7:28 AM Thursday20 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಅಸಹಾಯಕರಿಗೆ ಸಹಾಯದ ಹಸ್ತ ಚಾಚುವ  ಸುವರ್ಣ ಸಂಸ್ಥಾನದ ಶ್ರೀ ಚನ್ನಮಲ್ಲ ಶಿವಯೋಗಿಗಳು 

04/06/2021, 18:33

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

 ಮಸ್ಕಿ ತಾಲೂಕಿನ ಕನಕಗಿರಿ-ಮೆದಿಕಿನಾಳದ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಮಠವು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಮಾಜಿಕವಾಗಿ, ಧಾರ್ಮಿಕವಾಗಿ,  ಶೈಕ್ಷಣಿಕವಾಗಿ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಡಾ. ಚೆನ್ನಮಲ್ಲ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಮಾಜದಲ್ಲಿ ಅಸಹಾಯಕರಿಗೆ ಸಹಾಯದ ಹಸ್ತವನ್ನು ಚಾಚುತ್ತಿದೆ.


2018ರಲ್ಲಿ ಕೊಡಗಿನ ನೆರೆ ಸಂತ್ರಸ್ತರಿಗಾಗಿ 50,001/-ರೂ.ಗಳನ್ನೂ ಹಾಗೂ 10 ಕ್ವಿಂಟಾಲ್ ಅಕ್ಕಿ, 1 ಕ್ವಿಂಟಾಲ್ ಗೋಧಿ, 3,1/2 ಕ್ವಿಂಟಾಲ್

ತೊಗರಿ ಬೇಳೆ, 2 ಕ್ವಿಂಟಾಲ್, ಅಕ್ಕಿ ನುಚ್ಚನ್ನು ಸಿ.ಎಂ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ. ಅಲ್ಲದೇ 2019ರಲ್ಲಿ ಮತ್ತೆ ನೆರೆಯಿಂದ ರಾಜ್ಯಕ್ಕೆ ತೊಂದರೆಯಾದಾಗ ಸಿಎಂ ಪರಿಹಾರ ನಿಧಿಗೆ 50,001/- ಗಳನ್ನು ನೀಡಿರುವದಲ್ಲದೆ, ಅದೇ ವರ್ಷ ನೆರೆಯಿಂದಾಗಿ ಬಾದಾಮಿಯ ಶಿವಯೋಗಮಂದಿರ ಮಲಪ್ರಭಾ ನದಿಯ ಪ್ರವಾಹದಿಂದಾಗಿ ಸಂಪೂರ್ಣವಾಗಿ ಮುಳುಗಿದ್ದರಿಂದ ಅಲ್ಲಿನ ನೂರಾರು ಗೋವುಗಳಿಗೆ ತೊಂದರೆಯಾದಾಗ ಶಿವಯೋಗ ಮಂದಿರ ಸಂಸ್ಥೆಗೆ 50,000/- ರೂಗಳನ್ನು ನೀಡಲಾಗಿದೆ. 2020 ಕಳೆದ ವರುಷ ಜಗತ್ತಿಗೆ ಕಾಡಿದ ಕೊರೊನಾ  ಮಹಾಮಾರಿಯ ವಿರುದ್ಧ ಹೋರಾಡಲು ಸಿಎಂ ಪರಿಹಾರ ನಿಧಿಗೆ 50,001/-ರೂ.ಗಳನ್ನು ನೀಡಿದ್ದಾರೆ. ಈ ವರುಷ ಮತ್ತೇ ಕೊರೊನಾದ 2ನೇ ಅಲೆಯೂ ಭೀಕರವಾಗಿ ಜನರನ್ನು ಕಾಡುತ್ತಿದೆ. ಲಾಕ್‌ಡೌನಿನ ಈ ಸಂದರ್ಭದಲ್ಲಿ ಬಡವರ ಬದುಕು ದುಡುಮೆ ಇಲ್ಲದೇ, ಮನೆಯಲ್ಲಿ ಊಟಕ್ಕೂ ದುಸ್ತರವಾಗಿರುವುದನ್ನು ಮನಗಂಡು ಕನಕಗಿರಿ-ಮೆದಿಕಿನಾಳ ಭಾಗದ 100 ಆಯ್ದ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ನೀಡುವ ಮೂಲಕ, ಸಾಮಾಜಿಕವಾಗಿ ಮಠ ತನ್ನ ಜವಾಬ್ದಾರಿಯುತ ಕೆಲಸವನ್ನು ಮಾಡುತ್ತಿದೆ.

ಆಹಾರ ಧಾನ್ಯಗಳ ಚೀಲದಲ್ಲಿರುವ ಸಾಮಗ್ರಿಗಳು:

1) 5 ಕೆ.ಜಿ. ಸೋನಾಮಸೂರಿ ಅಕ್ಕಿ

2) 1 ಕೆ.ಜಿ. ಗೋಧಿ ಹಿಟ್ಟು,

3) 1 ಕೆ.ಜಿ. ಬೇಳೆ

4) 1 ಕೆ.ಜಿ. ಒಳ್ಳೆ ಎಣ್ಣೆ

5) 1 ಕೆ.ಜಿ. ಅಲಸಂಧಿ ಕಾಳು

6) 1 ಕೆ.ಜಿ. ಶೇಂಗಾ ಬೀಜ 

7) 1 ಕೆ.ಜಿ. ಸಕ್ಕರೆ

8) 1 ಕೆ.ಜಿ. ರವಾ

9) 1 ಕೆ.ಜಿ. ಉಪ್ಪು

10) MTR ಮಸಾಲಿ,

11) ಜೀರಿಗೆ

12) ಸಾವಿರ

13) ಬಳ್ಳೊಳ್ಳಿ

14) ಖಾರ ಪುಡಿ

15) ಅರಿಶಿಣ ಪುಡಿ

16) ಚಹಾ ಪುಡಿ

17) 1 ಮೈಗೆ ಹಚ್ಚುವ ಸೋಪ 18) 1 ಬಟ್ಟೆ ತೊಳೆಯುವ ಸೋಪ. ಬಡವರ ಕೂಲಿಕಾರ್ಮಿಕ ಸಂಕಷ್ಟ ಇದಲ್ಲಿರುವ ರಿಗೆ ಶ್ರೀಮಠದ ಶ್ರೀ ಚನ್ನಮಲ್ಲ ಶಿವಯೋಗಿಗಳು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳ ಸಂಕಷ್ಟದಲ್ಲಿರುವ ದಾನ ನೀಡುವುದು ಪುಣ್ಯದ ಕೆಲಸ ವೆಂದು ಗ್ರಾಮ ಸದ್ಭಕ್ತರು ಮಾತನಾಡಿಕೊಳ್ಳುತ್ತಾರೆ.

 ಈ ಸಂದರ್ಭದಲ್ಲಿ ರಾಜಣ್ಣ ಮಲ್ಕಣ್ಣ ಶಿವಪುತ್ರಯ್ಯ ಸ್ವಾಮಿ ಶರಣಯ್ಯ ಸ್ವಾಮಿ ಮಲ್ಲಪ್ಪ ದಿದ್ದಿಗಿ ಆದಪ್ಪ ಕುಂಬಾರ್ ಇನ್ನು ಅನೇಕ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು