ಇತ್ತೀಚಿನ ಸುದ್ದಿ
ಪುತ್ತೂರು: ಕಾರುಗಳು ಮುಖಾಮುಖಿ ಡಿಕ್ಕಿ; ಮಡಿಕೇರಿ ನಿವಾಸಿ ಮೃತ್ಯು; ಹಲವರಿಗೆ ಗಂಭೀರ ಗಾಯ
21/02/2022, 23:27
ಪುತ್ತೂರು(reporterkarnataka.com):
ಪುತ್ತೂರು ತಾಲೂಕಿನ ಕಾವು ಸಮೀಪದ ಕೌಡಿಚ್ಚಾರ್ ಮಡ್ಯಂಗಲ ಎಂಬಲ್ಲಿ ಕಾರುಗಳೆರಡರು ಮುಖಾಮುಖಿ ಡಿಕ್ಕಿಯಾಗಿ ಮಡಿಕೇರಿ ನಿವಾಸಿ ಮೃತಪಟ್ಟು ಮತ್ತಿಬ್ಬರು ತೀವ್ರ ಗಾಯಗೊಂಡಿದ್ದಾರೆ.
ಮಡಿಕೇರಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಸ್ವಿಫ್ಟ್ ಕಾರು ಮತ್ತು ಮಡಿಕೇರಿ ಕಡೆ ಹೋಗುತ್ತಿದ್ದ ಐ20 ಕಾರು ನಡುವೆ ಅಪಘಾತ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ಮಡಿಕೇರಿ ನಿವಾಸಿ ರಾಜು ಎಂದು ಗುರುತಿಸಲಾಗಿದೆ.
ಸ್ವಿಫ್ಟ್ ಕಾರಿನ ಚಾಲಕನನ್ನು ಮಂಗಳೂರಿನ ಕೈಕಂಬ ಮೊಯಿದ್ದಿನ್ ಕುಂಜ್ಞಿ ಎಂದು ಗುರುತಿಸಲಾಗಿದೆ.
ಮಂಗಳೂರಿನ ಬಜ್ಪೆ ಮೂಲದ ಕುಟುಂಬ ಮಡಿಕೇರಿ ಪ್ರವಾಸಿ ತಾಣಗಳಿಗೆ ತೆರಳಿದ್ದು ಮರಳಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಬಜ್ಪೆ ಮೂಲದ ಜ್ಯೋತಿ ಎಂಬವರು ಗಂಭೀರ ಗಾಯಗೊಂಡಿದ್ದು ದೀಪಾ ಜೊತೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಾರಿನಲ್ಲಿದ್ದ ನೇತ್ರಾವತಿ, ಬೇಬಿ ಪೂಜಾರಿ, ಚೇತನ್ ಎಂಬವರಿಗೆ ಅಲ್ಪ-ಸ್ವಲ್ಪ ಗಾಯವಾಗಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.