ಇತ್ತೀಚಿನ ಸುದ್ದಿ
ಡಾ. ಅಂಬೇಡ್ಕರ್ ಅವಮಾನ ಖಂಡಿಸಿ ಅಥಣಿ ಸಂಪೂರ್ಣ ಬಂದ್: ಮೆರವಣಿಗೆ, ಮಾನವ ಸರಪಳಿ
01/02/2022, 16:16
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ತೆಗೆಯುವವರೆಗೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಘಟನೆಯನ್ನ ಖಂಡಿಸಿ ಇಂದು ಅಥಣಿ ಸಂಪೂರ್ಣ ಬಂದ್ ಆಚರಿಸಲಾಯಿತು.ವಿವಿಧ ದಲಿತ ಸಂಘಟನೆಗಳು ನೀಡಿದ ಕರೆಯನ್ವಯ ಅಥಣಿ ಸಂಪೂರ್ಣ ಬಂದ್ ಮಾಡಲಾಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಹಾರ ಹಾಕುವದರ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಜಾರ ಪೇಟ, ಸೀರಿ ಬಜಾರ, ಬುಧವಾರ ಪೇಟ, ಬಸವೇಶ್ವರ ವೃತ್ತದಿಂದ ಮುಖಾಂತರ ಹಾಯ್ದು ಮೀರಜ್- ಕಾಗವಾಡ ರಸ್ತೆಯಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆಗೊಂಡು ಮಾನವಳಿ ಸರಪಳಿ ನಿರ್ಮಿಸಿ ರಾಯಚೂರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ದ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ಶಶಿಕಾಂತ್ ಪಡಸಲಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷರು ಮಾತನಾಡಿ ಪ್ರತಿಯೊಬ್ಬ ಈ ದೇಶದ ವ್ಯಕ್ತಿಯು ಸಮಾನಂತರವಾಗಿ ಹಾಗೂ ಸಾಮರಸ್ಯವಾಗಿರಲು
ಅಂತಹ ಸಂವಿಧಾನ ಬರೆದ ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ ನ್ಯಾಯಾಧೀಶರನ್ನು ಕೂಡಲೇ ಅಮಾನತು ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.
ನಂತರ ಮಾತನಾಡಿದ ಪೌರ ಕಾರ್ಮಿಕ ಜಿಲ್ಲಾ ಅಧ್ಯಕ್ಷ ಬಸವರಾಜ್ ಕಾಂಬ್ಳೆ,.. ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಒಬ್ಬ ನ್ಯಾಯ ಕೊಡುವಂಥ ವ್ಯಕ್ತಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆಯುವವರೆಗೆ ಕಾರ್ಯಕ್ರಮಕ್ಕೆ ಬರುವದಿಲ್ಲ ಎಂದು ಹೇಳಿ ಡಾ.ಬಾಬಾಸಾಹೇಬರಿಗೆ ಅವಮಾನ ಮಾಡಿದ್ದಾರೆ ಕೂಡಲೇ ಅವರನ್ನ ಅವರ ಸ್ಥಾನದಿಂದ ವಜಾಮಾಡಬೇಕು ಅಷ್ಟೇ ಅಲ್ಲದೇ ಅವರ ಮೇಲೆ ಅಟ್ರಾಸಿಟಿ ಕೇಸ್ ಹಾಕಿ ದೇಶ ದ್ರೋಹದ ಮೇಲೆ ಗಡಿಪಾರು ಮಾಡಬೇಕು ಅವರನ್ನ ವಜಾ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಸಂಘಟನೆಗಳು ಸೇರಿ ಬೃಹತ್ ಪ್ರಮಾಣ ಪ್ರತಿಭಟನೆ ಮಾಡಲಾಗುವದು ಅಷ್ಟೇ ಅಲ್ಲದೇ ಘಟನೆ ನಡೆದು ಹಲವು ದಿನ ಕಳೆದರೂ ಸರ್ಕಾರ ಮೌನ ವಹಿಸಿದೆ ಒಂದು ವೇಳೆ ನ್ಯಾಯಾದೀಶನ ಮೇಲೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವದು ಎಂದರು
ಈ ವೇಳೆ ವಿವಿಧ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು