ಇತ್ತೀಚಿನ ಸುದ್ದಿ
ಹಗರಿಬೊಮ್ಮನಹಳ್ಳಿ ಪುರಸಭೆ: ಕಾಂಗ್ರೆಸ್ 12, ಬಿಜೆಪಿ 11 ಸ್ಥಾನಗಳಲ್ಲಿ ಗೆಲುವು
30/12/2021, 15:59
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆ ಚುನಾವಣೆ ಫಲಿತಾಂಶ ಹೊರಬಂದಿದ್ದು, ಒಟ್ಟು 23 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳು ಮತ್ತು 11ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಚುನಾವಣಾ ಕಣದಲ್ಲಿ ಬಿಜೆಪಿಯ ಮಾಜಿ ಶಾಸಕ ನೇಮಿರಾಜ್ ನಾಯ್ಕ, ಹಾಗೂ ಕಾಂಗ್ರೇಸ್ ನ ಹಾಲಿ ಭೀಮಾನಾಯ್ಕ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಹಣಾ ಹಣಿ ಏರ್ಪಟ್ಟಿತ್ತು.
ಫಲಿತಾಂಶ- ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ವಾರ್ಡ್ ನಂ ಹಾಗೂ ಅಭ್ಯರ್ಥಿ ಹೆಸರು(1)
ಸರಸ್ವತಿ, (2)ಇಸ್ಮಾಯಿಲ್ ಸಾಬ್ ತೆಲಗಿ,(4)ಮಂಜುಳಾ.ಯು,(5)ಲಂಬಾಣಿ ಗಣೇಶ, 8: ಕೆ. ರೇಷ್ಮ, (9)ರಾಜೇಶ ಬ್ಯಾಡಗಿ,(10)ಡಿ.ಎಮ್.ಅಜೀಜ್ ಉಲ್ಲಾ,(12) ಅಂಬಿಕಾ, (17) ಖಾಜಾಬನ್ನಿ ಅಲ್ಲಾಭಕ್ಷಿ, (20) ಸೆರೆಗಾರ ನೇತ್ರಾವತಿ,(21)ಎಮ್.ಮರಿರಾಮಪ್ಪ,(22)ಪವಾಡಿ ಹನುಮಂತಪ್ಪ. ಕಾಂಗ್ರಸ್ ಒಟ್ಟು 12 ಅಭ್ಯರ್ಥಿಗಳ ಗೆಲುವು. ಬಿಜೆಪಿ ಪಕ್ಷದ ಅಭ್ಯರ್ಥಿಗಳು,ವಾರ್ಡ್ ನಂ ಅಭ್ಯರ್ಥಿ ಹೆಸರು -(3)ಹೆಚ್.ಎಮ್.ಚನ್ನಮ್ಮ,(6)ಅಂಬಳಿ ಮಂಗಳ, (7)ದೀಪಕ್ ಸಾ ಆರ್.ಕಠಾರೆ, (11)ಈರಣ್ಣ, (13)ಬಣಕಾರ ಸುರೇಶ, (14)ನಾಗರಾಜ ಜನ್ನು, (15) ಮಲ್ಲೇಶ್ವರಿ ಭರತ್,(16)ಬಿ.ಗಂಗಣ್ಣ, (18)ಎಸ್.ಕಮಲ,(19)ನವೀನ್ ಕುಮಾರ್.ಪಿ, (23)ಜೋಗಿ ಹನುಮಂತ. ಬಿಜೆಪಿ ಪಕ್ಷದ ಒಟ್ಟು 11ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಡಿ 28ರಂದು ಜರುಗಿದ ಪುರಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬಂದಿದ್ದು, ಪುರಸಭೆಯ ಚುಕ್ಕಾಣಿಯನ್ನು ಕಾಂಗ್ರೇಸ್ ಮತ್ತೊಮ್ಮೆ ಹಿಡಿದಂತಾಗಿದೆ.