2:59 AM Sunday5 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ ಸ್ಪರ್ಧೆ: ಬಾಲ ಪ್ರತಿಭೆ ಅವನಿ ಹಾಗೂ ಭೂಮಿಕಾ ಶೆಟ್ಟಿ ಮೇ ತಿಂಗಳ ಟಾಪರ್

02/06/2021, 06:58

ಮಂಗಳೂರು(reporterkarnataka news); ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮೇ ತಿಂಗಳ ಟಾಪರ್ ಆಗಿ ಬಾಲಪ್ರತಿಭೆ ಅವನಿ ಮೋಹನ್ ಹಾಗೂ ಭೂಮಿಕಾ ಆರ್. ಶೆಟ್ಟಿ ಆಯ್ಕೆಗೊಂಡಿದ್ದಾರೆ.

ಅವನಿ ಮೋಹನ್ ಮಡಿಕೇರಿಯವರು. ಮೋಹನ್ ಹಾಗೂ ವೀಣಾ ಅವರ ಪುತ್ರಿ. ನಟನೆ, ಗಾಯನ, ನೃತ್ಯ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಅವನಿ ತನ್ನದೇ ಶೈಲಿಯ ನಟನೆ ಮೂಲಕ ಜನಮೆಚ್ಚುಗೆ ಪಡೆದಿದ್ದಾರೆ. ಬಹುಮುಖ ಪ್ರತಿಭೆ ಈ ಬಾಲ ಕಲಾವಿದೆ.

ಭೂಮಿಕಾ ಶೆಟ್ಟಿ ಅವರು ಸುಳ್ಯದ ಕೆವಿಜಿ ಡೆಂಡಲ್ ಕಾಲೇಜಿನಲ್ಲಿ  ಎರಡನೇ ವರ್ಷದ ಬಿಡಿಎಸ್ ವಿದ್ಯಾರ್ಥಿನಿ. ತಂದೆ ಸರಕಾರಿ ಉದ್ಯೋಗಿ ರವೀಂದ್ರನಾಥ ಶೆಟ್ಟಿ ಹಾಗೂ ತಾಯಿ ಉಜ್ವಲಾ ಆರ್. ಶೆಟ್ಟಿ. ಕಾಸರಗೋಡಿ ನಸಸಿಹಿತ್ಲು-ಶಿವ ಭೂಮಿ ನೆಟ್ಟಣಿಗೆಯಲ್ಲಿ ವಾಸವಾಗಿದ್ದಾರೆ.

ಕಲಿಕೆಯಲ್ಲಿ ಬಹಳಷ್ಟು ಮುಂದಿರುವ ಭೂಮಿಕಾ ಅವರು 10ನೇ  ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ A+ ಪಡೆದು ಶೇ. 97 ಅಂಕ ಪಡೆದಿದ್ದರು. ಹಾಗೆ ಪಿಯುಸಿಯಲ್ಲಿ ಪಿಸಿಎಂಬಿಯಲ್ಲಿ ಶೇ. 92 ಅಂಕ ಗಳಿಸಿದ್ದರು. ಕೋಳಿಕ್ಕಜೆ ಬಾಲಸುಬ್ರಹ್ಮಣ್ಯಂ ಭಟ್ ಅವರಿಂದ ಸಂಗೀತ ಅಭ್ಯಾಸ. ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಅವರಿಂದ ಭರತನಾಟ್ಯ ಕಲಿತರು. ಭರತನಾಟ್ಯ ಸೀನಿಯರ್ ಗ್ರೇಡ್ ನಲ್ಲಿ ಶೇ. 80 ಅಂಕ ಪಡೆದಿದ್ದರು. ಭರತನಾಟ್ಯದಲ್ಲಿ ಇದುವರೆಗೆ 230ಕ್ಕೂ ಅಧಿಕ ಕಾಯ೯ಕ್ರಮಗಳನ್ನು ನೀಡಿದ್ದಾರೆ.

ಸಂಗೀತ, ಭರತನಾಟ್ಯ ಜತೆಗೆ ಚಿತ್ರಕಲೆಯ ಹವ್ಯಾಸವೂ ಇವರಿಗಿದೆ. ಸತತವಾಗಿ 5ವಷ೯ ಜಿಲ್ಲಾ ಮಟ್ಟದಲ್ಲಿ ಕನ್ನಡ, ಇಂಗ್ಲಿಷ್, ಸಂಸ್ಕೃತ ಕಂಠಪಾಠ ದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಭರತನಾಟ್ಯ ದಲ್ಲಿ ಜಿಲ್ಲಾಮಟ್ಟದಲ್ಲಿ ಬಹುಮಾನ ಪಡೆದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು