ಇತ್ತೀಚಿನ ಸುದ್ದಿ
ಮೂಡಿಗೆರೆ: 10 ಅಡಿ ಉದ್ದದ ಕಾಳಿಂಗ ಸೆರೆ; ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟ ಸ್ಥಳೀಯರು
09/01/2022, 22:06
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮನೆ ಬಳಿ ಬೇಟೆಗಾಗಿ ಹೊಂಚು ಹಾಕುತ್ತಿದ್ದ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ.
ಭಕ್ತಿಶ್ ಎಂಬುವರ ತೋಟದಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ಮೊಕ್ಕಾಂ ಹೂಡಿತ್ತು. ವಿಚಾರ ತಿಳಿದ ಕೂಡಲೇ ಆರಿಫ್ ಎಂಬುವವರು ಸ್ಥಳಕ್ಕೆ ಹೋಗಿ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದರು. ಅತ್ತಿಗೆರೆ ಗ್ರಾಮದಲ್ಲಿ ಹಿಡಿದ ಕಾಳಿಂಗವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ಚಾರ್ಮಾಡಿ ಘಾಟ್ ನಲ್ಲಿ ಬಿಡಲಾಯಿತು. ಕಾಳಿಂಗ ಸರ್ಪವನ್ನು ಹಿಡಿದ ಮೇಲೆ ಜನರು ಅದರೊಟ್ಟಿಗೆ ಫೋಟೋ, ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು