ಇತ್ತೀಚಿನ ಸುದ್ದಿ
ಬೊಮ್ಮಾಯಿ ಸರಕಾರದ ಚೊಚ್ಚಲ ಬಜೆಟ್ ಗೆ ಮುಹೂರ್ತ ನಿಗದಿ: ಮಾ.4ರಂದು ಮಧ್ಯಾಹ್ನ 12.30ಕ್ಕೆ ಮಂಡನೆ
23/02/2022, 23:25
ಬೆಂಗಳೂರು(reporterkarnataka.com): ರಾಜ್ಯ ಬಜೆಟ್ ಮಂಡನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 4 ರಂದು ಮಧ್ಯಾಹ್ನ 12.30ಕ್ಕೆ 2022-23ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಚೊಚ್ಚಲ ಬಜೆಟ್ ಇದಾಗಿದೆ.
ಬುಧವಾರ ವಿಧಾನಸಭೆ ಸಚಿವಾಲಯದ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಮಾರ್ಚ್ 4 ರಿಂದ 30 ರವರೆಗೆ 15ನೇ ವಿಧಾನಸಭೆಯ 12ನೇ ಅಧಿವೇಶನ (ಬಜೆಟ್) ನಡೆಯಲಿದೆ. ಕರ್ನಾಟಕ ವಿಧಾನ ಪರಿಷತ್ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ರಾಜ್ಯ ಬಜೆಟ್ ಮಾರ್ಚ್ 4ರಂದು ಮಧ್ಯಾಹ್ನ 12.30ಕ್ಕೆ ಮಂಡನೆಯಾಗಲಿದೆ ಎಂಬುದಾಗಿ ಸ್ಪಷ್ಟ ಪಡಿಸಿದೆ.
ಮಾರ್ಚ್ 4ರ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಕರ್ನಾಟಕ ಬಜೆಟ್ 2022-23 ವಿಧಾನಮಂಡಲದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಲಿದ್ದಾರೆ.