ಇತ್ತೀಚಿನ ಸುದ್ದಿ
ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಗಣಪತಿ ಭಟ್ ನಿಧನ
09/01/2022, 14:20

ಮಂಗಳೂರು(reporterkarnataka.com): ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಗಣಪತಿ ಭಟ್ ಅವರು ಇಂದು ಬೆಳಿಗ್ಗೆ ಸುಮಾರು 9.00ರ ಹೊತ್ತಿಗೆ ನಿಧನರಾದರು.
ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನದ ಬಳಿಕ ಅವರ ಮನೆ ಕೈರಂಗಳಕ್ಕೆ ಕೊಂಡೊಯ್ಯಲಾಗುವುದು. ಅವರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.