ಇತ್ತೀಚಿನ ಸುದ್ದಿ
ಅಂತರ್ ರಾಜ್ಯ ಗಡಿಯಲ್ಲಿ 2 ಕೋಟಿ ರೂ. ಮೌಲ್ಯದ ಭಾರಿ ಗಾಂಜಾ ಪತ್ತೆ: ಲಾರಿ, ಪಿಕ್ ಅಪ್ ವಾಹನ ವಶಕ್ಕೆ: 3 ಮಂದಿ ಬಂಧನ
13/12/2021, 07:59

ವೀರಾಜಪೇಟೆ(reporterkarnataka.com): ಅಂತರ್ ರಾಜ್ಯ ರಹದಾರಿಯನ್ನು ಪಡೆದಿರುವ ಲಾರಿಯಲ್ಲಿ ಅಂದ್ರಪ್ರದೇಶದಿಂದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 227 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ವಿವಿಧ ರಾಜ್ಯಗಳ ಗಡಿಯನ್ನು ಪ್ರವೇಶ ಮಾಡಿ ಕೇರಳ ರಾಜ್ಯದಲ್ಲಿ ಮಾರಾಟ ಮಾಡಲು ಉದ್ದೇಶಿಸಿದ ಲಾರಿ ಪಿಕ್ ವಾಹನ ಹಾಗೂ ಮಾಲು ಕೇರಳ ರಾಜ್ಯದ ಮೂವರು ಬಂಧಿಸಲಾಗಿದೆ. ಈ ಘಟನೆ ಇರಿಟ್ಟಿ ಕೂಟುಪೊಳೆ ವಳವು ಪಾರ ಎಂಬಲ್ಲಿ ನಡದಿದೆ.
ಕೇರಳ ರಾಜ್ಯದ ಮಟ್ಟನ್ನೂರು ಪುತ್ತನ್‌ಪುರ ಹೌಸ್ ನಿವಾಸಿಯಾದ ಅಬ್ದುಲ್ ಮಜೀದ್, ತಲಚೇರಿ ನಿವಾಸಿ ಸಜೀರ್ ಮತ್ತು ವಲಿಯಾಂಬ್ರ ಪಯಶಿ ಡ್ಯಾಂ ಬಳಿಯ ಶಕೀಲಾ ಮಂಜಿಲ್ ನಿವಾಸಿ ಎಂ ಶಂಸೀರ್ ಬಂಧಿತ ಆರೋಪಿಗಳು.
ಘಟನೆ ವಿವರ: ಕೇರಳ ರಾಜ್ಯದ ನೊಂದಾಣಿಯಾಗಿರುವ ವಾಹನ ಸಂಖ್ಯೆ ಕೆಎಲ್-೫೮ಎಬಿ-೪೪೮೧ ಲಾರಿಯಲ್ಲಿ ಇಬ್ಬರು ಆರೋಪಿತರು ಮತ್ತು ಪಿಕ್ ಅಪ್ ಸಂಖ್ಯೆ ಕೆಎಲ್-೧೪ಎಫ್-೩೫೨೪ ವಾಹನದಲ್ಲಿ ಒಬ್ಬ ಕೇರಳದಿಂದ ಕರ್ನಾಟಕ ರಾಜ್ಯ ಗಡಿಭಾಗವಾಗದ ಮಾಕೂಟ್ಟ ಮಾರ್ಗವಾಗಿ ಬೆಂಗಳೂರು ನಗರವನ್ನು ಪ್ರವೇಶ ಮಾಡುತ್ತಾರೆ. ಪಿಕ್ ವಾಹನವನ್ನು ಬೆಂಗಳೂರು ನಗರದ ಅಜ್ಞಾತ ಸ್ಥಳದಲ್ಲಿ ನಿಲುಗಡೆಗೊಳಿಸಿ. ಲಾರಿಯೋಂದಿಗೆ ಮೂವರು ಆಂಧ್ರಪ್ರದೇಶದ ವಿಶಾಖಪಟ್ಟಣಂ ಸ್ಥಳಕ್ಕೆ ಪ್ರಯಾಣ ಬೆಳೆಸುತ್ತಾರೆ. ವಿಶಾಖಪಟ್ಟಣಂ ಸನೀಹದ ಅಜ್ಞಾತ ಸ್ಥಳದಿಂದ ೨೨೭ ಕೆ.ಜಿ. ಗಾಂಜಾ ಪೊಟ್ಟಣಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಬೆಂಗಳೂರುವಿಗೆ ಆಗಮಿಸುತ್ತಾರೆ. ಯಾರಿಗೂ ಸಂದೇಹ ಬಾರದ ರೀತಿಯಲ್ಲಿ ಲಾರಿಯಲ್ಲಿ ನೆಲಹಾಸು ಕಲ್ಲುಗಳು (ಗ್ರಾನೈಟ್)ಗಳು ತಂಪು ಪಾನೀಯ ಬಾಟೇಲುಗಳು,ಹಾಗೂ ಇನ್ನಿತರ ಗೃಹ ಉಪಯೋಗಿ ದಿನಸಿ ವಸ್ತುಗಳನ್ನು ಗಾಂಜಾ ಪೊಟ್ಟಣಗಳ ಮೇಲ್ಬಾಗದಲ್ಲಿರಿಸುತ್ತಾರೆ. ಎಲ್ಲಾ ವಸ್ತುಗಳು ತುಂಬಿದ ಲಾರಿಯನ್ನು ಇಬ್ಬರು ಅರೋಪಿಗಳು ಬೆಂಗಳೂರುವಿನಿಂದ ಮೈಸೂರು ಕೊಡಗು ಕರ್ನಾಟಕ ರಾಜ್ಯ ಗಡಿಭಾಗವಾದ ಮಾಕೂಟ್ಟ ಮಾರ್ಗವಾಗಿ ಕೂಟುಪೊಳೆಯ ವಳವು ಪಾರೆ ಎಂಬ ಸ್ಥಳಕ್ಕೆ ಆಗಮಿಸುತ್ತದೆ. ಇತ್ತಾ ಬೆಂಗಳೂರುನಲ್ಲಿ ನಿಲುಗಡೆಗೊಳಿಸಿದ್ದ ಪಿಕ್ ಅಪ್ ವಾಹನದಲ್ಲಿ ಓರ್ವ ಅರೋಪಿಯು ಲಾರಿಯನ್ನು ಹಿಂಬಾಲಿಸಿಕೊಂಡು ಸ್ಥಳಕ್ಕೆ ಆಗಮಿಸುತ್ತಾನೆ. ಕರ್ನಾಟಕ ಗಡಿಯನ್ನು ದಾಟಿದ ಎರಡು ವಾಹನಗಳು ವಳವು ಪಾರ ಎಂಬ ಸ್ಥಳದಲ್ಲಿ ಲಾರಿಯಲ್ಲಿದ್ದ ಎಲ್ಲಾ ವಸ್ತುಗಳನ್ನು ಕೆಳಗಿಳಿಸಿ ವಯನಾಡ್ ಕೊಯಿಕೊಡ್ ಕೊಲ್ಲಂ ಕಣ್ಣೂರು ಮತ್ತು ಇತರ ಸ್ಥಳಗಳಿಗೆ ರವಾನಿಸಿಲು ೨೨೭ ಕೆ.ಜಿ ಗಾಂಜಾ ಪೊಟ್ಟಣಗಳನ್ನು ಪಿಕ್ ಅಪ್ ವಾಹನದಲ್ಲಿ ತುಂಬಿಸುವ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಕೇರಳ ರಾಜ್ಯದ ಅಬಕಾರಿ ಕಾನೂನು ಮತ್ತು ಜಾರಿ ಇಲಾಖೆ ತಂಡವು ಲಾರಿಯ ಮೇಲೆ ಧಾಳಿ ನಡೆಸುತ್ತಾರೆ. ದಾಳಿ ವೇಳೆಯಲ್ಲಿ ರಾಜ್ಯದ ವಿವಿಧ ಸ್ಥಳಕ್ಕೆ ರವಾನಿಸಲು ಸಿದ್ದಗೊಂಡಿದ್ದ ೨೨೭ ಕೆ.ಜಿ ಗಾಂಜಾ ಪೊಟ್ಟಣಗಳನ್ನು ವಶಕ್ಕೆ ಪಡೆಯುತ್ತಾರೆ. ವಶಕ್ಕೆ ಪಡೆದಿರುವ ಮಾಲುಗಳ ಮಾರುಕಟ್ಟೆಯ ಮೌಲ್ಯವು ಸುಮಾರು ೨ ಕೋಟಿ ರೂ.ಗಳದಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಲಾರಿಯಲ್ಲಿ ಪ್ರಯಾಣಿಸುತಿದ್ದ ಇಬ್ಬರು ಹಾಗೂ ಪಿಕ್ ಅಪ್ ವಾಹನದ ಚಾಲಕನನ್ನು ಬಂಧಿಸುತ್ತಾರೆ. ಬಂಧನವಾದ ಮೂವರ ಮೇಲೆ ಇರಿಟ್ಟಿ ಆರಕ್ಷಕ ಠಾಣೆಯಲ್ಲಿ ಕೇರಳ ರಾಜ್ಯ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆಯ ವಿವರಗಳ ಬಗ್ಗೆ ಮಾದ್ಯಮ ಪ್ರತಿನಿಧಿಗಳೋಂದಿಗೆ ಮಾತನಾಡಿದ ಅಬಕಾರಿ ವಿಶೇಷ ತನಿಖಾ ದಳದ ವೃತ್ತ ನೀರೀಕ್ಷರುಗಳಾದ ಟಿ.ಅನಿಲ್ ಕುಮಾರ್ ಅವರು ಕಳೆದ ಮೂರು ನಾಲ್ಕು ದಿನಗಳ ಹಿಂದೆ ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯು ಇಲಾಖೆಗೆ ಲಭಿಸಿತ್ತು. ಅದರೆ ಸಂಧರ್ಭಕ್ಕಾಗಿ ಹೊಂಚು ಹಾಕುತಿದ್ದೇವು, ಇಲಾಖೆಯ ಸಿಬ್ಬಂದಿಗಳು ಲಾರಿ ಮತ್ತು ಪಿಕ್ ಅಪ್ ವಾಹನದ ದಾಖಲೆಗಳನ್ನು ಪಡೆದುಕೊಂಡು ಬೆಂಗಳೂರುವಿಗೆ ತೆರಳಿದ್ದರು. ಅಸ್ಥಳದಿಂದ ಇಲ್ಲಿಯವರೆಗೆ ವಾಹನಗಳನ್ನು ಹಿಂಬಾಲಿಸಿಕೊಂಡು
ರಾಜ್ಯದಲ್ಲೆ ಅರೋಪಿಗಳನ್ನು ಮಾಲು ಸಮೇತವಾಗಿ ಬಂದಿಸಿದ್ದೇವೆ. ಬಂದಿತ ಅರೋಪಿಗಳು ಪ್ರಮುಖ ಮಾರಾಟಗರನ ಬೆನಾಮಿಗಳಾಗಿದ್ದಾರೆ.ಬಂದನದ ವೇಳೆಯಲ್ಲಿ ವಿಶಾಖಪಟ್ಟಣಂ ನಿಂದ ಗಾಂಜಾ ಪೊಟ್ಟಣಗಳನ್ನು ಪಡೆದುಕೊಂಡು ಕೇರಳ ರಾಜ್ಯದ ಕಣ್ಣೂರು ಕಾಸರಗೋಡು, ಕೊಯಿಕೊಡ್ ಸೇರಿದಂತೆ ಇತರ ಸ್ಥಳಗಳ ಗಿರಾಕಿಗಳಿಗೆ ಮಾರಾಟ ಮಾಡುವ ಉದ್ದೇಶವಾಗಿತ್ತು ಎಂದು ಅರೋಪಿಗಳು ಹೇಳಿದ್ದಾರೆ.
ಆಂದ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳ ಗಡಿಯ ಅರಣ್ಯ ಪ್ರದೇಶದಲ್ಲಿ ಹೇರಳವಾಗಿ ಬೆಳೆಯಲಾಗುತ್ತಿದೆ. ಪ್ರಸ್ತುತ ಪ್ರದೇಶಗಳಲ್ಲಿ ಮಾವೂವಾದಿ ಸಂಘಟನೆಗಳ ಕಾರ್ಯ ಚಟುವಟಿಕೆಗಳು ಸಹ ನಡೆಯುತಿದೆ. ಸ್ಥಳಕ್ಕೆ ಭೇಟಿ ನೀಡುವುದು ಕಷ್ಟಸಾದ್ಯವಾಗಿದೆ. ಬೆಟ್ಟದ ಪ್ರದೇಶಗಳಲ್ಲಿ ವಾಸ ಮಾಡುವ ನಿವಾಸಿಗಳನ್ನು ಗುರಿಯಾಗಿಸಿಕೊಂಡು ಕ್ರಿಷಿ ಮಾಡಲು ಬಳಸಲಾಗುತ್ತಿದೆ. ಇಡುಕ್ಕಿ, ತ್ರಿಶೂರ್ ಕೊಯಿಕೊಡ್, ಮಲ್ಲಪುರಂ, ಕೊಲ್ಲಂ ವಯನಾಡ್ ಜಿಲ್ಲೆಗಳ ಕೇರಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಗಾಂಜಾ ಕ್ರಿಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ಇದೆ ಇವರಿಗೆ ಕೇರಳ ರಾಜ್ಯ ಸೇರಿದಂತೆ ಸನೀಹದ ರಾಜ್ಯಗಳಲ್ಲಿಯು ನಂಟಿದೆ. ಪ್ರಕರಣದ ರೂವಾರಿಗಾಗಿ ಇಲಾಖೆಯು ಬಲೆಬಿಸಿದೆ ಅತಿ ಶೀಘ್ರದಲ್ಲಿ ಬಂಧನವಾಗುವ ನೀರಿಕ್ಷೆ ಇಲಾಖೆಗಿದೆ. ಕೇರಳ ರಾಜ್ಯದಲ್ಲೇ ಬೃಹತ್ ಪ್ರಮಾಣದಲ್ಲಿ ಗಾಂಜಾ ವಶಕ್ಕೆ ಪಡೆದಿರುವ ಎರಡನೇಯ ಪ್ರಕರಣವಾಗಿದೆ. ರಾಜ್ಯದ ಎಲ್ಲಡೆ ಪಸರಿಸಿರುವ ಗಾಂಜಾ ಪ್ರಕರಣಗಳನ್ನು ದಮನ ಮಾಡಲು ಇಲಾಖೆಯು ಸಿದ್ದವಾಗಿದೆ. ಈ ಪ್ರಕರಣವು ಅಂತರ್ ರಾಜ್ಯದ ಪ್ರಕರಣವಾಗಿರುವುದರಿಂದ ತನಿಖೆ ಮುಂದೆ ಸಾಗಲು ಕಾಲಾವಕಶಗಳು ಬೇಕಾಗಿದೆ ಸನೀಹದ ರಾಜ್ಯದ ಆರಕ್ಷಕ ಮತು ಇತರ ಇಲಾಖೆಗಳು ಸಹಾಯ ಮಾಡುತ್ತದೆ ಎಂಬ ಭರವಸೆ ಇಲಾಖೆಗಿದೆ ಎಂದು ಮಾದ್ಯಮ ಪ್ರತಿನಿಧಿಗಳ ಮುಂದೆ ಹೇಳಿಕೆ ನೀಡಿದರು.
ಅಬಕಾರಿ ಕಾನೂನು ಮತ್ತು ಜಾರಿ ಇಲಾಖೆಯ ಇರಿಟ್ಟಿ ವಲಯದ ವೃತ್ತ ನೀರಿಕ್ಷಕರಾದ ಕೃಷ್ಣ ಕುಮಾರ್ ಉಪನೀರಿಕ್ಷಕರುಗಳಾದ ಕೆ.ವಿ ವಿನೋದ್, ಟಿ.ಆರ್, ಮುಖೇಶ್ ಕುಮಾರ್. ಆರ್.ಜೆ ರಾಜೇಶ್, ಎಸ್ ಮಧುಸೂದನನ್ ನಾಯರ್,ಸಿಬ್ಬಂದಿಗಳಾದ ಪ್ರಜೋಶ್ ಕುಮಾರ್, ಮುಸ್ತಫಾ ಮತ್ತು ಕೇರಳ ಆರಕ್ಷಕ ಇಲಾಖೆ ಇರಿಟ್ಟಿ ವಲಯ ಡಿವೈಎಸ್ಪಿ ಪ್ರದೀಪನ್ ಕನ್ನಿಪೊಯಿಲ್, ವೃತ್ತ ನೀರಿಕ್ಷಕರುಗಳಾದ ಜೆ. ನಿನೋಯ್ ಮತ್ತು ಉಪನಿರಿಕ್ಷಕರುಗಳಾದ ದಿನೇಶ್ ಕೊತೇರಿ ಹಾಗೂ ಸಿಬ್ಬಂದಿಗಳು ಅರೋಪಿಗಳ ಬಂದನದ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.