ಇತ್ತೀಚಿನ ಸುದ್ದಿ
ಬೈಲಹೊಂಗಲ: ಚಲಿಸುತ್ತಿದ್ದ ಟ್ರಾಕ್ಟರ್ ನಿಂದ ಕಬ್ಬು ಸೆಳೆಯಲು ಹೋದ ಬಾಲಕ ಗಂಭೀರ ಗಾಯ
20/02/2022, 21:46

ಮಾಯಪ್ಪ ಲೋಖಂಡೆ ಶಿರನಾಳ ವಿಜಯಪುರ
info.reporterkarnataka@gmail.com
ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದಲ್ಲಿ ಕಬ್ಬು ಹೇರಿಕೊಂಡು ಹೋಗುತ್ತಿದ್ದ ಟ್ರಾಕ್ಟರ್ ನಿಂದ ಕಬ್ಬಿನ ಗಣಿಕೆಯನ್ನ ಮುರಿಯೋದಕ್ಕೆ ಹೋಗಿ ಟ್ರಾಕ್ಟರ್ ನ ಗಾಲಿಯ ಬಾಯಿಗೆ ಸಿಲುಕಿಬಾಲಕನೊಬ್ಬ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಹಳ್ಳಿಗಳಲ್ಲಿ ಚಲಿಸುತ್ತಿರುವ ಕಬ್ಬಿನ ಟ್ರಾಕ್ಟರ್ ಗಳಲ್ಲಿನ ಕಬ್ಬು ಮುರಿಯಲು ಹಿಂದೆ ಮಕ್ಕಳ ಹಿಂಡೇ ಹೋಗುತ್ತದೆ. ಇಂರಹ ದೃಶ್ಯವನ್ನ ಕಂಡವರು ಆ ಮಕ್ಕಳನ್ನು ಬೈದು ಬೆದರಿಸಿ ಬುದ್ದಿ ಹೇಳಿ ಕಳುಹಿಸುತ್ತಾರೆ. ಇದೀಗ ಅಂತಹದ್ದೇ ಘಟನೆ ನಡೆದು ಬಾಲಕ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಚಲಿಸುನಮ್ಮ ಊರಿನ ಮಕ್ಕಳ ಜವಾಬ್ದಾರಿ ನಮ್ಮೆಲ್ಲರ ಮೇಲಿರುತ್ತೆ ಹಾಗಾಗಿ ದಯವಿಟ್ಟು ಇದರ ಬಗ್ಗೆ ಸ್ವಲ್ಪ ಜಾಗೃತರಾಗಿ, ಆಗಬಹುದಾದ ಅನಾಹುತಗಳನ್ನ ತಪ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.