ಇತ್ತೀಚಿನ ಸುದ್ದಿ
ಇನ್ಸ್ಪೈರ್ ಅವಾರ್ಡ್ : ಕಲ್ಲರಕೋಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ದಿವಿತ್ ರಾಜ್ಯಮಟ್ಟಕ್ಕೆ ಆಯ್ಕೆ
23/02/2022, 21:12
ನರಿಂಗಾನ(reporterkarnataka.com): ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡೆಸುವ 2020- 21ನೇ ಸಾಲಿನ ವಿಜ್ಞಾನ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕಲ್ಲರಕೋಡಿಯ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ .
ಫೆಬ್ರವರಿ 23ರಿಂದ 25ರ ತನಕ ನಡೆಯುವ ಆನ್ಲೈನ್ ಸ್ಪರ್ಧೆಯಲ್ಲಿ ದಿವಿತ್ ಕಲ್ಲರಕೋಡಿ ಪ್ರೌಢಶಾಲೆಯನ್ನು ಪ್ರತಿನಿಧಿಸಲಿದ್ದಾನೆ. ಅವನು
ಮುಖ್ಯೋಪಾಧ್ಯಾರಾದ ಸೀಮಾ ಮರಿಯಾ.ಡಿಸೋಜ ಹಾಗೂ ಶಾಲಾ ವಿಜ್ಞಾನ ಶಿಕ್ಷಕಿ ವಿನಿತ ಮಾರ್ಗದರ್ಶನದಲ್ಲಿ ಮತ್ತು ಪೋಷಕರ ಸಹಕಾರದಲ್ಲಿ ಪ್ರಾಜೆಕ್ಟನ್ನು ಸಿದ್ಧಪಡಿಸಿದ್ದಾನೆ.
ಈತ ಪದ್ಮನಾಭ ಮತ್ತು ಕುಶಾಲಾಕ್ಷಿ ದಂಪತಿಯ ಪುತ್ರ.