1:28 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಖ್ಯಾತ ಪತ್ರಕರ್ತ ಸುರೇಶ್ ಬೆಳಗಜೆ ಪುತ್ರನ ಕಲ್ಯಾಣ ವೈಭವ: ಕೋವಿಡ್ ಶಿಷ್ಟಾಚಾರದಲ್ಲಿ ಸರಳವಾಗಿ ನಡೆದ ವಿವಾಹ ಮಹೋತ್ಸವ

30/01/2022, 21:54

ಮಂಗಳೂರು(reporterkarnataka.com) ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ ಹಾಗೂ ಉಷಾ ಬೆಳಗಜೆ ಅವರ ಪುತ್ರ ಸುಕೇಶ್ ಬೆಳಗಜೆ ಅವರ ವಿವಾಹ ಶ್ರೀರಂಜಿತಾ ಅವರ ಜತೆ ಬಂಟ್ವಾಳದಲ್ಲಿ ಮಾಣಿಯ ಜನಭವನದಲ್ಲಿ ನಡೆಯಿತು.

ಸುರೇಶ್ ಬೆಳಗಜೆ ಅವರು ಪ್ರಜಾವಾಣಿಯಲ್ಲಿ ಸುಮಾರು 23 ವರ್ಷ, ಉದಯವಾಣಿಯಲ್ಲಿ 9 ವರ್ಷ, ಸುದ್ದಿ ಬಿಡುಗಡೆಯಲ್ಲಿ ಒಂದು ವರ್ಷ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಹಾಗೆ ಸಾಕಷ್ಟು ಕಿರಿಯ ಪತ್ರಕರ್ತರಿಗೆ ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡಿದ್ದರು.

ಸುರೇಶ ಬೆಳಗಜೆ-  ಉಷಾ ಬೆಳಗಜೆ ಅವರ ಪುತ್ರ ಸುಕೇಶ್ ಬೆಳಗಜೆ ಅವರನ್ನು ವರಿಸಿದ ವಧು ಶ್ರೀರಂಜಿತಾ ಅವರು ಮಂಗಳೂರು ಮಹಾನಗರ ಪಾಲಿಕೆಯ ನಿವೃತ್ತ ಅಧಿಕಾರಿ ಸತ್ಯನಾರಾಯಣ ಭಟ್ ಮತ್ತು ಪಾರ್ವತಿ ದಂಪತಿಯ ಪುತ್ರಿ.

ಮದುವೆ ಸಮಾರಂಭ ಜನವರಿ 26ರಂದು ನಡೆಯಿತು. ಕೋವಿಡ್ ಕಾರಣಕ್ಕೆ ನಿಗದಿತ ಮಿತಿಯಲ್ಲಿ ಆಹ್ವಾನಪತ್ರ ನೀಡಿದ್ದು, ಕಡಿಮೆ ಜನರ ಉಪಸ್ಥಿತಿಯಲ್ಲಿ ವಿವಾಹ ನೆರವೇರಿತು. ಬಳಿಕ ರಾತ್ರಿ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಬೆಳಗಜೆ ಮನೆಯಲ್ಲಿ ವಧೂ ಗೃಹಪ್ರವೇಶವೂ ಕೋವಿಡ್ ಶಿಷ್ಟಾಚಾರದೊಂದಿಗೆ ನೆರವೇರಿತು.

ಇತ್ತೀಚಿನ ಸುದ್ದಿ

ಜಾಹೀರಾತು