ಇತ್ತೀಚಿನ ಸುದ್ದಿ
ಕುಂದಾಪುರ: ತ್ರಾಸಿ ಮೇಲ್ಸೇತುವೆ ದಂಡೆ ಕಬ್ಬಿಣದ ಸರಳಿಗೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
07/02/2022, 22:25

ಕುಂದಾಪುರ(reporterkarnataka.com): ತ್ರಾಸಿ ಮೇಲ್ಸೇತುವೆ ದಂಡೆಯ ಕಬ್ಬಿಣದ ಸರಳಿಗೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಬೈಂದೂರು ನಾವುಂದ ಗ್ರಾಮದ ಶುಭದ ಶಾಲೆ ಬಳಿಯ ನಿವಾಸಿ 55 ವರ್ಷದ ನಾರಾಯಣ ಚಂದನ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಸರಿಯಾದ ಕೆಲಸವಿಲ್ಲದ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ್ದರು. ಇದೇ ಚಿಂತೆಯಲ್ಲಿ ಮನನೊಂದು ಇಂದು ಬೆಳಿಗ್ಗೆ ತ್ರಾಸಿ ಮೇಲ್ಸೇತುವೆ ದಂಡೆಗೆ ಹಾಕಲಾದ ಕಬ್ಬಿಣದ ಸರಳಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.