8:23 AM Saturday4 - July 2026
ಬ್ರೇಕಿಂಗ್ ನ್ಯೂಸ್
Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ… ಮತಾಂತರ ಆರೋಪ: ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್; ಎಲ್ಲವೂ ಸ್ತಬ್ದ

ಇತ್ತೀಚಿನ ಸುದ್ದಿ

ವಿದ್ಯಾರ್ಥಿನಿಯರಲ್ಲಿ ಸಮಯ ಪರಿಪಾಲನೆ, ನಾಯಕತ್ವದ ಗುಣಗಳು ಜನ್ಮದತ್ತ: ಡಾ. ನಾಗರತ್ನ ಕೆ. ಎ .

01/02/2022, 00:01

ಮಂಗಳೂರು(reporterkarnataka.com): ವಿದ್ಯಾರ್ಥಿನಿಯರಲ್ಲಿ ಸಮಯ ಪರಿಪಾಲನೆ ಹಾಗೂ ನಾಯಕತ್ವದ ಗುಣಗಳು ಜನ್ಮದತ್ತವಾಗಿ ಬಂದಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ. ಹೇಳಿದರು.

ಅವರು ನಗರದ ಬೆಸೆಂಟ್  ಮಹಿಳಾ  ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ಯುವ ಶಕ್ತಿಗಳಿಗೆ ಪ್ರೇರಣೆ.  ಯುವಕರಲ್ಲಿ ಹಿಂದೆಯೂ ಸಮಸ್ಯೆಗಳಿದ್ದವು ಈಗಲೂ ಸಮಸ್ಯೆಗಳಿವೆ . ಆದ್ದರಿಂದ ಸಮಸ್ಯೆಗಳಿಂದ ದೂರ ಸರಿಯದೆ ತಮ್ಮೊಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸ್ವಾಮಿವಿವೇಕಾನಂದರ ತತ್ವ-ಆದರ್ಶ ಗಳನ್ನು ಪಾಲಿಸಿ, ಅದರಿಂದ ರಾಷ್ಟ್ರೀಯತೆ,ಮಾನವೀಯ ಸಂಬಂಧಗಳು ಉತ್ತಮವಾಗಿ ಬೆಳೆಯಲು ಸಹಕಾರಿ ಎಂದುರಾ. ಸೇ. ಯೋ. ಸ್ವಯಂ ಸೇವಕಿಯರಿಗೆ ಕಿವಿ ಮಾತು ಹೇಳಿದರು.


ವಿದ್ಯಾರ್ಥಿನಿಯರಲ್ಲಿ ಸಮಯಪಾಲನೆ, ನಾಯಕತ್ವದ ಗುಣಗಳು ಜನ್ಮದತ್ತವಾಗಿ ಇರುತ್ತದೆ, ಎಂದರು.

ಬೆಸೆಂಟ್ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಸಿಂಪತಿ ಗಿಟ್ಟಿಸಿಕೊಳ್ಳಲು ಸೇವೆ ಮಾಡಬೇಡಿ. ಅದರಿಂದ ಏನೂ ಪ್ರಯೋಜನವಿಲ್ಲ. ನಿಷ್ಕಲ್ಮಶ ಸೇವೆ ಮಾಡಿ ಅದರಲ್ಲಿರುವ ಕಷ್ಟ-ಸುಖಗಳನ್ನು ಅನುಭವಿಸಿದಾಗ ಮಾತ್ರ ಜೀವನ ಏನು ಎಂಬುದು ಅರಿವಾಗುತ್ತದೆ.





ರಾ.ಸೆ.ಯೋ ಯೋಜನಾಧಿಕಾರಿ  ರವಿಪ್ರಭಾ,  ರಾ. ಸೇ. ಯೋ ಕಾರ್ಯದರ್ಶಿಗಳಾದ ಸ್ಮಿತಾ, ಪೂಜಾ,ಉಪನ್ಯಾಸಕರಾದ ಡಾ. ಸತೀಶ್.ಕೆ ಅರುಣ್, ರಕ್ಷಿತ್, ಸ್ವಾತಿ, ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು