3:34 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಸಾಲವಾಗಿ ಪಡೆದ ಹಣವನ್ನು ಕಾಲಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು: ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷ ಸುಬ್ಬಾರೆಡ್ಡಿ 

24/12/2021, 09:23

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಸಾಲವಾಗಿ ಪಡೆದ ಹಣವನ್ನು ಕಾಲಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು ಎಂದು ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷ ಸುಬ್ಬಾರೆಡ್ಡಿ ಹೇಳಿದರು . ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ , ಬ್ಯಾಂಕ್ ರೈತರಿಗೆ ಕೇವಲ ಶೇ .೩ ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ . ರೈತರಿಗೆ ಕೃಷಿ ಅಭಿವೃದ್ಧಿಗಾಗಿ ತಲಾ ರೂ .೧೦ ಲಕ್ಷದ ವರೆಗೆ ಸಾಲ ನೀಡಲಾಗುವುದು . ಸಾಲ ವಸೂಲಾತಿ ಪ್ರಮಾಣ ಶೇ .೭೮ ರಷ್ಟಿದೆ ಎಂದು ಹೇಳಿದರು . ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎಲ್‌.ಗೋಪಾಲಕೃಷ್ಣ ಮಾತನಾಡಿ , ಖಾಸಗಿ ಬ್ಯಾಂಕ್‌ಗಳು ಅಧಿಕ ಬಡ್ಡಿ ವಿಧಿಸಿ ಸಾಲ ನೀಡುತ್ತವೆ . ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸಾಲ ಪಡೆಯುವುದು ಸುಲಭದ ಮಾತಲ್ಲ . ಇಂಥ ಪರಿಸ್ಥಿತಿಯಲ್ಲಿ ಪಿಎಲ್‌ಡಿ ಬ್ಯಾಂಕ್ ರೈತ ಸ್ನೇಹಿಯಾಗಿ ಆರ್ಥಿಕ ನೆರವು . ನೀಡುತ್ತಿದೆ . ಅದನ್ನು ಉದ್ದೇಶಿತ ಕಾರ್ಯಕ್ಕೆ ಮಾತ್ರ ಬಳಸಬೇಕು . ಬ್ಯಾಂಕ್ ಅಭಿವೃದ್ಧಿ ದೃಷ್ಟಿಯಿಂದ ಸಾಲ ಮರುಪಾವತಿ ಅತ್ಯಗತ್ಯ ಎಂದು ಹೇಳಿದರು . ಈ ಸಂದರ್ಭದಲ್ಲಿ ಪಸಕ್ತ ವರ್ಷದಲ್ಲಿ ಬ್ಯಾಂಕ್ ನಿರ್ವಹಣೆಗೆ ರೂ .೫೫.೪೫ ಲಕ್ಷ ಖರ್ಚು ಮಾಡಲು ಸಭೆ ಅನುಮೋದನೆ ನೀಡಿತು . ನಿರ್ದೇಶಕರಾದ ಟಿ.ವಿ.ಕೃಷ್ಣಾರೆಡ್ಡಿ , ರಾಮಚಂದ್ರಾರೆಡ್ಡಿ , ಶ್ರೀಕಂಠರೆಡ್ಡಿ , ಜಗದೀಶ್ ಕುಮಾರ್ , ನಾರಾಯಣಸ್ವಾಮಿ , ಪಾಪನ್ನ , ಗಂಗಿರೆಡ್ಡಿ , ಟಿ.ಎ.ನಾರಾಯಣಸ್ವಾಮಿ , ನಾಗರಾಜ್ , ಗುರಪ ಮುಖಂಡರಾದ ಅಯ್ಯಪ್ಪ , ಸೀತಾರಾಮರೆಡ್ಡಿ , ಮೋಹನ್ ಕುಮಾರ್ , ವೆಂಕಟಸುಬಾರೆಡ್ಡಿ , ನರಸಿಂಹಪ್ಪ , ವ್ಯವಸ್ಥಾಪಕ ಸಿ.ಎನ್‌.ಈಶ್ವರ್‌ , ವಿ.ಶ್ರೀನಿವಾಸ್ , ಸತೀಶ್ , ಮಂಜುನಾಥ್ , ಕೆ.ಬಿ.ನರೇಶ್‌ ಇದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು