ಇತ್ತೀಚಿನ ಸುದ್ದಿ
ಮತ್ತೆ ಭವಿಷ್ಯ ನುಡಿದ ಕೋಡಿ ಮಠ ಸ್ವಾಮೀಜಿ: ಈ ಬಾರಿ ಶ್ರೀಗಳು ಚಿಕ್ಕಬಳ್ಳಾಪುರದಲ್ಲಿ ಹೇಳಿದ್ದೇನು..?
12/02/2022, 12:58
ಚಿಕ್ಕಬಳ್ಳಾಪುರ(reporterkarnataka.com):
ಆಗಾಗ ಭವಿಷ್ಯವಾಣಿ ಹೇಳುವ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಮ್ಮೆ ಭವಿಷ್ಯ ನುಡಿದ್ದಾರೆ. ಹಾಗಾದರೆ ಅವರು ಈ ಸಲ ಏನು ಹೇಳಿದ್ದಾರೆ ಕೇಳೋಣ ಬನ್ನಿ.
ಮುಂದಿನ ದಿನಗಳಲ್ಲಿ ಗಾಳಿ ಗಂಡಾಂತರ ಎದುರಾಗಿ ಭೀಕರ ಬರ ಹೆಚ್ಚಾಗಲಿದೆ ಎಂದು ಸ್ವಾಮೀಜಿ ಪ್ರಕೃತಿ ವಿಕೋಪದ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು,ಪ್ರಕೃತಿ ವಿಕೋಪಗಳಿಂದ ಮಾನವನಿಗೆ ತೊಂದರೆಯಾಗಲಿದೆ ಎಂದು ಕೋಡಿ ಮಠ ಶ್ರೀ ಭವಿಷ್ಯ ನುಡಿದಿದ್ದಾರೆ. ನೈಜ ಶಿಕ್ಷಣದ ಬದಲು ವ್ಯವಸ್ಥೆಯಲ್ಲಿ ಜಾತಿ ಶಿಕ್ಷಣ ಹೆಚ್ಚಾಗಲಿದೆ.
ನ್ಯಾಯಯುತ ಧರ್ಮದ ಬದಲು ಜಾತಿ ಭೇದ ಭಾವ ಹೆಚ್ಚಾಗ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.














