ಇತ್ತೀಚಿನ ಸುದ್ದಿ
ನಟ ಚೇತನ್ ನಾಪತ್ತೆ; ಎಫ್ ಬಿ ಲೈವ್ ನಲ್ಲಿ ಪತ್ನಿ ಮೇಘಾ ಆತಂಕ; ಕೊನೆಗೂ ಪೊಲೀಸ್ ವಶದಲ್ಲಿರುವ ಮಾಹಿತಿ ಬಹಿರಂಗ
22/02/2022, 22:12
ಬೆಂಗಳೂರು(reporterkarnataka.com): ನಟ ಚೇತನ್ ಅವರ ಪತ್ನಿ ಮೇಘಾ ಅವರು ತನ್ನ ಪತಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಫೇಸ್ ಬುಕ್ ಲೈವ್ ನಲ್ಲಿ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ನಟ ಚೇತನ್ ಅವರು ಶೇಷಾದ್ರಿಪುರಂ ಪೊಲೀಸ್ ವಶದಲ್ಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಪೊಲೀಸರು ತನ್ನ ಪತಿ ಚೇತನ್ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಮೇಘಾ ಫೇಸ್ ಬುಕ್ ಲೈವ್ ನಲ್ಲಿ ದೂರಿದ್ದರು. ಇದಲ್ಲದೆ ಮಂಗಳವಾರ ಮಧ್ಯಾಹ್ನ ದಿಂದ ಚೇತನ್ ಅವರು ಎಲ್ಲೂ ಕಾಣಿಸಲಿಲ್ಲ. ಈ ನಡುವೆ ಚೇತನ್ ಅಭಿಮಾನಿಗಳು ಕೂಡ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು. ಇದರ ಬೆನ್ನಲ್ಲೇ ವಿಚಾರಣೆಗಾಗಿ ಚೇತನ್ ಅವರನ್ನು ಕರೆತರಲಾಗಿದೆ ಎಂದು ಸೆಂಟ್ರಲ್ ವಿಭಾಗದ ಡಿಸಿಪಿ ಮಾಹಿತಿ ನೀಡಿದ್ದಾರೆ.
ಹಿಜಾಬ್ ವಿವಾದ ವಿಚಾರಣೆ ನಡೆಯುವ ಸಂದರ್ಭದಲ್ಲಿ ಹೈಕೋರ್ಟ್ ಜಡ್ಜ್ ಅವರನ್ನು ನಿಂದಿಸಿರುವ ಆರೋಪದ ಮೇಲೆ ಪೊಲೀಸರು ಚೇತನ್ ಅವರನ್ನು ವಶಪಡಿಸಿಕೊಂಡಿದ್ದಾರೆ.