9:12 AM Wednesday27 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಕೋಲಾರ: ರಮೇಶ್‌ ಕುಮಾರ್‌ ಪ್ರತಿಕೃತಿ ದಹನ; ಶಾಸಕ ಸ್ಥಾನದಿಂದ ವಜಾಕ್ಕೆ ಒತ್ತಾಯಿಸಿ ಮೆರವಣಿಗೆ 

19/12/2021, 10:28

ಕೋಲಾರ(reporterkarnataka.com) : ನಾಗರೀಕ ಸಮಾಜವು ತಲೆತಗ್ಗಿಸುವಂತಹ ಮಹಿಳೆಯರ ಸ್ವಾಭಿಮಾನಕ್ಕೆ ಆತ್ಮಗೌರವಕ್ಕೆ ಧಕ್ಕೆ ಉಂಟು ಮಾಡುವ, ಸದನ ಗೌರವಕ್ಕೆ ಚ್ಯುತಿ ತರುವಂತಹ “ ಅತ್ಯಾಚಾರವನ್ನು ತಡೆಯಲು ಸಾಧ್ಯವಾಗದೇ ಇದ್ದಾಗ ಸುಮ್ಮನ ಮಲಗಿ ಆನಂದಿಸಬೇಕು ” ಎಂಬ ಬಾಲಿಶ ಹೇಳಿಕೆಯನ್ನು ನೀಡಿದ ಶ್ರೀನಿವಾಸಪುರದ ಶಾಸಕ ಕೆ.ಆರ್‌.ರಮೇಶ್ ಕುಮಾರ್ ಅವರನ್ನು ಶಿಸ್ತು ಕ್ರಮಕ್ಕೆ ಗುರಿಪಡಿಸಿ ವಜಾಗೊಳಿಸುವಂತೆ ಒತ್ತಾಯಿಸಿ 

ರಾಜ್ಯಪಾಲರಿಗೆ ಕೋಲಾರದ ತಹಶೀಲ್ದಾರ್ ಮುಖಾಂತರ ಮನವಿ ಪತ್ರವನ್ನು ಭಾರತೀಯ ದಲಿತ ಸೇನೆಯ ಎಂ.ನಾರಾಯಣಸ್ವಾಮಿ ಸಲ್ಲಿಸಿದರು.

ಬಂಗಾರಪೇಟೆ ವೃತ್ತದಿಂದ ಮೆಕ್ಕೆ ವೃತ್ತದ ವರೆಗೆ ನೂರಾರು ಪ್ರತಿಭಟನಾಕಾರರೊಂದಿಗೆ ರಾಲಿ ನಡೆಸಿ , ಮೆಕ್ಕೆ ವೃತ್ತದಲ್ಲಿ ರಮೇಶ್ ಕುಮಾರ್  ಅವರ ಪ್ರತಿಕೃತಿಯನ್ನು ದಹನ ಮಾಡಿ ನಂತರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ನಂತರ ಮಾತನಾಡಿದ ಅವರು ಶಾಸಕ ರಮೇಶ್ ಕುಮಾರ್  ಅವರು ಸಿದ್ಧಾಂತದ ಹಾಗೂ ರಾಜಕೀಯ ಪಾತಿವ್ರತ್ಯದ ಕುರಿತು ಕೇವಲ ವೇದಿಕೆಗಳಲ್ಲಿ ಮಾತ್ರ ಮಾತನಾಡುತ್ತಾರೆಯೇ ವಿನಃ ಇದನ್ನು ತಮ್ಮ ನಿಜ ಜೀವನದಲ್ಲಿ ಪಾಲಿಸುವುದಿಲ್ಲ ಎಂಬುವುದಕ್ಕೆ ಈ ಘಟನೆಯು ನಿದರ್ಶನವಾಗಿದೆ . 

ಶಾಸಕರಾಗಿ ಸಭಾಧ್ಯಕ್ಷರಾಗಿ ದಶಕಗಳ ರಾಜಕೀಯ ಅನುಭವವನ್ನು ಮುತ್ಸದ್ದಿತನವನ್ನು ಹೊಂದಿರುವುದಾಗಿ ಬೀಗುತ್ತಿರುವ ಇವರು ಮಹಿಳೆಯರ ಕುರಿತು ಅತ್ಯಾಚಾರವನ್ನು ಒಂದು ಹಾಸ್ಯಾಸದ ವಸ್ತುವನ್ನಾಗಿ ಮಾಡಿ ಸದನದಲ್ಲಿ ಹೇಳಿಕೆ ನೀಡಿ ಇತರರನ್ನು ನಗಿಸುವ ಉದ್ದೇಶದಿಂದ ನೀಡಿರುವ ಹೇಳಿಕೆಯು ಇವರ ಘನತೆಗೆ ತಕ್ಕದ್ದಲ್ಲ . ಇವರ ಈ ಹೇಳಿಕೆಯು ಮಹಿಳೆಯರ ಆತ್ಮಗೌರವಕ್ಕೆ ಧಕ್ಕೆಯಾಗುತ್ತದೆ ಎಂಬ ಪರಿಜ್ಞಾನವನ್ನು ಹೊಂದದೆ ನೀಡಿರುವುದು ಖಂಡನೀಯ ಎಂದಿರುತ್ತಾರೆ .

ಭಾರತೀಯ ಮಹಿಳೆಗೆ ತನ್ನ ಶೀಲ ಎಂಬುವುದು ಪ್ರಧಾನವಾದ ಅತ್ಯಮೂಲ್ಯವಾದ ಸಂಗತಿಯಾಗಿರುತ್ತದೆ. ಅತ್ಯಾಚಾರವು ಮಹಿಳೆಯರನ್ನು ಶೋಭೆಗೆ ಗುರಿಪಡಿಸುವ ಮಾನಸಿಕ ಅಘಾತಕ್ಕೆ ತಳುವ ಹೀನ ಪ್ರವೃತ್ತಿಯಾಗಿದ್ದು , ಇದನ್ನು ಅತ್ಯಾಚಾರಕ್ಕೆ ಒಳಪಡುವ ಮಹಿಳೆ ತಡೆಯಲು ಸಾಧ್ಯವಾಗದೇ ಇದ್ದಾಗ ಹೇಗೆ ತಾನೇ ಸುಮ್ಮನೆ ಮಲಗಿ ಸಂಭ್ರಮಿಸಲು ಸಾಧ್ಯ ? ಇಂತಹದನ್ನು ಊಹಿಸಲು ಸಹ ಸಾಧ್ಯವೇ ? ಇದು ಮಾನವೀಯತೆಯೇ ? ನಾಗರೀಕ ಸಮಾಜವು ಒಪುವಂತಹದೇ ಎಂದು ಪ್ರಶ್ನಿಸಿರುತ್ತಾರೆ .

ಇಂತಹ ಸಮಾಜ ವಿರೋಧಿ ಬಾಲಿಷ ಹೇಳಿಕೆಯನ್ನು ನೀಡಿದಂತಹ ರಮೇಶ್‌ ಕುಮಾರ್ ವಿರುದ್ಧ ಸಭಾಧ್ಯಕ್ಷರು ಮತ್ತು ರಾಜ್ಯಪಾಲರು ಶಿಸ್ತು ಕ್ರಮವನ್ನು ತೆಗೆದುಕೊಂಡು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಕಾಂಗ್ರೆಸ್ ಪಕ್ಷವು ಕೇವಲ ಖಂಡಿಸುವ ಹೇಳಿಕೆಗಳನ್ನು ನೀಡುತ್ತಿರುವುದಕ್ಕೆ ಸೀಮಿತವಾಗದೆ ಇವರನ್ನು ಪಕ್ಷದಿಂದ ಅಮಾನತ್ತುಪಡಿಸಿ ಶಾಸಕ ಸ್ಥಾನದಿಂದ ಉಚ್ಚಾಟನೆಗೊಳಿಸಲು ಕ್ರಮ ವಹಿಸಬೇಕು .

ಸಭಾಧ್ಯಕ್ಷರು ಮುಂದಿನ ಕಾಲಮಾನದಲ್ಲಿ ಇಂತಹ ಸಂವಿಧಾನ ವಿರೋಧಿ ಹಾಗೂ ಯಾವುದೇ ವ್ಯಕ್ತಿಗಳ ಆತ್ಮಗೌರವಕ್ಕೆ ಧಕ್ಕೆಯನ್ನು ತರುವಂತಹ ಹೇಳಿಕೆಗಳನ್ನು ನೀಡಲು ಅವಕಾಶವನ್ನು ನೀಡಬಾರದು. ಇಂತಹ ಕೃತ್ಯಗಳನ್ನು ಮಾಡುವವರ ವಿರುದ್ಧ ಎಷ್ಟೇ ದೊಡ್ಡವರಾಗಿದ್ದರೂ ತಕ್ಕ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಇತರರಿಗೆ ಒಳ್ಳೆಯ ಸಂದೇಶವನ್ನು ಸಾರುವಂತಹ ಕೆಲಸಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಭಾರತೀಯ ದಲಿತ ಸೇನೆಯ ಮುಖಂಡರುಗಳಾದ ಸಾಹುಕಾರ ಶಂಕರಪ ಕರಾಟೆ ಯಲ್ಲಪ್ಪ , ಮಾಹಿತಿ ಮಂಜು , ಗಾಂಧಿನಗರ ರಾಮಚಂದ್ರ , ಮಹಿಳಾ ಕಾರ್ಯಕರ್ತರಾದ ರಾಧಮ್ಮ ಯಲ್ಲಮ್ಮ , ಸಾವಿತ್ರಿ , ಇನ್ನು ಮುಂತಾದವರು ಪಾಲ್ಗೊಂಡಿದರು .

ಇತ್ತೀಚಿನ ಸುದ್ದಿ

ಜಾಹೀರಾತು