9:44 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ಕೊರೊನಾ ಕಷ್ಟಕಾಲದಲ್ಲಿ ಬಿಜೆಎಸ್ ನಿಂದ ಸಮಾಜಮುಖಿ ಕೆಲಸ: ವೀರೇಶ್ ಹಿರೇಮಠ ಸಂತಸ

03/06/2021, 16:16

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ 

info.reporterkarnataka@gmail.com

ಮಸ್ಕಿಯಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಭಾರತ ಜೈನ್ ಸಂಘಟನೆ ಸಮಾಜಕ್ಕೆ ಮಹತ್ತರ ಕೊಡುಗೆ  ನೀಡಿದೆ ಎಂದು ಮಸ್ಕಿ ಜಂಗಮ ಸಮಾಜದ ಯುವ ಮುಖಂಡ ವೀರೇಶ್ ಹಿರೇಮಠ ಹೇಳಿದರು.

ರಾಯಚೂರಿನ ಭಾರತೀಯ ಜೈನ ಸಂಘಟನೆಯು ರಾಯಚೂರು ಜಿಲ್ಲೆಯ ಕೋವಿಡ್ 19 ಸೋಂಕಿತ ಜನರ ಅನುಕೂಲಕ್ಕಾಗಿ ಆಕ್ಸಿಜನ್ ಮೆಷಿನ್ ಸೇವೆಯನ್ನು ಆರಂಭಿಸಿದ್ದು, ಈಗಾಗಲೇ ಸುಮಾರು 150 ಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದಿದ್ದಾರೆ. ಮಸ್ಕಿ ತಾಲೂಕಿನ ಕೋವಿಡ್ 19 ಸೋಂಕಿತ ಜನರ ಅನುಕೂಲಕ್ಕಾಗಿ ಬಿಜೆಎಸ್ ನೇತೃತ್ವದಲ್ಲಿ ಮಸ್ಕಿಯ ಶ್ರೀ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಸಹಯೋಗದಲ್ಲಿ ಆಕ್ಸಿಜನ್ ಸೇವೆಯನ್ನು ಇಂದು ಮಸ್ಕಿಯ ಅನ್ನಪೂರ್ಣ ನರ್ಸಿಂಗ್ ಹೋಮ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನೆರವೇರಿಸಲಾಯಿತು.

ಈಗಾಗಲೇ ಸಂಸ್ಥೆಯಿಂದ ಬಡ ಕುಟುಂಬಗಳು ಗುರುತಿಸಿ ಅವರಿಗೆ ಸಹಾಯ ಸಾಕಷ್ಟು ನೆರವು ನೀಡಿದೆ.  ಸಂಸ್ಥೆಯು ರಾಯಚೂರು ಜಿಲ್ಲೆ ಸೇರಿದಂತೆ ಸಂಕಷ್ಟದಲ್ಲಿರುವ ಜನರಿಗೆ ದಾರಿದೀಪವಾಗಿ ಕೆಲಸ ಮಾಡುತ್ತದೆ ಎಂದು ವೀರೇಶ್ ಹಿರೇಮಠ ತಿಳಿಸಿದರು.

 ಕಾರ್ಯಕ್ರಮದಲ್ಲಿ ಮಸ್ಕಿ ತಹಶೀಲ್ದಾರ್, ಬಲರಾಮ್ ಕಟ್ಟಿಮನಿ, ಪುರಸಭೆಯ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ  ಮತ್ತು  ಶ್ರೀ ಭ್ರಮರಾಂಬ ಸಹಕಾರಿಯ ಅಧ್ಯಕ್ಷರಾದ ಡಾ. ಶಿವಶರಣಪ್ಪ ಇತ್ಲಿ ಅವರು ಆಕ್ಸಿಜನ್ ಮಶೀನ್ ಬಟನ್ ಒತ್ತುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸಹಕಾರಿಯ ಉಪಾಧ್ಯಕ್ಷರಾದ ಪಂಪಣ್ಣ ಗುಂಡಳ್ಳಿ, ನಿರ್ದೇಶಕರಾದ ಪ್ರಕಾಶ್ ದಾರಿವಾಲ್, ಡಾ. ಮಲ್ಲಿಕಾರ್ಜುನ್ ಇತ್ಲಿ ಇದ್ದರು. 
ಸಹಕಾರಿಯ ಪ್ರಧಾನ ವ್ಯವಸ್ಥಾಪಕರಾದ 
ವೀರೇಶ್ ಹಿರೇಮಠ ಅವರು ಕಾರ್ಯಕ್ರಮ ನಿರೂಪಿಸಿದರು. ಸಹಕಾರಿಯ ನಿರ್ದೇಶಕರು, ಸಲಹಾ ಸಮಿತಿಯ ಸದಸ್ಯರು, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು