖರದ ಕೋರ್ಡೆಲ್ ಹಾಲ್ ಆವರಣದಲ್ಲಿ ಸೋಮವಾರ 3,163 ಕೋಟಿ ರೂ.ಗಳ ವೆಚ್ಚದ 164 ಕಿ.ಮೀ ಉದ್ದದ 15 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಹರಿಯುವ ನದಿ, ಹಳ್ಳ, ಕರೆ, ಕೊಳಗಳ ನೀರನ್ನು ಸದ್ವಿನಿಯೋಗ ಮಾಡಲಾಗುವುದು. ವಿಶೇಷವಾಗಿ ಕರಾವಳಿಯ ರೈತರು ಹಾಗೂ ಕೃಷಿಕರಿಗೆ ಇದರ ಪ್ರಯೋಜನ ಸಿಗುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲಿದ್ದೇವೆ. ಹರಿದು ಹೋಗುವ ನೀರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಯಲಿದೆ. ಇದರಿಂದ ಅಂತರ್ ಜಲ ವೃದ್ಧಿಯಾಗಲಿದೆ ಎಂದು ಮುಖ್ಯಮಂತ್ರಿ ನುಡಿದರು.

ಈ ಸಂದರ್ಭದಲ್ಲಿ 15 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಂದ ಶಂಕುಸ್ಥಾಪನೆ ನೆರವೇರಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್, ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರ ಎಸ್. ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಕೋಲಾರ ಸಂಸದ ಮುನಿಸ್ವಾಮಿ, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್, ಹರೀಶ್ ಪೂಂಜಾ, ರಾಜೇಶ್ ನಾಯಕ್, ಸಂಜೀವ ಮಠಂದೂರು, ಕಾರವಾರದ ಶಾಸಕಿ ರೂಪಾಲಿ ಸಂತೋಷ್ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮಂಜುನಾಥ್  ಭಂಡಾರಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಸೇರಿದಂತೆ ಇತರೆ ಗಣ್ಯರು ವೇದಿಕೆಯಲ್ಲಿದ್ದರು.

……

*ಶಂಕು ಸ್ಥಾಪನೆ ಹಾಗೂ ಲೋಕಾರ್ಪಣೆಯಾದ ಕಾಮಗಾರಿಗಳ ವಿವರ*

2802.48 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 7 ರಸ್ತೆಗಳ 141.155 ಕಿ.ಮೀ. ಉದ್ದದ ದ್ವಿಪಥ ಹಾಗೂ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಗಳ ಶಂಕು ಸ್ಥಾಪನೆ,  174.94 ಕೋಟಿ ರೂ. ವೆಚ್ಚದಲ್ಲಿ 9 ಸೇತುವೆಗಳ ಸೇತುವೆ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನೆ ನೆರವೇರಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ 2043.13 ಕೋಟಿ ರೂ. ವೆಚ್ಚದಲ್ಲಿ ಒಟ್ಟು 3 ರಸ್ತೆಗಳ 68.985 ಕಿ.ಮೀ. ಉದ್ದದ ದ್ವಿಪಥ ಹಾಗೂ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಗಳ ಶಂಕು ಸ್ಥಾಪನೆ,  89.77 ಕೋಟಿ ರೂ. ವೆಚ್ಚದಲ್ಲಿ 8 ಸೇತುವೆಗಳ ಸೇತುವೆ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನೆ ನೆರವೇರಲಿದೆ. 

ರಾಷ್ಟ್ರೀಯ ಹೆದ್ದಾರಿ ವತಿಯಿಂದ 759.35 ಕೋಟಿ ರೂ. ವೆಚ್ಚದಲ್ಲಿ ಒಟ್ಟು 4 ರಸ್ತೆಗಳ 72.17 ಕಿ.ಮೀ. ಉದ್ದದ ದ್ವಿಪಥ ಹಾಗೂ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಗಳ ಶಂಕು ಸ್ಥಾಪನೆ,  85.17 ಕೋಟಿ ರೂ. ವೆಚ್ಚದಲ್ಲಿ 4 ಸೇತುವೆಗಳ ಸೇತುವೆ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಲಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಶಂಕು ಸ್ಥಾಪನೆ:

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ 34.61 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ನವ ಮಂಗಳೂರು ಬಂದರು ರಸ್ತೆ ಸಂಪರ್ಕಿಸುವ ಕೆ.ಪಿ.ಟಿ. ಜಂಕ್ಷನ್‍ನಲ್ಲಿ ವಿ.ಯು.ಪಿ. ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಲಿದೆ. 

442.87 ಕೋಟಿ ರೂ. ವೆಚ್ಚದಲ್ಲಿ 15.13 ಕಿ.ಮೀ  ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು – ಮಂಗಳೂರು ಭಾಗದಲ್ಲಿ ಗುಂಡ್ಯ ಅಡ್ಡ ಹೊಳೆಯಿಂದ ಪೆರಿಯಶಾಂತಿಯವರ ಚುತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಲಿದೆ. 

1480.85 ಕೋಟಿ ರೂ. ವೆಚ್ಚದಲ್ಲಿ 48.485 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು – ಮಂಗಳೂರು ಭಾಗದಲ್ಲಿ ಗುಂಡ್ಯ ಅಡ್ಡ ಹೊಳೆಯಿಂದ ಪೆರಿಯಶಾಂತಿ – ಬಂಟ್ವಾಳಕ್ಕೆ ಚುಷ್ಪತ ರಸ್ತೆ ನಿರ್ಮಾಣ ಮತ್ತು  ಕಲ್ಲಡ್ಕ ಪೇಟೆಯಲ್ಲಿ 6 ಪಥದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಲಿದೆ. 

ಒಟ್ಟು 1958.33 ಕೋಟಿ ರೂ. ವೆಚ್ಚದಲ್ಲಿ 63.615 ಕಿ.ಮೀ. ಕಾಮಗಾರಿಗಳ ಶಂಕು ಸ್ಥಾಪನೆ ನೆರವೇರಲಿದೆ. 

ಶಂಕುಸ್ಥಾಪನೆಗೊಂಡ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವಿವರ ಇಂತಿದೆ:

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ

119.41 ಕೋಟಿ ರೂ. ವೆಚ್ಚದಲ್ಲಿ 4.58 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಾವರದ ಪೇವೆಡ್ ಶೋಲ್ಡರ್‍ಗಳೊಂದಿಗೆ ಚತುಷ್ಪತ ಕಿ.ಮೀ. 0.00 ದಿಂದ ಬಂದರು ಸಂಪರ್ಕ ರಸ್ತೆ (ಕಾಸರಗೋಡು, ಹೊನ್ನಾವರ ಬಂದರಿನ ಕಡೆಯಿಂದ) 2.580 ಕಿ.ಮೀ. (ರಾಷ್ಟ್ರೀಯ ಹೆದ್ದಾರಿ 66ರ ಕಡೆಗೆ) ಹೊನ್ನಾವರ ಬಂದರನ್ನು ರಾಷ್ಟ್ರೀಯ ಹೆದ್ದಾರಿ 66 ರೊಂದಿಗೆ 195.986 ಕಿ.ಮೀ. ರಲ್ಲಿ ಸಂಪರ್ಕಿಸುತ್ತದೆ ಮತ್ತು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 195 ಕಿ.ಮೀ. ರಿಂದ 197 ಕಿ.ಮೀ. ವರೆಗೆ ಸುಧಾರಣೆ ಕಾಮಗಾರಿಯ ಶಂಕು ಸ್ಥಾಪನೆ.

27.50 ಕೋಟಿ ರೂ. ವೆಚ್ಚದಲ್ಲಿ ಕುಂದಾಪುರ ಸುರತ್ಕಲ್ ವಿಭಾಗದ ರಾಷ್ಟ್ರೀಯ ಹೆದ್ದಾರಿ 66ರ ಅಂಬಲ್‍ಪಾಡಿಯಲ್ಲಿ ಡಬಲ್ ಸೆಲ್ ವಿಯುಪಿ ನಿರ್ಮಣ ಕಾಮಗಾರಿ.

34.61 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ನವ ಮಂಗಳೂರು ಬಂದರು ರಸ್ತೆ ಸಂಪರ್ಕಿಸುವ ಕೆ.ಪಿಟಿ ಜಂಕ್ಷನ್‍ನಲ್ಲಿ ವಿಯುಪಿ ನಿಮಾರ್ಣ ಕಾಮಗಾರಿ.

22.71 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಜಿಲ್ಲೆಯ ಕಟಪಾಡಿ ಜಂಕ್ಷನ್‍ನಲ್ಲಿ ಮೇಲ್ಸುತುವೆ ನಿರ್ಮಾಣ.

4.95 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಮಂಡ್ಯ ಜಿಲ್ಲೆಯಲ್ಲಿ ಬ್ಲಾಕ್ ಸ್ಟಾಟ್ ಸರಿಪಡಿಸುವಿಕೆ ಕಾಮಗಾರಿ.

442.87 ಕೋಟಿ ರೂ. ವೆಚ್ಚದಲ್ಲಿ 15.13 ಕಿಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ವಿಭಾಗದಲ್ಲಿ ಗುಂಡ್ಯ ಅಡ್ಡ ಹೊಳೆಯಿಂದ ಪೆರಿಯಶಾಂತಿಯವರೆಗೆ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿ.

1480.85 ಕೋಟಿ ರೂ. ವೆಚ್ಚದಲ್ಲಿ 48.485 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ವಿಭಾಗದಲ್ಲಿ ಗುಂಡ್ಯ ಅಡ್ಡ ಹೊಳೆಯಿಂದ ಪೆರೆರಿಯಶಾಂತಿ-ಬಂಟ್ವಾಳಕ್ಕೆ ಚತುಷ್ಪತ ರಸ್ತೆ ನಿರ್ಮಾಣ ಮತ್ತು ಕಲ್ಲಡ್ಕ ಪೇಟೆಯಲ್ಲಿ 6 ಪಥದ ಮೇಲ್ಸುತುವೆ ನಿರ್ಮಾಣ ಕಾಮಗಾರಿ.

ಒಟ್ಟು 2132.90 ಕೋಟಿ ರೂ. ವೆಚ್ಚದಲ್ಲಿ 68.195 ಕಿ.ಮೀ. ಉದ್ದದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಲಿದೆ.

ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ವತಿಯಿಂದ:

87.19 ಕೋಟಿ ರೂ. ವೆಚ್ಚದಲ್ಲಿ 5 ಕಿ.ಮೀ. ಉದ್ದದ ರಾ.ಹೆ. 169ರ ಶಿವಮೊಗ್ಗ-ಮಂಗಳೂರು ಭಾಗದ ಶೃಂಗೇರಿ ಪಟ್ಟಣ ವ್ಯಾಪ್ತಿಯಲ್ಲಿ 110 ಕಿ.ಮೀ. ರಿಂದ 1153 ಕಿ.ಮೀ ರವರೆಗೆ (ಹಳೆಯ ರಸ್ತೆ 640ಕಿ.ಮೀ. ರಿಂದ 645 ಕಿ.ಮೀ) ಅಸ್ತಿತ್ವದಲ್ಲಿರುವ ಮಧ್ಯಪಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಗಲಪಡಿಸಿ ಅಭಿವೃದ್ಧಿ ಪಡಿಸುವ ಕಾಮಗಾರಿ.

355.72 ಕೋಟಿ ರೂ. ವೆಚ್ಚದಲ್ಲಿ 28.30 ಕಿ.ಮೀ ಉದ್ದದ ರಾ.ಹೆ. 169ಎ ರ ತೀರ್ಥಹಳ್ಳಿ, ಉಡುಪಿ, ಮಲ್ಪೆ ಭಾಗದ 51.600 ಕಿ.ಮೀ. ನಿಂದ 76.200 ಕಿ.ಮೀ. ವರೆಗೆ (ಹೆಬ್ರಿಯಿಂದ ಪರ್ಕಳ) ಮತ್ತು 85.200 ಕಿ.ಮೀ. ನಿಂದ 88.900 ಕಿ.ಮೀ. ವರೆಗೆ (ಕರಾವಳಿ ಜಂಕ್ಷನ್‍ನಿಂದ ಮಲ್ಪೆ) ಚತುಷ್ಪತ ರಸ್ತೆಯನ್ನಾಗಿ ಅಗಲಪಡಿಸಿ ಅಭಿವೃದ್ಧಿ ಪಡಿಸುವ ಕಾಮಗಾರಿ.

85.17 ಕೋಟಿ ರೂ. ವೆಚ್ಚದಲ್ಲಿ ರಾ.ಹೆ. 275 ಕೆ ರ ಮೈಸೂರು ರಿಂಗ್ ರಸ್ತೆಯಲ್ಲಿ ಆರು ಪಥದ ರಸ್ತೆಯೊಂದಿಗೆ ಸರ್ವಿಸ್ ರಸ್ತೆ ನಿರ್ಮಾಣ ಮತ್ತು 5.46 ಕಿ.ಮೀ., 7.06 ಕಿ.ಮೀ., 28.585 ಕಿ.ಮೀ. ನಲ್ಲಿ (ಆರ್.ಯು.ಬಿ) ಸೇತುವೆ ಕೆಳ ರಸ್ತೆ ನಿರ್ಮಾಣ ಕಾಮಗಾರಿ.

218.93 ಕೋಟಿ ರೂ. ವೆಚ್ಚದಲ್ಲಿ 27.78 ಕಿ.ಮೀ. ಉದ್ದದ ರಾ.ಹೆ. 766 ಸಿ ರ ಬೈಂದೂರು, ಕೊಲ್ಲೂರು, ಶಿಕಾರಿಪುರ, ರಾಣಿಬೆನ್ನೂರು ಭಾಗದ 24.400 ಕಿ.ಮೀ., 27.270 ಕಿ.ಮೀ., 40.500 ರಿಂದ 41.900 ರವರೆಗೆ, 84.300 ಕಿ.ಮೀ. ರಿಂದ 88.200 ಕಿ.ಮೀ., 105.250 ಕಿ.ಮೀ. ರಿಂದ 112.710 ಕಿ.ಮೀ. ರವರೆಗೆ, 161.550ಕಿ.ಮೀ. ರಿಂದ 166.350 ಕಿ.ಮೀ., 174.120 ಕಿ.ಮೀ. ರಿಂದ 176.120 ರವೆರೆಗೆ ಮತ್ತು 186.550 ಕಿ.ಮೀ. ರಿಂದ 191.900 ಕಿ.ಮೀ. ರವರೆಗೆ ಪೇವ್ಡ್ ಶೋಲ್ಡರ್‍ನೊಂದಿಗೆ ದ್ವಿಪಥ ರಸ್ತೆಯನ್ನಾಗಿ ಅಗಲಪಡಿಸಿ ಅಭಿವೃದ್ಧಿಪಡಿಸುವ ಕಾಮಗಾರಿ.

97.51 ಕೋಟಿ ರೂ. ವೆಚ್ಚದಲ್ಲಿ 11.09 ಕಿ.ಮೀ. ಉದ್ದದ ರಾ.ಹೆ. 234ರ (ಮುಳಬಾಗಿಲು-ಸಂಗದಹಳ್ಳಿ-ಎ.ಪಿ. ಬೋರ್ಡರ್) 494.450 ಕಿ.ಮೀ. ರಿಂದ 505.540 ಕಿ.ಮೀ ವರೆಗೆ ಪೇವ್ಡ್ ಶೋಲ್ಡರ್‍ನೊಂದಿಗೆ ದ್ವಿಪಥ ರ್ಸತೆಯನ್ನಾಗಿ ಅಗಲಪಡಿಸಿ ಅಬಿವೃದ್ಧಿಪಡಿಸುವ ಕಾಮಗಾರಿ.  

ಒಟ್ಟು 844.52 ಕೋಟಿ ರೂ. ವೆಚ್ಚದಲ್ಲಿ 72.17 ಕಿ.ಮೀ. ಉದ್ದದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಲಿದೆ.

ಲೋಕಾರ್ಪಣೆಗೊಂಡ ಯೋಜನೆಗಳ ವಿವರ:

177.22 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 23.90 ಕಿ.ಮೀ. ಉದ್ದವಿರುವ ದ್ವಿಪಥ ಹಾಗೂ ಚತುಷ್ಪತ ಮಾದರಿಯಲ್ಲಿರುವ ಎರಡು ನೂತನ ರಸ್ತೆಗಳು ಮತ್ತು 8.8 ಕೋಟಿ ರೂ.ಗಳಲ್ಲಿ ನಿರ್ಮಾಣಗೊಂಡಿರುವ 3 ಸೇತುವೆಗಳು ಸಾರ್ವಜನಿಕರ ಉಪಯೋಗಕ್ಕಾಗಿ ಲೋಕಾರ್ಪಣೆಯಾಗಿದೆ.

ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ

159.70 ಕೋಟಿ ರೂ. ವೆಚ್ಚದಲ್ಲಿ 19.85 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 234ರ ಬಿ.ಸಿ. ರೋಡ್-ಪೂಂಜಾಲಕಟ್ಟೆ ಭಾಗದ 20.15 ಕಿ.ಮೀ. ನಿಂದ 40 ಕಿ.ಮೀ. ವರೆಗೆ ಭುಜಗಳುಳ್ಳ ದ್ವಿಪಥ ರಸ್ತೆ ಅಗಲೀಕರಣ ಕಾಮಗಾರಿ. 

17. 52 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ನಗರದಲ್ಲಿ ಹಾದುಹೋಗುವ 70.16 ಕಿ.ಮೀ  ರಿಂದ 74 .06 ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ 159. 70 ವೆಚ್ಚದ ರಾಷ್ಟ್ರೀಯ ಹೆದ್ದಾರಿ 234 ರ ಬಿಸಿರೋಡ್ ಕೊಟ್ಟಿಗೆಹಾರ ಭಾಗದ  20.15 ಕಿ. ಮೀ ರಿಂದ 40.00 ಕಿ.ಮೀ ವರೆಗೆ ಭುಜಗಳುಳ್ಳ ದ್ವಿಪಥ ರಸ್ತೆ ಅಗಲೀಕರಣ ಹಾಗೂ 8.80 ವೆಚ್ಚದ ರಾಷ್ಟ್ರೀಯ ಹೆದ್ದಾರಿ 169 ಎ ರ ತೀರ್ಥಹಳ್ಳಿ ಉಡುಪಿ ಭಾಗದ 26.05 ಕಿ.ಮೀ , 27.07 ಕಿ.ಮೀ , ಮತ್ತು 28.14 ಕಿ.ಮೀ ರಲ್ಲಿ ಕಿರು ಸೇತುವೆಯ ಮರು ನಿರ್ಮಾಣ ಕಾಮಗಾರಿಗಳ ಲೋಕಾರ್ಪಣೆಯಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು