ಇತ್ತೀಚಿನ ಸುದ್ದಿ
ಸಿಲಿಕಾನ್ ಸಿಟಿಯಲ್ಲಿ Rapido Bike Taxi ಬಿತ್ತು ಬ್ರೇಕ್: ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ
24/02/2022, 11:50
ಬೆಂಗಳೂರು(reporterkarnataka.com):-ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ Rapido Bike Taxi ಓಟಕ್ಕೆ ಬ್ರೇಕ್ ಬಿದ್ದಿದ್ದು, Rapido ನಿಷೇಧಿಸಿ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ನಗರದಲ್ಲಿ ಇತ್ತೀಚೆಗೆ ಖಾಸಗಿ ದ್ವಿಚಕ್ರ ವಾಹನಗಳು ಕೆಲವೊಂದು ಅನಧಿಕೃತ ಅಗ್ರಿಗೇಟರ್ ಆ್ಯಪ್ ಬಳಸಿಕೊಂಡು ಕಾನೂನುಬಾಹಿರವಾಗಿ ಪ್ರಯಾಣಿಕರನ್ನು ಸಾಗಿಸುತ್ತಿರುವುದು ಕಂಡು ಬಂದಿದ್ದು, ಅಂತಹ ವಾಹನಗಳ ವಿರುದ್ಧ ಸಾರಿಗೆ ಇಲಾಖೆಯು ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಸಾರ್ವಜನಿಕರು ಕಾನೂನು ಬಾಹಿರವಾಗಿ ಆಚರಣೆ ಮಾಡುತ್ತಿರುವ ಇಂತಹ ವಾಹನಗಳ ಬಳಕೆಯನ್ನು ಮಾಡದಿರುವಂತೆ ಸೂಚನೆ ನೀಡಿದೆ. ದ್ವಿಚಕ್ರ ವಾಹನಗಳ ಮಾಲೀಕರು ಕೂಡ ತಮ್ಮ ವಾಹನಗಳನ್ನು ಈ ಆ್ಯಪ್ ಮೂಲಕ ಬಾಡಿಗೆ ಓಡಿಸುತ್ತಿರುವುದನ್ನು ನಿಲ್ಲಿಸುವಂತೆ ತಿಳಿಸಿದೆ.
ಇನ್ನೂ, ಕೆಲವೊಂದು ರೆಂಟ್ ಎ ಕ್ಯಾಬ್ ಲೈಸೆನ್ಸ್ ಪಡೆದಿರುವ ಕಂಪನಿಗಳು ಖಾಸಗಿ ಮಾಲೀಕತ್ವದ ಲಘು ಮೋಟಾರು ವಾಹನಗಳನ್ನು ( ಎಲ್ ಎಂ ವಿ) ಕಂಪನಿ ಹೆಸರಿನಲ್ಲಿ ಸಾರ್ವಜನಿಕರು ಬಾಡಿಗೆ ನೀಡುತ್ತಿರುವುದು ಕಂಡು ಬಂದಿದ್ದು, ಇಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕರು ಕೂಡ ತಮ್ಮ ಖಾಸಗಿ ವಾಹನಗಳನ್ನು ಯಾವುದೇ ಕಂಪನಿಗಳಿಗೆ ಬಾಡಿಗೆಗೆ ನೀಡಬಾರದೆಂದು ಸಾರಿಗೆ ಇಲಾಖೆ ಮನವಿ ಮಾಡಿದ್ದು, ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ.