1:32 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ನೆರೆ ಸಂತ್ರಸ್ತರ ಮನೆ ಹಂಚುವಿಕೆಯಲ್ಲಿ ತಾರತಮ್ಯ: ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ ಶಾಸಕ ಕುಮಟಳ್ಳಿ

09/02/2022, 10:46

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ನೆರೆ ಸಂತ್ರಸ್ತರ ಮನೆ ಹಂಚುವಿಕೆಯಲ್ಲಿ ತಾರತಮ್ಯವಾಗಿದೆ.  ಒಂದೇ ಕುಟುಂಬದಲ್ಲಿ 4-5 ಮನೆ ಮುಂಜೂರಾಗಿವೆ. ನೆರೆ ಸಂತ್ರಸ್ತರಿಗೆ ಸೂಕ್ತ ಬೆಳೆ  ಪರಿಹಾರ ದೊರೆತಿಲ್ಲ. ನೆರೆಪೀಡಿತ  ಸೂಕ್ತ ಫಲಾನುಭವಿಗಳಿಗೆ ಮನೆ ಹಂಚಿಕೆಯಾಗಬೇಕು ಹಾಗೂ ಶಾಶ್ವತ ಪರಿಹಾರ ಘೋಷಣೆ ಯಾಗಬೇಕು ಇಲ್ಲವಾದಲ್ಲಿ ಸುರೇಶ ಪಾಟೀಲ್ ನೇತೃತ್ವದಲ್ಲಿ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ನಿನ್ನೆ ಸೆಗುಣಶಿ ಗ್ರಾಮದಲ್ಲಿ ಗೊಂದಲ ಸೃಷ್ಟಿಯಾಗಿತ್ತು.

ಶೇಗುಣಸಿ ಗ್ರಾಮದ ಖಾಸಗಿ ಕಾರ್ಯಕ್ರಮವೊಂದಕ್ಕೆ ಬಂದ ಶಾಸಕ ಮಹೇಶ್ ಕುಮಟಳ್ಳಿ ಗ್ರಾಮಸ್ಥರ ಸಮಸ್ಯೆ ಅರಿತು ಸ್ಥಳದಲ್ಲಿ ಅಥಣಿ ತಾಲೂಕ  ದಂಡಾಧಿಕಾರಿ  ದುಂಡಪ್ಪ ಕೋಮಾರ ಅವರನ್ನ ಕರೆಸಿ ಸೂಕ್ತ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವುದಾಗಿ ಭರವಸೆ ನೀಡಿ ಹೋರಾಟ ಹಿಂಪಡೆದು ಶಾಂತಿ ಕಾಪಾಡಲು ಮನವಿ ಮಾಡಿದರು.

ಇದೇ ಸಂಧರ್ಭದಲ್ಲಿ ಸುರೇಶ್ ಪಾಟೀಲ್ ಶಾಸಕರ ಮಾತಿಗೆ ಓಗೊಟ್ಟು ಹೋರಾಟ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

ಇದೆ ಸಂಧರ್ಭದಲ್ಲಿ ಮುಖಂಡರಾದ ಅವಿನಾಶ ಗುರುಸ್ವಾಮಿ, ಅಶೋಕ್ ಗೌಡಪ್ಪನವರ, ಸಂಜು ಕರಗಾವಿ, ದಯಾನಂದ ಮೊಪಗಾರ್,
ಚಿದಾನಂದ್ ಪಾನಶೆಟ್ಟಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು