ಇತ್ತೀಚಿನ ಸುದ್ದಿ
ಫೆಬ್ರವರಿ 13ರಂದು ಗಡಿನಾಡ ಸಾಂಸ್ಕೃತಿಕ ಉತ್ಸವ; ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಉದ್ಘಾಟನೆ
10/02/2022, 19:32
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಗಡಿನಾಡ ಸಾಂಸ್ಕೃತಿಕ ಉತ್ಸವವನ್ನು ಇದೇ ಫೆಬ್ರವರಿ 13ರಂದು ಮಸ್ಕಿ ಸಮೀಪದ ಚಮಕೇರಿಯ ಸರಕಾರಿ ಕನ್ನಡ ಶಾಲೆಯ ಆವರಣದಲ್ಲಿ ಜರುಗಲಿದೆ.
ಅಂದು ಬೆಳಿಗ್ಗೆ 8 ಗಂಟೆಗೆ ಭುವನೇಶ್ವರಿ ಪೋಟೊ ಪೂಜೆಯನ್ನು ಮಲ್ಲಪ್ಪ ಪಡೋಲಕರ (ಗ್ರಾಪಂ ಅದ್ಯಕ್ಷರು), ವಿಜಯಲಕ್ಷ್ಮೀ ಒಂಟಮೂರಿ (ಗ್ರಾಪಂ ಅಭಿವೃದ್ಧಿ ಅಧಿಕಾರಿ), ರಾಜೇಶ್ವರಿ ತೋಟದ (ಗ್ರಾಮ ಲೆಕ್ಕಾಧಿಕಾರಿ) ಮಾಡುವರು. 11 ಗಂಟೆಗೆ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಉದ್ಘಾಟಕರಾಗಿ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಬೆಳಗಾವಿ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ, ಪಾವನ ಸಾನಿಧ್ಯವನ್ನು ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ, ಪರಮಪೂಜ್ಯ ಶ್ರೀ ಅಭಿನವ ಗುರುಲಿಂಗಜಂಗಮ ಮಹಾಸ್ವಾಮಿಗಳು ಕಕಮರಿ, ಪರಮಪೂಜ್ಯ ಶ್ರೀ ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಪರಮಾನಂದವಾಡಿ ವಹಿಸುವರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಚೆಲವಾದಿ ಉತ್ಸವಕ್ಕೆ ಚಾಲನೆ ನೀಡುವರು. ಶಾಸಕ ಶ್ರೀಮಂತ ಪಾಟೀಲ್ ಪುನೀತ್ ರಾಜಕುಮಾರ ಪೋಟೊ ಪೂಜೆ ಮಾಡುವರು. ಸಮ್ಮೇಳನ ಅಧ್ಯಕ್ಷರಾಗಿ ರೋಹಿಣಿ ಯಾದವಾಡ, ಮುಖ್ಯ ಅತಿಥಿಗಳಾಗಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ. ಎಲ್. ಪಾಟೀಲ್, ದುಂಡಪ್ಪ ಕುಮಾರ್(ತಹಶೀಲ್ದಾರ್ ಅಥಣಿ),
ವಿದ್ಯಾವತಿ ಭಜಂತ್ರಿ (ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ), ಚಿದಾನಂದ ಸವದಿ (ಯುವ ಮುಖಂಡರು ಅಥಣಿ), ಅತಿಥಿಗಳಾಗಿ ಮಂಗಲಾ ಮೆಟಗುಡ್ಡ (ಅಧ್ಯಕ್ಷರು ಕಸಾಪ ಘಟಕ ಬೆಳಗಾವಿ), ಡಾ. ರಾಧಾಕೃಷ್ಣ ಪಲ್ಲಕ್ಕಿ (ಚಲನಚಿತ್ರ ನಿರ್ದೇಶಕ ಬೆಂಗಳೂರು), ಡಾ. ಬಸವರಾಜ್ ಬಿಸನಕೊಪ್ಪ (ಸಿಪಿಐ ವಿಜಯಪುರ), ಕುಮಾರ್ ಹಾಡ್ಕರ್ (ಪಿಎಸ್ಐ ಅಥಣಿ), ಎಂ ಡಿ ಘೋರಿ (ಪಿಎಸ್ಐ ಐಗಳಿ), ಡಾ. ವಿ ವಿ ಹಿರೇಮಠ (ಸಾಹಿತಿಗಳು ಗದಗ), ಮಹದೇವ್ ಮಡಿವಾಳ (ರೈತ ಹೋರಾಟಗಾರರು), ಮಹಾದೇವ ಧರಿಗೌಡರ (ಸಮಾಜಸೇವಕರು), ರವಿ ಪೂಜಾರಿ, ಸಂಜೀವ ಕಾಂಬಳೆ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಮತೆಯ ಮಡಿಲು, ಶತಮಾನದ ಶೋಕ, ಭೀಮ ಬೆಳಕು, ಸ್ಮರಣ ಸಂಚಿಕೆಗಳನ್ನು ಬಿಡುಗಡೆ ಮಾಡುವರು.
ಸೃಷ್ಟಿ ಬಿ. ನಿತ್ಯೋತ್ಸವ ಗೀತೆಯೊಂದಿಗೆ ಚಿತ್ರಕಲಾವಿದ ಪ್ರತಾಪ ಬಹುರೂಪಿ (ಮಾಜಿ ಸದಸ್ಯ ಲಲಿತಕಲಾ ಅಕಾಡೆಮಿ), ಭೀಮಣ್ಣ ಕೋರಿ ಇವರಿಂದ ಕುಂಚ ಕಾವ್ಯ ದೃಶ್ಯ ರಚನೆ ಜರಗುವದು.
2 ಗಂಟೆಗೆ ವಿಚಾರ ಸಂಕಿರಣ, ಶ್ರೀ ಮ ನಿ ಪ್ರ ಗುರುಸಿದ್ಧ ಮಹಾಸ್ವಾಮಿಗಳು ಹಳ್ಯಾಳ, ಶ್ರೀ ಮ ನಿ ಪ್ರ ಮರುಳಸಿದ್ಧ ಮಹಾಸ್ವಾಮಿಗಳು ಶೆಟ್ಟರಮಠ ಅಥಣಿ ಸಾನಿಧ್ಯ ವಹಿಸುವರು. ನ್ಯಾಯವಾದಿ ಕೆ ಎಲ್ ಕುಂದರಗಿ ಅಧ್ಯಕ್ಷತೆ ವಹಿಸುವರು. ಸಂಚಾಲಕರಾಗಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ, ಪತ್ರಕರ್ತ ಶಿವಪುತ್ರ ಯಾದವಾಡ, ಡಾ. ಮಹಾಂತೇಶ್ ಉಕ್ಕಲಿ, ಪ್ರೊ. ಟಿ ಎಸ್ ಒಂಟಗೂಡಿ, ಡಾ. ರವೀಂದ್ರ ತೋಟಿಗೇರ, ಬಸವರಾಜ ಸುನಗಾರ, ಪ್ರಕಾಶ ಪೂಜಾರಿ,
ಜಯಶ್ರೀ ಪೂಜಾರಿ, ಪುಂಡಲೀಕ ಸೂರ್ಯವಂಶಿ ವಿಚಾರ ಸಂಕಿರಣದಲ್ಲಿ ಭಾಗವಹಿಸುವರು.
ಸಾಯಂಕಾಲ ನಾಲ್ಕು ಗಂಟೆಗೆ ನಡೆಯುವ ಕವಿಗೋಷ್ಠಿಯಲ್ಲಿ ಶ್ರೀ ಷ ಬ್ರ ಡಾ. ಶಿವಲಿಂಗ ಮುರುಘೇಂದ್ರ ಶಿವಾಚಾರ್ಯ ಸ್ವಾಮಿಗಳು ಬಾಗೋಜಿಕೊಪ್ಪ, ಮಾತೋಶ್ರೀ ಅನಸೂಯ ಅಮ್ಮನವರು ಶಾಂಭವಿ ಆಶ್ರಮ ತುಂಗಳ ಸಾನಿದ್ಯ ವಹಿಸುವವರು. ಅಧ್ಯಕ್ಷತೆ ಮಲ್ಲಿಕಾರ್ಜುನ್ ಸಿಂಧೂರ (ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ), ವಿನಾಯಕ ಆಸಂಗಿ ಆಶಯ ನುಡಿ ಹೇಳುವರು. ಬಸವರಾಜ್ ಗಾರ್ಗಿ, ಎಸ್ ಕೆ ಹೊಳೆಪ್ಪನವರ್, ಪ್ರವೀಣ್ ಕುಲಕರ್ಣಿ, ಮಂಗಲಾ ಕುಲಕರ್ಣಿ, ಅರುಣ್ ಕುಮಾರ್ ರಾಜಮಾನೆ, ಡಾ. ಆರ್. ಎಸ್.
ದೊಡ್ಡನಿಂಗಪ್ಪಗೋಳ, ಸಂಜಯ್ ಕುರಣಿ, ವಿಜಯ್ ಕುಮಾರ್ ಅಡಹಳ್ಳಿ, ಎ ಕೆ ಜಯವೀರ್, ಸುನಿಲ್ ಕಬ್ಬೂರ್, ಮಹಾನಂದ ಪಾಟೀಲ್, ಡಾ. ಸಂಗಮೇಶ ಮಾದರ ಕವಿಗೋಷ್ಠಿಯಲ್ಲಿ ಭಾಗವಹಿಸುವರು.
ಸಂಜೆ 5 ಗಂಟೆಯ ಸಮಾರೋಪ ಸಮಾರಂಭದಲ್ಲಿ ಪರಮಪೂಜ್ಯ ಬಾಬು ಮಹಾರಾಜರು ಹೊನವಾಡ ಸಾನಿದ್ಯ ವಹಿಸುವವರು. ಮುಖ್ಯಅತಿಥಿಗಳಾಗಿ ಶೇಖರ್ ಕರಬಸಪ್ಪಗೋಳ (ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು), ಗೌಡಪ್ಪ ಖೋತ (ಕ್ಷೇತ್ರಶಿಕ್ಷಣಾಧಿಕಾರಿಗಳು), ಪ್ರಶಾಂತ ಗಾಣಿಗೇರ (ವಲಯ ಅರಣ್ಯಾಧಿಕಾರಿಗಳು), ಬಸವರಾಜ ಬುಟಾಳಿ (ಮಾಜಿ ಸದಸ್ಯರು ಜಿಪಂ), ಸಿದ್ಧಾರ್ಥ ಸಿಂಗೆ (ಚಿಂತಕರು), ರಾವಸಾಬ ಐಹೊಳೆ (ಸದಸ್ಯರು ಪುರಸಭೆ), ಮಂಜುಳ ಹಿರೇಮಠ್ ಕಲ್ಲೋಳಿ, ವಿಜುಗೌಡ ಪಾಟೀಲ್, ಮಹಾವೀರ್ ಪಾಡನಾಡ, ಅಣ್ಣಾಸಾಬ ತೆಲಸಂಗ ಆಗಮಿಸುವರು.
ಡಾ.ಪ್ರಕಾಶ್ ಕುಮಠಳ್ಳಿ, ಗಿರೀಶ್ ಬಸರಗಿ, ಶಿವು ನಂದಗಾವ್, ಸುಶಾಂತ ಪಟ್ಟನ್, ಅನಂತಕುಮಾರ್ ಬ್ಯಾಕೋಡ, ಪ್ರಕಾಶ ಐಹೊಳೆ,
ಕವಿತಾ ಹಿರೇಮಠ, ಸುವರ್ಣ ಆಸಂಗಿ, ಮಹೇಶ್ ಕುಲಕರ್ಣಿ, ಸಂತೋಷ ಸಾವಡಕರ್, ರಾಮು ಗಾಡಿವಡ್ಡರ, ನಿಜಪ್ಪ ಹಿರೇಮನಿ, ಡಾ. ಮಾರುತಿ ಭಂಡಾರಿ, ಗೀತಾ ಕುಲಕರ್ಣಿ, ಮಹೇಶಬಾಬು ಸೇರಿದಂತೆ ಗಡಿನಾಡಿನ ಕನ್ನಡ ಸೇವಕರಿಗೆ ಸನ್ಮಾನ ಜರುಗುವದು.
ವಿದ್ಯಾ ಮಂಗಳೂರು ಕೊಪ್ಪಳ ಸಮೂಹ ನೃತ್ಯ ರೂಪಕ, ರುಕ್ಮಿನಿ ಸುರ್ವೆ ಬೆಂಗಳೂರು ಸಮೂಹ ನೃತ್ಯ, ಜೈ ವಿಹಾನ್ ಮಲ್ಲಿಕಾರ್ಜುನ ಮಠ ವಿಜಯಪುರ ಜಾನಪದ ನೃತ್ಯ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ನೃತ್ಯರೂಪಕ, ಬಸವರಾಜ್ ಸಿನ್ನೂರ್ ಯಾದಗಿರಿ ಸಮೂಹ ನೃತ್ಯ, ವಿಜಯಕುಮಾರ್ ಗವಿಮಠ ಇಲ್ಕಲ್ ಸಮೂಹ ಭರತನಾಟ್ಯ, ಸೃಷ್ಟಿ ಎಂ ಬಿರಾದಾರ ಅಥಣಿ ಸಮೂಹ ನೃತ್ಯ, ಸಂಜೀವ್ ಕುಮಾರಸ್ವಾಮಿ ಬೀದರ್, ಶಿಲ್ಪಾ ಮಂಗಳೂರು ಕೊಪ್ಪಳ ಸಮೂಹ ಜಾನಪದ ನೃತ್ಯಗಳು, ಸುಶೀಲಾ ಎಂಎಸ್ ಬೆಂಗಳೂರು, ಲಕ್ಷ್ಮಿ ತೇರದಾಳ್ ಮಠ ವಿಜಯಪುರ ಕುಚಿಪುಡಿ ನೃತ್ಯ, ನಾಟ್ಯಕಲಾ ಡ್ಯಾನ್ಸ್ ವಿಜಯಪುರ್ ಸಮೂಹ ಭರತನಾಟ್ಯ, ಹನುಮಾನ್ ಜಾನಪದ ಕರಡಿ ಮೇಳ ಚಮಕೇರಿ, ಸುಭಾಷ ಪವಾರ್ ಮುರುಗುಂಡಿ ಶಿವಾಜಿ ರೂಪಕ, ಮರುಳಶಂಕರ ದೇವರ ಸುಗಮಸಂಗೀತ ಅಥಣಿ, ಸದಾಶಿವ ನಾಟ್ಯಸಂಘ ಶಿವಶಕ್ತಿ ಸಂವಾದ ಸಣ್ಣಾಟ ಕಲಾತಂಡ ಚಮಕೇರಿ, ನಾಟ್ಯ ಶಾಲಾಮಕ್ಕಳು ಅಥಣಿ ಭರತನಾಟ್ಯ, ದಕ್ಷಡಾನ್ಸ್ ಸ್ಟುಡಿಯೋ ಅಥಣಿ ತಂಡ, ಬೀರದೇವರ ಡೊಳ್ಳುಕುಣಿತ ಕನಾಳ, ಬೀರದೇವರ ಡೊಳ್ಳು ಮೇಳ ಚಮಕೇರಿ, ಸದಾಶಿವ ಬಿ ಸಪ್ತಸಾಗರ ದಡ್ಡಿ ಕುಣಿತ, ಹನುಮಂತಪ್ಪ ಬಬಲ್ ತಂಡ ಕೊಪ್ಪಳ, ಶಶಿಧರ್ ಭಜಂತ್ರಿ ಹಳ್ಯಾಳ ತಾಶಿವಾದನ ಇವರಿಂದ
ಉತ್ಸವ, ವೇದಿಕೆಗಳಲ್ಲಿ ಕಲಾತಂಡಗಳು ಭಾಗವಹಿಸುವವು ಎಂದು ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅದ್ಯಕ್ಷ ಮಹಾದೇವ ಬಿರಾದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.