ಇತ್ತೀಚಿನ ಸುದ್ದಿ
ಅನ್ನದಾತರ ಮೊಗದಲ್ಲಿ ಮಂದಹಾಸ: ಮಸ್ಕಿ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬೀಜ ವಿತರಣೆ
06/06/2021, 20:11
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ಮುಂಗಾರು ಹಂಗಾಮಿನ ಮಳೆ ಸಂಪೂರ್ಣವಾಗಿ ಆಗಿರುವುದರಿಂದ ಮಸ್ಕಿಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಹೊಲಗಳನ್ನು ಹದ ಮಾಡಿ ಬೀಜಕ್ಕಾಗಿ ರೈತರ ಸಂಪರ್ಕ ಕೇಂದ್ರ ಕಡೆ ರೈತರು ಮುಖ ಮಾಡಿದ್ದಾರೆ. ರೈತರಿಗಾಗಿ ವಿಶೇಷ ತೊಗರಿ, ಸೂರ್ಯಕಾಂತಿ, ಸಜ್ಜಿ ಬೀಜಗಳನ್ನು ವಿತರಿಸಲಾಯಿತು.
ಕೃಷಿ ಅಧಿಕಾರಿ ಶಿವಶರಣ, ರೈತ ಸಂಘದ ಮುಖಂಡರು ಹಾಗೂ ಸಿಬ್ಬಂದಿ ವರ್ಗ ದಿಂದ ರೈತರಿಗೆ ಬೀಜ ನೀಡಲಾಯಿತು
ತೊಗರಿ, ಸಜ್ಜೆ, ಸೂರ್ಯಪಾನ ಭತ್ತ ಇನ್ನಿತರ ಬೀಜಗಳ ಬಿಡುಗಡೆ ಮಾಡಲಾಯಿತು.
ಮಳೆಯು ಆಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮಸ್ಕಿ ಕೃಷಿ ಇಲಾಖೆಗೆ ಸಂಬಂಧಪಡುವ ಎಲ್ಲಾ ಹಳ್ಳಿಯ ಗ್ರಾಹಕ ಬೀಜಗಳ ತೆಗೆದುಕೊಂಡು ಸದುಪಯೋಗ ಪಡಿಸಿಕೊಳ್ಳಿ ಎಂದು ಕೃಷಿ ಅಧಿಕಾರಿ ಶಿವಶರಣ ಹೇಳಿದರು. ಈ ಲೆಕ್ಕ ಪರಿಶೋಧಕ ರಮೇಶ್ ಅಸ್ಕಿಹಾಳ ಪ್ರಸಾದ್ ಸೇರಿದಂತೆ ಇನ್ನಿತರರು ಇದ್ದರು.